ವೀಕೆಂಡ್ ಬಂತು ಅಂದರೆ ಬಿಗ್ ಬಾಸ್ (Bigg Boss Kannada 12) ಪ್ರಿಯರು ಕಾಯೋದು ಕಿಚ್ಚನ ಪಂಚಾಯ್ತಿಗೆ. ಶನಿವಾರ ಹಾಗೂ ಭಾನುವಾರ ಕಿಚ್ಚನ ಪಂಚಾಯ್ತಿ (Sudeep), ಅವರ ಲುಕ್, ಅವರ ಮಾತುಗಳನ್ನು ಕೇಳಲು ಕಾಯುತ್ತಿರುತ್ತಾರೆ. ಆದರೀಗ ಸುದೀಪ್ ಅವರು ಒಂದು ಅನೌನ್ಸ್ ಮಾಡಿದ್ದಾರೆ. ಬಿಗ್ ಬಾಸ್ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಈ ವಾರ ಕಿಚ್ಚ ಸುದೀಪ್ ಅವರ ನಿರೂಪಣೆ ಇರುವುದಿಲ್ಲ. ಸ್ವತಃ ಕಿಚ್ಚ ಅವರೇ ಈ ಬಗ್ಗೆ ರಿವೀಲ್ ಮಾಡಿದ್ದಾರೆ.
ಡಿಸೆಂಬರ್ 25ರಂದು ತೆರೆಗೆ
ಗೊತ್ತಿರುವಂತೆ ಮಾರ್ಕ್ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಟ ʻಕಿಚ್ಚʼ ಸುದೀಪ್ ಅವರ ʻಮಾರ್ಕ್ʼ ಸಿನಿಮಾವು ಇದೇ ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಗ್ರ್ಯಾಂಡ್ ಆಗಿ ಬಹುಭಾಷೆಯಲ್ಲಿ ತೆರೆಗೆ ತರುವುದಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈ ನಡುವೆ ಹುಬ್ಬಳ್ಳಿಯಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಈಗಾಗಲೇ ಮಾಡಿದೆ.
ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ
ಇದರ ಮಧ್ಯೆಯೂ ಅವರು ಕಳೆದ ವಾರ ಬಿಗ್ ಬಾಸ್ ನಿರೂಪಣೆ ಮಾಡಿದ್ದರು. ಕಳೆದ ವಾರ ‘ಮಾರ್ಕ್ ಪ್ರೀ ರಿಲೀಸ್ ಈವೆಂಟ್ನಲ್ಲಿ ಭಾಗಿ ಆಗಬೇಕಿರುವ ಕಾರಣ ಶುಕ್ರವಾರವೇ ಬಿಗ್ ಬಾಸ್ ಎಪಿಸೋಡ್ ಚಿತ್ರೀಕರಣ ನಡೆದಿತ್ತು. ನನ್ನ ಸಿನಿಮಾ ರಿಲೀಸ್ ಇರುವುದರಿಂದ, ನಾನು ಪ್ರಮೋಷನ್ ಅಲ್ಲಿ ಬ್ಯುಸಿ ಇರ್ತೀನಿ. ಬಿಗ್ ಬಾಸ್ ಹೇಗೆ ಮುಖ್ಯವೋ ನಾನು ಮಾಡಿದ ಸಿನಿಮಾ ಕೂಡ ಮುಖ್ಯ. ನನ್ನ ತಂಡಕ್ಕೆ ನನ್ನ ಅಗತ್ಯವಿದೆ. ಹೀಗಾಗಿ ಡಿಸೆಂಬರ್ 27-28 ನಾನು ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!
ಸತ್ಯಜ್ಯೋತಿ ಫಿಲ್ಮ್ಸ್ 39 ವರ್ಷಗಳ ನಂತರ ಕನ್ನಡದಲ್ಲಿ ಮಾರ್ಕ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು, ನಿಶ್ವಿಕಾ ನಾಯ್ಡು, ರೋಶಿಣಿ ಪ್ರಕಾಶ್, ಅಶ್ವಿನ್ ಹಾಸನ್, ಮಹಾಂತೇಶ್ ಹಿರೇಮಠ್ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವನ್ನು ನೀಡಿದ್ದಾರೆ.
'ಮಾರ್ಕ್' ಸಿನಿಮಾ ವಿತರಣೆ
'ಮಾಕ್ಸ್' ಸಿನಿಮಾ ಮೂಲಕ ಕಿಚ್ಚ ಸುದೀಪ್ ದಾಟಿಯನ್ನು ಬದಲಿಸಿದ್ದಾರೆ. ಕೇವಲ ಸಂಭಾವನೆ ತೆಗೆದುಕೊಂಡು ಸಿನಿಮಾ ಮಾಡುತ್ತಿಲ್ಲ. ಸಂಭಾವನೆ ಜೊತೆಗೆ ಅವರು ನಟಿಸುವ ಸಿನಿಮಾದಲ್ಲಿ ಹೂಡಿಕೆ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
ಈಗ ಅದರ ಬಗ್ಗೆ ಇನ್ನೊಂದು ಹೆಜ್ಜೆಯನ್ನೂ ಮುಂದಿಟ್ಟಿದ್ದಾರೆ.ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಸಾನ್ವಿ 'ಮಾರ್ಕ್' ಸಿನಿಮಾವನ್ನು ವಿತರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇವರೊಂದಿಗೆ ಕೆಆರ್‌ಜಿ ಸ್ಟುಡಿಯೋ ಕೈ ಜೋಡಿಸುತ್ತಿದೆ. ಕರ್ನಾಟಕದಲ್ಲಿ ಕೆಆರ್‌ಜಿ ಜೊತೆಯಲ್ಲಿ ಜೊತೆಗೂಡಿ ವಿತರಣೆಯನ್ನು ಮಾಡುತ್ತಿದ್ದಾರೆ.