ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಅನೇಕ ಸ್ಪರ್ಧಿಗಳು ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಾವ್ಯ (Kavya Shaiva) ಅವರೇ ಗಿಲ್ಲಿ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಅಷ್ಟೇ ಅಲ್ಲ ರಜತ್ ಹಾಗೂ ಧ್ರುವಂತ್ ನಡುವೆ ಮಾರಾಮಾರಿ ಆಗಿದೆ. ಧ್ರುವಂತ್ (Dhruvanth) ಮೇಲೆ ರಜತ್ ಹರಿಹಾಯ್ದಿದ್ದಾರೆ. ಕಾವ್ಯ ಕೊಟ್ಟ ಕಾರಣವಾದ್ರೂ ಏನು?
ಕಾವ್ಯ ನಾಮಿನೇಶನ್ ಲಿಸ್ಟಿನಲ್ಲಿ ಗಿಲ್ಲಿ ಹಾಗೂ ರಜತ್!
ಕಾವ್ಯ ಅವರು ರಜತ್ ಹಾಗೂ ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಾರೆ. ʻಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೊ ಅನ್ನಿಸುತ್ತಿದೆʼ ಎಂದಿದ್ದಾರೆ. ಅದಕ್ಕೆ ರಜತ್ ಕೋಪಗೊಂಡು, ʻತಮಾಷೆನೇ ಮಾಡಬಾರದಾ? ಈ ಮನೆಯಲ್ಲಿ? ತಲೆ ಏನಾದರೂ ಕೆಟ್ಟು ಹೋಗಿದ್ಯಾʼ ಅಂತ ಕೂಗಾಡಿದ್ದಾರೆ. ಅದೇ ವೇಳೆಗೆ ಧ್ರುವಂತ್ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ.
ಅದೇ ವೇಳೆಗೆ ಧ್ರುವಂತ್ ಅವರು ರಜತ್‌ಗೆ ಇದೇನು ಲಾಸ್ಟ್ ಸೀಸನ್ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ ಎಂದಿದ್ದಾರೆ. ರಜತ್‌ಗೆ ಇದು ಕೋಪ ತರಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಧ್ರುವಂತ್ ಮೇಲೆ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: Bigg Boss Kannada 12 : ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್! ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ ಈಗ ಎಷ್ಟಾಗಿದೆ?
ಕಲರ್ಸ್ ಕನ್ನಡ ಪ್ರೋಮೋ
ಇದೀಗ ಕಾವ್ಯ ನಡೆಗೆ ಬೇಸರ ಹೊರ ಹಾಕುತ್ತಿದ್ದಾರೆ ನೆಟ್ಟಿಗರು.ಕಾವ್ಯ, ಕಾವ್ಯ, ಕಾವ್ಯ . ಅವನು ನಿನ್ನನ್ನು ಫೈನಲ್ ಗೆ ಕರ್ಕೊಂಡು ಹೋಗ್ಬೇಕು ಅಂತ ಇದ್ದಾನೆ ಆದರೆ ನೀನು ಅವನನ್ನು ಮನೆಗೆ ಕಳಿಸಬೇಕು ಅಂತ ಇದ್ದೀಯ . ನಾ ಕಂಡ ಕಾವ್ಯ ಪುಸ್ತಕದಲ್ಲಿ ಕಾವ್ಯಾಗಿಂತ ಗಿಲ್ಲಿನೇ ಜಾಸ್ತಿ ಇದ್ದಾನೆ. ಹೇಳಬೇಕು ಅನ್ನಿಸ್ತು ಹೇಳಿದೆ ಅಂತ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಗಿಲ್ಲಿ ಹಿಂದೆಯೇ ಮಾತನಾಡಿದ ಕಾವ್ಯ!
ಬಿಗ್ ಬಾಸ್ ಮನೆಯಲ್ಲಿ ಕುಚಿಕು ಅಂತಿದ್ದ ರಘು ಹಾಗೂ ಗಿಲ್ಲಿ ಈಗ ದೂರವಾಗಿದ್ದಾರೆ. ರಘು ಅವರಿಗೆ ಗಿಲ್ಲಿಯ ಮಾತುಗಳು ಇಷ್ಟ ಆಗುತ್ತಿಲ್ಲ. ಆಗಾಗ ರಘು ಅವರು ಕಿಚನ್ ರೂಂಗೆ ಮಾತ್ರ ಸೀಮಿತ ಅಂತ ಗಿಲ್ಲಿ ಹೇಳುವ ಮಾತು ಅವರಿಗೆ ನೋವು ತರಿಸಿದೆ. ಈ ವೇಳೆ ಗಿಲ್ಲಿಯ ಹಿಂದೆಯೇ ಗಿಲ್ಲಿ ಬಗ್ಗೆ ಆಪ್ತ ಗೆಳೆಯರು ಮಾತನಾಡಿದ್ದಾರೆ. ಕಾವ್ಯ ಕೂಡ ಗಿಲ್ಲಿ ಬಗ್ಗೆಯೇ ಮಾತನಾಡಿದ್ದಾರೆ.
ರಘು ಮೊದಲಿಗೆ ಮಾತನಾಡಿ, ʻನನ್ನ ಪರ್ಸನಾಲಿಟಿ ಚೇಂಜ್ ಮಾಡ್ತಾ ಇದ್ದಾರೆ. ಗಿಲ್ಲಿ ಕೂಡ ಬುಕ್ ಅನ್ನೋ ಟಾಸ್ಕ್‌ನಲ್ಲಿ ಮಾತನಾಡಿದ ರೀತಿ ತಲೆ ಕೆಟ್ಟು ಹೋಗೋ ಥರ ಮಾಡಿತು, ಡ್ರಾವ್ ಬ್ಯಾಕ್ ಆಗಿ ಬಿಡೋಣ ಅನ್ನಿಸುತ್ತೆʼ ಎಂದರು. ಅದಕ್ಕೆ ಕಾವ್ಯ ಇದ್ದವರು,ʻ ನೀವು ಒಂದು ಶೋ ವಿನ್ನರ್. . ನಾನು ಯಾಕೆ ಕುಕ್ ಮಾಡಲಿ ಅಂತ ಇದ್ದಿದ್ದರೆ ಹಾಗಿದ್ರೆ ಆ ಶೋಗೆ ನೀವು ಹೋಗೋ ಹಾಗೇ ಇರಲಿಲ್ಲ. ನನ್ನ ಪರ್ಸನಾಲಿಟಿ ಅಂತ ಇದ್ದರೆ ʼಎಂದಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬೆನ್ನ ಹಿಂದೆಯೇ ಗಿಲ್ಲಿ ಬಗ್ಗೆ ಮಾತಾಡಿದ ಆಪ್ತ ಗೆಳೆಯರು! ಕಾವು ಹೇಳಿದ್ದೇನು ಗೊತ್ತಾ?
ಇನ್ನು ಸೂರಜ್ ಕೂಡ ʻನೀವು ಒಂದು ಕಡೆ ಶೆಫ್ ಅಂತ ಪ್ರೂವ್ ಆದಾಗ ಯಾವತ್ತೂ ಯಾರೆ ಅಂದರೂ ತೆಲೆ ಕೆಡಿಸಿಕೊಳ್ಳಬಾರದುʼ ಎಂದಿದ್ದಾರೆ.