Bigg Boss Kannada 12: ಕ್ಯಾಪ್ಟನ್ ಆಗ್ತಾರಾ ಚೈತ್ರಾ? ವಿಲನ್ ಡೀಲ್‌ಗೆ ಸ್ಪಂದನ ತತ್ತರ!
Chaithra: ಬಿಗ್ ಬಾಸ್ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್ ಮಾಡ್ತಾ ಇರೋದು ಬಿಗ್ ಬಾಸ್ ಅಲ್ಲ, ವಿಲನ್ ಅಂತ ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ. ಸ್ಪಂದನಾಗೆ ಫಿಸಿಕಲ್ ಟಾಸ್ಕ್ ಆಡಲು ಹಿಂದಿನ ವಾರ ಆಗಿರಲಿಲ್ಲ. ಆಗ ಚೈತ್ರಾ ಸಹಾಯಕ್ಕೆ ಬಂದರು. ಈಗ ವಿಲನ್ ಒಂದು ಡೀಲ್ ನಡೆಸಿದೆ. ಏನದು?
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್ ಮಾಡ್ತಾ ಇರೋದು ಬಿಗ್ ಬಾಸ್ ಅಲ್ಲ, ವಿಲನ್ ಅಂತ ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ. ಸ್ಪಂದನಾಗೆ (Spandana somanna) ಫಿಸಿಕಲ್ ಟಾಸ್ಕ್ ಆಡಲು ಹಿಂದಿನ ವಾರ ಆಗಿರಲಿಲ್ಲ. ಆಗ ಚೈತ್ರಾ ಸಹಾಯಕ್ಕೆ ಬಂದರು. ಈಗ ವಿಲನ್ ಒಂದು ಡೀಲ್ (deel) ನಡೆಸಿದೆ. ಏನದು?
ಬಿಗ್ ಬಾಸ್ ಹೇಳಿದ್ದೇನು?
ʻಚೈತ್ರಾ ಅವರೇ, ಸ್ಪಂದನಾ ವಾರವೀಡಿ ರೆಸ್ಟ್ ಮಾಡಿ, ನೀವು ಆಟ ಆಡಿ ಗೆದ್ದು, ಈಗ ಅವರು ಮನೆಯ ಕ್ಯಾಪ್ಟನ್. ನೀವು ಮನೆ ಕೆಲಸದವರಾ? ಕ್ಯಾಪ್ಟನ್ ಬೆಡ್ ರೂಮ್ ಈಗಲೇ ಓಪನ್ ಆಗತ್ತೆ. ಕ್ಯಾಪ್ಟನ್ಸಿ ನಿಮ್ಮದಾಗತ್ತೆ. ಸ್ಪಂದನಾ ಎಲ್ಲವನ್ನೂ ಕಳೆದುಕೊಂಡು ನೀವು ಇರೋ ಪೊಸಿಷನ್‌ಗೆ ಬರ್ತಾರೆ ಎಂದಿದ್ದಾರೆʼ ಬಿಗ್ ಬಾಸ್. ಇದಕ್ಕೆ ಒಪ್ಪಿಗೆ ಇದ್ರೆ ಎಲ್ಲೋ ಬಜರ್ ಒತ್ತಿ ಅಂತ ವಿಲನ್ ಹೇಳಿದೆ. ಈ ಡೀಲಿಗೆ ಚೈತ್ರಾ ಉತ್ತರ ಏನು? ಚೈತ್ರಾ ಮನೆಯ ಮುಂದಿನ ಕ್ಯಾಪ್ಟನ್ ಆಗ್ತಾರಾ ಅನ್ನೋದೆ ಕುತೂಹಲ.
ಇದನ್ನೂ ಓದಿ: Bigg Boss Kannada 12: ಕಾವು ಪಾಲಿಗೆ ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?
ಕಳೆದ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ ಅವರು ಭೂತದ ವಿಚಾರಕ್ಕೆ ಸಖತ್ ಹೆದರುಕೊಂಡಿದ್ದರು. ಈಗಲೂ ಚೈತ್ರಾ ನಡುಗಿದ್ದಾರೆ. ಇಡೀ ಮನೆಯೇ ಈಗ ಭೂತದ ಮನೆಯಾಗಿದೆ. ಈ ಪ್ರೋಮೋ ವೈರಲ್ ಆಗುತ್ತಿದೆ.
ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದ್ದು ಸ್ಪಂದನಾಗೆ
ಈ ವಾರ ಸ್ಪಂದನಾ ಅವರು ಕಾಲು ಪೆಟ್ಟು ಮಾಡಿಕೊಂಡಿದ್ದಕ್ಕೆ, ಸ್ಪಂದನಾ ಸೋಮಣ್ಣ ಅವರ ಬದಲು ಬೇರೆಯವರು ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದಿತ್ತು. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ಚೈತ್ರಾ ಕುಂದಾಪುರ ಅವರು ಸ್ಪಂದನಾ ಬದಲಿಗೆ ಅಭಿಷೇಕ್ ಶ್ರೀಕಾಂತ್ ಜೊತೆ ಆಟ ಆಡಿದರು, ಗೆದ್ದರು. ಆಟ ಆಡಿದ್ದು ಚೈತ್ರಾ ಆದರೆ, ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದ್ದು ಸ್ಪಂದನಾಗೆ.
ಕಲರ್ಸ್ ಕನ್ನಡ ಪ್ರೋಮೋ
ಈಗ ಬಿಗ್ ಬಾಸ್ ಹೇಳಿದ ಮಾತು ಕೇಳಿ ರಜತ್ ಅವರಂತೂ ಸಖತ್ ಟ್ವಿಸ್ಟ್ ಎಂದಿದ್ದಾರೆ. ವಿಲನ್ ಬಿಗ್ ಬಾಸ್ ಹೇಳಿದಂತೆ ಚೈತ್ರಾ ಓಕೆ ಎಂದರೆ ಸ್ಪಂದನಾ ಸ್ಥಾನದಲ್ಲಿ ಚೈತ್ರಾ ಕೂರಬಹುದು. ಓಕೆ ಹೇಳಿದರೆ ಸ್ಪಂದನಾ ಕಣ್ಣಿನಲ್ಲಿ ಅಥವಾ ಬೇರೆಯವರ ಕಣ್ಣಲ್ಲಿ ಚೈತ್ರಾ ಸ್ವಾರ್ಥಿಯಾಗಬಹುದು.
ಮತ್ತಷ್ಟು ಗಲಾಟೆ, ವಿವಾದ
ಈ ಹಿಂದೆ ಸೀಸನ್ 10ರಲ್ಲಿ ರಾಕ್ಷಸರು-ಗಂಧರ್ವರು ಎಂದು ಗುಂಪುಗಳನ್ನಾಗಿ ವಿಂಗಡಿಸಿದ್ದು ಜಗಳಗಳಿಗೆ ಸರಿಯಾದ ವೇದಿಕೆಯನ್ನೇ ಒದಗಿಸಲಾಗಿತ್ತು. ಕಾರ್ತಿಕ್ ಅವರು ಸಖತ್ ಆಗಿಯೇ ಟಾಸ್ಕ್ ನಿಭಾಯಿಸಿದ್ದರು. ಇದೀಗ ಇಂದಿನಿಂದ ಸ್ಪರ್ಧಿಗಳ ಮಧ್ಯೆ ಮತ್ತಷ್ಟು ಗಲಾಟೆ, ವಿವಾದ ನಡೆದೇ ನಡಯುತ್ತೆ ಎನ್ನುವುದು ವೀಕ್ಷಕರ ಅಭಿಪ್ರಾಯ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!
ಆರಂಭದಿಂದಲೂ ತಮ್ಮ ಒಳ್ಳೆಯತನದಿಂದ ಸೆಳೆದಿದ್ದ ಅಭಿಷೇಕ್ ಅವರು ಈ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಭಿಷೇಕ್ ಅವರು ಈ ವಾರ ಚೆನ್ನಾಗಿ ಆಟವಾಡಿ ಎರಡನೇ ಬಾರಿ ಕ್ಯಾಪ್ಟನ್ ಸಹ ಆಗಿದ್ದರು.