ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

Rajath Chithra: ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವಾರ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ಸ್ಪಂದನಾ, ಮಾಳು ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಆದರೆ ಈಗ ಚೈತ್ರಾ ರಜತ್‌ ಔಟ್‌ ಆಗಿದ್ದಾರೆ. ಈ ಇಬ್ಬರು ವೈಲ್ಡ್ ಕಾರ್ಡ್ಸ್ಪ ರ್ಧಿ ಅಲ್ಲ ಎಂಬ ಮಾಹಿತಿ ಮುಂಚೆಯೇ ಹರಿದಾಡಿತ್ತು.

ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 22, 2025 7:09 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (Bigg Boss Kannada 12) ಸಾಕಷ್ಟು ತಿರುವುಗಳು ಬಂದಿವೆ. ಕಳೆದ ವಾರ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಫೇಕ್ ಎಲಿಮಿನೇಷನ್​ ಅಲ್ಲಿ ಹೊರಗೆ ತಂದು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ಧ್ರುವಂತ್ (Dhruvanth) ಹಾಗೂ ರಕ್ಷಿತಾ ಶೆಟ್ಟಿ (Rakshitha shetty) ಸೀಕ್ರೆಟ್ ರೂಮ್​​ ನಿಂದ ನಿನ್ನೆ ಹೊರಗೆ ಬಂದಿದ್ದರು. ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವಾರ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ಸ್ಪಂದನಾ, ಮಾಳು ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಆದರೆ ಈಗ ಚೈತ್ರಾ ರಜತ್‌ (Chaithra Rajath) ಔಟ್‌ ಆಗಿದ್ದಾರೆ. ಈ ಇಬ್ಬರು ವೈಲ್ಡ್ ಕಾರ್ಡ್ (Wild card Entry) ಸ್ಪರ್ಧಿ ಅಲ್ಲ ಎಂಬ ಮಾಹಿತಿ ಮುಂಚೆಯೇ ಹರಿದಾಡಿತ್ತು. ಈ ವಾರವೂ ಯಾವುದೇ ಎಲಿಮಿನೇಷನ್ ಮಾಡಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವಿವಿಧ ರೀತಿ ಟಾಸ್ಕ್‌ಗಳನ್ನೆ ಕೊಟ್ಟಿದ್ದಾರೆ. ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ವೋಟಿಂಗ್‌ ಈ ವಾರವೂ ಓಪನ್‌ ಆಗಿಲ್ಲ. ಬಿಗ್‌ ಬಾಸ್‌ ಮನೆಗೆ ಎರಡು ವಾರಗಳ ಹಿಂದೆ 5 ಮಂದಿ ಕಳೆದ ಸೀಸನ್‌ನ ಸ್ಪರ್ಧಿಗಳು ಎಂಟ್ರಿ ನೀಡಿದ್ದರು. ಅದರಲ್ಲಿ ಮಂಜು, ತ್ರಿವಿಕ್ರಮ್‌, ಮೋಕ್ಷಿತಾ ಪೈ ಒಂದು ವಾರ ಇದ್ದು ಹೊರಗೆ ಹೋದರು. ರಜತ್‌ ಮತ್ತು ಚೈತ್ರಾ ಕುಂದಾಪುರ ಅವರನ್ನು ಮನೆಯೊಳಗೆ ಇರಿಸಿಕೊಳ್ಳಲಾಗಿತ್ತು. ಅವರನ್ನು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಎಂದು ಬಿಂಬಿಸಲಾಗಿತ್ತು.

ಅತಿಥಿಗಳಾಗಿ ಬಂದು ಬಿಗ್​​ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ, ಮನೆಯ ಸದಸ್ಯರೊಟ್ಟಿಗೆ ಆಟ ಆಡಿದ್ದಕ್ಕೆ ರಜತ್ ಮತ್ತು ಚೈತ್ರಾ ಅವರಿಗೆ ಧನ್ಯವಾದ ಹೇಳಿದರು ಸುದೀಪ್.

ಇದನ್ನೂ ಓದಿ: Bigg Boss Kannada 12: ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!

ರಜತ್‌ ಅವರು ಕಡಿಮೆ ಸಮಯದಲ್ಲಿಯೂ ಟಾಸ್ಕ್‌ನಲ್ಲಿ ತಮ್ಮನ್ನು ತಾವು ಪ್ರೂವ್‌ ಮಾಡಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದವರು ಚೈತ್ರಾ ಕುಂದಾಪುರ. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ 50 ದಿನಗಳಾದ್ಮೇಲೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟವರು ರಜತ್ ಕಿಶನ್.

ಗಿಲ್ಲಿ ಜೊತೆ ಚೆನ್ನಾಗಿಯೇ ಬಾಡಿಂಗ್‌ ಇತ್ತು. ಅಷ್ಟೇ ಅಲ್ಲ ಇರು ವಷ್ಟು ದಿನ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆ ನೀಡಿದ್ದಾರೆ.

ಚೈತ್ರಾ ಹಾಗೂ ರಜತ್‌ ಬಂದಾಗಿನಿಂದ ಆತ್ಮೀಯತೆಯಿಂದ ಆಡಿದ್ದರೂ ಬರಬರುತ್ತಾ ಚೈತ್ರಾ ವಿರುದ್ಧವೂ ರಜತ್‌ ಕೂಗಾಡಿದ್ದರು. ಚೈತ್ರಾ ಕುಂದಾಪುರ ಹಾಗೂ ರಜತ್‌ ಅವರು ಬೇರೆ ಬೇರೆ ಟೀಂನಲ್ಲಿ ಆಡಿದ್ದರು. ರಜತ್‌ ಅವರು ಅಶ್ವಿನಿ ಅವರಿಗೆ ಬಳಸಿದ ಪದ ಬಳಕೆ ಬಗ್ಗೆಯೂ ಚರ್ಚೆಗಳು ಆಗಿತ್ತು. ಸುದೀಪ್‌ ಈ ಬಗ್ಗೆ ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು.

ಕನ್ನಡದ ಬಿಗ್ ಬಾಸ್ ಸೀಸನ್‌ 12 ರಿಯಾಲಿಟಿ ಶೋ ಇನ್ನೇನು ಕೆಲ ದಿನಗಳಲ್ಲಿ ಫೈನಲ್‌ಗೆ ಹತ್ತಿರವಾಗುತ್ತಿದ್ದು, ಈ ಬಾರಿ ಯಾರು ಗೆಲ್ಲಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ. ವೀಕೆಂಡ್‌ನ್ಲಿ ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಸರಿಯಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Telugu 9: ಗ್ರ್ಯಾಂಡ್ ಫಿನಾಲೆಗೂ ಮುನ್ನ ಬಿಗ್ ಬಾಸ್ ಟ್ರೋಫಿಯ ಫಸ್ಟ್ ಲುಕ್ ಅನಾವರಣ!

ಮನೆಯಲ್ಲಿ ಕೆಲವೊಮ್ಮೆ ಸ್ಪರ್ಧಿಗಳು ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸುತ್ತಾರೆ ಎನ್ನುವ ಮೂಲಕ ಒಂದು ಸಣ್ಣ ಟಾಸ್ಕ್‌ ಸಹ ಸರಿಯಾಗ ಮಾಡದ ಕಾರಣ ಮನೆಯ ಕ್ಯಾಫ್ಟನ್‌ ಆಗಿದ್ದಂತಹ ಹಾಗೂ ಉಸ್ತುವಾರಿ ರಾಶಿಕಾ ಅವರಿಗೆ ಇದರ ವಿಚಾರವಾಗಿ ಮಾತನಾಡಿದ್ದಾರೆ.