ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: `ತ್ಯಾಗ ಮಾಡಿದ ತಕ್ಷಣ ಎಲ್ಲವೂ ಸತ್ಯ ಅಂತಲ್ಲ'; ಧನುಷ್‌ ಹೊಗಳಿ ಈ ವಾರ ಚಪ್ಪಾಳೆ ಕೊಟ್ಟ ಕಿಚ್ಚ

ಬಿಗ್​ಬಾಸ್​ನಲ್ಲಿ (Bigg Boss Kannada 12) ಕಿಚ್ಚನ ಚಪ್ಪಾಳೆಗಾಗಿ ಸ್ಪರ್ಧಿಗಳು ಕಾಯ್ತಿರುತ್ತಾರೆ. ಈ ವಾರ ಧನುಷ್​​ ಅವರು ಕಿಚ್ಚನ ಚಪ್ಪಾಳೆ (Kichchana Chappale) ಪಡೆದುಕೊಂಡಿದ್ದಾರೆ. ಅವರ ತ್ಯಾಗ ಹಾಗೂ ಸೈಲೆನ್ಸ್‌ ವಿಚಾರಕ್ಕೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದಾದರೂ ಒಂದು ತ್ಯಾಗ ಮಾಡಿದ ಮೇಲೆ ತುಂಬಾ ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ನೀವು ಹಾಗೆ ಮಾಡಲಿಲ್ಲ ಎಂದಿದ್ದಾರೆ ಕಿಚ್ಚ (Sudeep).

bigg boss kannada dhanush

ಈ ವಾರ ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ (Sudeep) ಅವರು ಅಶ್ವಿನಿ (Ashwini Gowda) ಅವರಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ರಕ್ಷಿತಾ ಅವರಿಗೆ ನ್ಯಾಯ ಒದಗಿಸಿದ್ದಾರೆ. ಅದರ ಜೊತೆಗೆ ಕಿಚ್ಚನ ಚಪ್ಪಾಳೆಯನ್ನ (Kichchana Chappale) ಕೂಡ ಅನೌನ್ಸ್‌ ಮಾಡಿದ್ದಾರೆ. ವೀಕ್ಷಕರು ಊಹಿಸಿರೋ ಸ್ಪರ್ಧಿಯೇ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ.

ಧನುಷ್‌ಗೆ ಕಿಚ್ಚನ ಚಪ್ಪಾಳೆ

ಬಿಗ್​ಬಾಸ್​ನಲ್ಲಿ ಕಿಚ್ಚನ ಚಪ್ಪಾಳೆಗಾಗಿ ಸ್ಪರ್ಧಿಗಳು ಕಾಯ್ತಿರುತ್ತಾರೆ. ಈ ವಾರ ಧನುಷ್​​ ಅವರು ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ. ಅವರ ತ್ಯಾಗ ಹಾಗೂ ಸೈಲೆನ್ಸ್‌ ವಿಚಾರಕ್ಕೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್‌ ಮೊದಲಿಗೆ ಲೆಟರ್‌ ವಿಚಾರವನ್ನು ಪ್ರಸ್ತಾಪಿಸಿದರು.

ತ್ಯಾಗ ಮಾಡಿದ ತಕ್ಷಣ ಎಲ್ಲವೂ ಸತ್ಯ ಅಂತಲ್ಲ!

ಕೆಲವೊಮ್ಮೆ ಇಲ್ಲಿ, ಅಂದರೆ ಹಿಂದಿನ ಸೀಸನ್‌ನಲ್ಲಿಯೂ ಈ ರೀತಿ ನಡೆದಿತ್ತು. ತ್ಯಾಗ ಮಾಡಿದ ತಕ್ಷಣ ಎಲ್ಲವೂ ಸತ್ಯ ಅಂತಲ್ಲ. ತ್ಯಾಗ ಮಾಡಿದ ತಕ್ಷಣ ಅವರು ತಪ್ಪು ಅಂತಲ್ಲ. ಕೆಲವೊಮ್ಮೆ ತ್ಯಾಗ ಮಾಡಿರೋದನ್ನ ಪದೇ ಪದೇ ಹೇಳಿಕೊಳ್ಳುವವರೂ ಇರ್ತಾರೆ.

ವೋಟ್‌ ಸಿಗಬೇಕು ಎನ್ನುವ ಕಾರಣವೂ ಇರಬಹುದು. ಅಂತಹದರಲ್ಲಿ ಎಲ್ಲಿಯೂ ಮಾತನಾಡದೇ, ತ್ಯಾಗ ಮಾಡಿರೋದನ್ನ ಕೂಡ ಹೇಳದೇ ಸೈಲೆಂಟ್‌ ಆಗಿ ಇದ್ದು, ವ್ಯಕ್ತಿತ್ವ ಗೆದ್ದಿರುವ ಧನುಷ್‌ ಅವರಿಗೆ ಕಿಚ್ಚನ ಚಪ್ಪಾಳೆ ಎಂದರು ಸುದೀಪ್‌.

ಇದನ್ನೂ ಓದಿ: BBK 12: ʻಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆʼ; ಮಾಳು ಖಡಕ್ ಮಾತು!



ಇಮ್ಯುನಿಟಿ ರೈಟ್ಸ್ ಕಳೆದುಕೊಂಡ ಧನುಷ್‌!

ಈ ಮನೆಯಲ್ಲಿ ಈ ವಾರ ನಾನು ನೋಡಿದ್ದು, ನಿಮ್ಮ ಸ್ಪರ್ಧಿಗೆ ಬಿಟ್ಟು ಕೊಟ್ಟಿರುವುದಾಗಿರಬಹುದು. ನೀವೊಬ್ಬ ಕ್ಯಾಪ್ಟನ್ ಆಗಿದ್ರಿ. ಕ್ಯಾಪ್ಟನ್ ಈ ಮನೆಯಲ್ಲಿ ಇರುವ ಇಮ್ಯುನಿಟಿ ರೈಟ್ಸ್​. ಅದನ್ನು ಸಾಮಾನ್ಯವಾಗಿ ಬಿಟ್ಟುಕೊಡೋದು ತುಂಬಾ ಕಷ್ಟ.

ಯಾವುದಾದರೂ ಒಂದು ತ್ಯಾಗ ಮಾಡಿದ ಮೇಲೆ ತುಂಬಾ ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ನೀವು ಹಾಗೆ ಮಾಡಲಿಲ್ಲ. ಈ ಕೈಯಲ್ಲಿ ಕೊಟ್ಟಿದ್ದು, ಮತ್ತೊಂದು ಕೈಗೆ ಗೊತ್ತಾಗದ ರೀತಿಯಲ್ಲಿ ನಡೆದುಕೊಂಡ್ರಿ. ಇದು ಇಷ್ಟವಾಯಿತು ಎಂದು ಕಿಚ್ಚ ಅವರು ಧನುಷ್‌ ಅವರನ್ನು ಹೊಗಳಿದ್ದಾರೆ.

ಚಂದ್ರಪ್ರಭಗೆ ಕ್ಲಾಸ್‌

ಚಂದ್ರಪ್ರಭ ಅವರು ಗಿಲ್ಲಿ ನಟ, ಕಾವ್ಯ ಶೈವ ಅವರ ಸ್ನೇಹವನ್ನು ಟಾರ್ಗೆಟ್‌ ಮಾಡಿ ಮಾತನಾಡಿದ್ದರು. ಎಲ್ಲ ವಿಚಾರದಲ್ಲಿಯೂ ನನ್ನ ತಂಗಿ ಕಾವ್ಯ ಶೈವ ಕರೆಕ್ಟ್‌ ಆಗಿ ಹೋಗ್ತಿದ್ದಾಳೆ ಅಂತ ನಾನು ಅಂದುಕೊಂಡಿದ್ದೆ. ಹಂಸ್, ಗುಂಡಿ ಎಲ್ಲಿ ಸಿಗ್ತಿದೆಯೋ ಅಲ್ಲಿ ಕರೆಕ್ಟ್‌ ಆಗಿ ಹೋಗ್ತಿದ್ದಾಳೆ ಅಂತ ಅಂದುಕೊಂಡಿದ್ದೆ. ಒಳ್ಳೆಯ ದಾರಿಯಲ್ಲಿ ಹೋಗ್ತಿದ್ದವಳಿಗೆ, ಗಾಡಿ ಓಡಿಸ್ಕೊಂಡು ಬರೋನು ಚೋಕ್‌ ಕೊಟ್ಟ ಅಂತ ಅವಳು ದಾರಿ ತಪ್ಪಿದಳು ಅಂತ ಅನಿಸುತ್ತದೆ ಎಂದಿದ್ದರು.

ಇದನ್ನೂ ಓದಿ: BBK 12: ಹಾಕೋ ಬನಿಯನ್‌ ಕೂಡ ಕಂಡವರದ್ದೇ, ಎಲ್ಲರನ್ನ ಗಿಲ್ಲಿ ತುಳಿತಿದ್ರು; ಡಾಗ್‌ ಸತೀಶ್‌ ಆರೋಪ

ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಮಾತನಾಡಿ, ನಡೆ ಹೇಗೆ ಇರುತ್ತೋ ನುಡಿಯೂ ಹಾಗೇ ಇರಬೇಕು ಎಂದು ಬುದ್ದಿವಾದ ಹೇಳಿದ್ದಾರೆ. ರಿಷಾ ಜೊತೆ ಚಂದ್ರಪ್ರಭ ಇರೋ ವಿಡಿಯೋ ಪ್ಲೇ ಮಾಡಿಸಿ ವಾರ್ನ್‌ ಜೊತೆ ಅರಿವು ಮೂಡಿಸಿದ್ದಾರೆ.

Yashaswi Devadiga

View all posts by this author