ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಕೋಟ್ಯಂತರ ಮನಸ್ಸುಗಳನ್ನು ಗೆದ್ದ ಪುಟ್ಟಿ ರಕ್ಷಿತಾಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

Rakshitha Shetty: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿ ಫ್ಯಾನ್ಸ್‌ ಅಂದುಕೊಂಡಂತೆ ಟ್ರೋಫಿ ಗೆದ್ದಿದ್ದಾರೆ ಮಾತಿನ ಮಲ್ಲ. ಇನ್ನು ರಕ್ಷಿತಾ ಅವರು ರನ್ನರ್‌ ಅಪ್‌ ಆದರು. ಈ ಸೀಸನ್​​ನಲ್ಲಿ ರನ್ನರ್ ಅಪ್ ಆದ ರಕ್ಷಿತಾ ಅವರಿಗೂ ಸಹ ದೊಡ್ಡ ಮೊತ್ತವೇ ಬಹುಮಾನವಾಗಿ ದೊರೆತಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada Season 12) ಗ್ರ್ಯಾಂಡ್‌ ಫಿನಾಲೆ (Grand Finale) ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್‌ ವಿನ್ನರ್‌ (Gilli Nata Winner) ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿ ಫ್ಯಾನ್ಸ್‌ (Gilli Fans) ಅಂದುಕೊಂಡಂತೆ ಟ್ರೋಫಿ ಗೆದ್ದಿದ್ದಾರೆ ಮಾತಿನ ಮಲ್ಲ. ಇನ್ನು ರಕ್ಷಿತಾ ಅವರು ರನ್ನರ್‌ ಅಪ್‌ ಆದರು. ಈ ಸೀಸನ್​​ನಲ್ಲಿ ರನ್ನರ್ ಅಪ್ ಆದ ರಕ್ಷಿತಾ ಅವರಿಗೂ ಸಹ ದೊಡ್ಡ ಮೊತ್ತವೇ ಬಹುಮಾನವಾಗಿ ದೊರೆತಿದೆ.

ವಿನ್ನರ್ ಘೋಷಣೆ ಮಾಡುವ ಮುಂಚೆ ಸುದೀಪ್ ಅವರು ರಕ್ಷಿತಾ ಬಳಿ, 50 ಲಕ್ಷ ಗೆದ್ದರೆ ಏನು ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ರಕ್ಷಿತಾ 20 ಹಸು ಖರೀದಿ ಮಾಡುತ್ತೀನಿ ಎಂದರು. ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಅದಾದ ಬಳಿಕ ಜಾರ್ ಅಪ್ಲಿಕೇಶನ್​​ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು.

ಗಿಲ್ಲಿಗೆ ಸಿಕ್ಕಿದ್ದೇನು?

ಗಿಲ್ಲಿ ನಟಗೆ ವಿನ್ನಿಂಗ್ ಅಮೌಂಟ್ ಆಗಿ 50 ಲಕ್ಷ ರೂಪಾಯಿ ಸಿಕ್ಕಿದೆ. ವಿನ್ನರ್ ಗಿಲ್ಲಿಗೆ ಸುಮಾರು 20 ಲಕ್ಷ ರೂಪಾಯಿಯ ಕಾರು ಉಡುಗೊರೆಯಾಗಿ ಸಿಗುತ್ತಿದೆ. ಈ ಬಾರಿಯ ಬಿಗ್ ಬಾಸ್​ಗೆ ಮಾರುತಿ ಸುಜುಕಿ ಕೂಡ ಸ್ಪಾನ್ಸರ್ ಆಗಿತ್ತು. ಅವರ ಕಡೆಯಿಂದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ವಿಜೇತರಿಗೆ ಸಿಕ್ಕಿದೆ.



ಆರಂಭದಲ್ಲೇ ರಕ್ಷಿತಾ ಶೆಟ್ಟಿ ಅವರನ್ನ ಅಶ್ವಿನಿ ಗೌಡ ಹಾಗೂ ಜಾಹ್ನವಿ ಟಾರ್ಗೆಟ್ ಮಾಡಿದರು. ಗೆಜ್ಜೆ ಮ್ಯಾಟರ್‌ನಲ್ಲಿ ರಕ್ಷಿತಾ ಶೆಟ್ಟಿ ಅವರನ್ನ ಬಕ್ರಾ ಮಾಡಲು ಮುಂದಾದರು. ಈ ಘಟನೆಯಲ್ಲಿ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಆಕ್ಷೇಪಾರ್ಹ ಪದಗಳನ್ನ ಬಳಸಿದ್ದರು. ಅದು ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಬಹುದೊಡ್ಡ ಹೊಡೆತ ಬಿತ್ತು. ಇದೇ ಘಟನೆಯಿಂದ ರಕ್ಷಿತಾ ಶೆಟ್ಟಿಗೆ ದೊಡ್ಡ ಮಟ್ಟದಲ್ಲಿ ಸಿಂಪಥಿ ಕ್ರಿಯೇಟ್ ಆಯ್ತು.

ಇದನ್ನೂ ಓದಿ: Bigg Boss Kannada 12 Finale: ಬಿಗ್‌ಬಾಸ್‌ ಹೌಸ್‌ ಬಳಿ ಮುಗಿಲುಮುಟ್ಟಿದ ಗಿಲ್ಲಿ ಅಭಿಮಾನಿಗಳ ಸಂಭ್ರಮ; ಪಟಾಕಿ ಸಿಡಿಸಿ, ಸಿಹಿ ಹಂಚಿಕೆ

ಧ್ರುವಂತ್‌ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್‌ ಮಾಡಿ, ಹೊರಗೆ ಕಳುಹಿಸಲಾಗಿತ್ತು. ಆದರೆ ಉಳಿದ ಸದಸ್ಯರಿಗೆ ಗೊತ್ತಿಲ್ಲದಂತೆ ಅವರಿಬ್ಬರನ್ನು ಸೀಕ್ರೆಟ್‌ ರೂಮ್‌ಗೆ ಕಳುಹಿಸಿದ್ದರು ಬಿಗ್‌ ಬಾಸ್‌. ಬಹಳ ಸೀಸನ್‌ಗಳ ಬಳಿಕ ಈ ಟಾಸ್ಕ್‌ ಮಾಡಿಸಲಾಗಿತ್ತು. ಆದರೆ ಧ್ರುವಂತ್ ಜೊತೆಗೆ ಇರಲಾರದೇ, ವಾಪಸ್‌ ಬಿಗ್‌ ಬಾಸ್‌ ಮನೆಗೆ ಕಳುಹಿಸಿ ಎಂದು ಗೋಳಾಡಿದ್ದರು ರಕ್ಷಿತಾ. ಆದರೂ ಛಲ ಬಿಡದ ರಕ್ಷಿತಾ ಅಲ್ಲಿಯೂ ತಮ್ಮನ್ನು ತಾವು ಪ್ರೂವ್‌ ಮಾಡಿಕೊಂಡಿದ್ದರು.

Yashaswi Devadiga

View all posts by this author