ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ? ಗಿಲ್ಲಿ ಸೀಕ್ರೆಟ್‌ ಮ್ಯಾಚ್‌ ಬಗ್ಗೆ ಸುದೀಪ್‌ ಕೆಂಡ!

ಗಿಲ್ಲಿ ನಟ (Bigg Boss Kannada Gilli) ಅವರು ಸಾಕಷ್ಟು ಕುತಂತ್ರ ಮಾಡಿದ್ದರು. ರಕ್ಷಿತಾನ (Rakshitha Shetty) ತಮ್ಮ ತಂಡದ ವಿರುದ್ಧವೇ ಎತ್ತಿ ಕಟ್ಟಿದ್ದರು. ಇದೇ ವಿಷಯ ಇಟ್ಟುಕೊಂಡು ಸುದೀಪ್ ಮಾತನಾಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಒಂದು ಟೀಂ ಆದರೆ, ಗಿಲ್ಲಿ ಮತ್ತೊಂದು ತಂಡದಲ್ಲಿ ಇದ್ದರು. ರಕ್ಷಿತಾ ತಂಡ ಗೆದ್ದಿತು. ಈ ಕಾರಣಕ್ಕೆ ಅವರ ತಂಡದ ಒಬ್ಬರನ್ನು ನಾಮಿನೇಷನ್​ನಿಂದ (Nomination) ಬಚಾವ್ ಮಾಡಬೇಕಿತ್ತು. ಈ ಬಗ್ಗೆ ಚರ್ಚೆ ಮಾಡಲು ಹೊರಡುವ ಮುನ್ನ ಗಿಲ್ಲಿ ಅವರು ರಕ್ಷಿತಾ ಶೆಟ್ಟಿ ಬಳಿ ಮಾತನಾಡುತ್ತಿರುತ್ತಿದ್ದರು. ಈ ಎಲ್ಲದರ ಬಗ್ಗೆ ಸುದೀಪ್‌ ಪ್ರಸ್ತಾಪಿಸಿದ್ದಾರೆ. ರಕ್ಷಿತಾ ಮೇಲೆ ಸಖತ್‌ ಗರಂ ಆಗಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಈ ವಾರ ಒಂದರ ಹಿಂದೊಂದು ಟಾಸ್ಕ್​​ಗಳು (Bigg Boss Kannada 12) ನಡೆದಿವೆ. ಎಲ್ಲ ಸ್ಪರ್ಧಿಗಳು ಸಹ ಟಾಸ್ಕ್​​ನಲ್ಲಿ ಆಡಲು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಶ್ರಮ ಪಟ್ಟಿದ್ದರು. ಅಶ್ವಿನಿ (Ashwini Gowda) ತಂಡದಲ್ಲಿ ರಕ್ಷಿತಾ ಶೆಟ್ಟಿ (Rakshitha shetty) ಇದ್ದರು. ಈ ವಾರ ರಕ್ಷಿತಾ ಹಾಗೂ ಗಿಲ್ಲಿ ಬೇರೆ ಬೇರೆ ಟೀಂ ಆಗಿದ್ದರು. ಆದರೆ ರಕ್ಷಿತಾ ಮಾತ್ರ ಆಟ ಆಡುವಾಗ, ಗಿಲ್ಲಿ ಸಪೋರ್ಟ್‌ ಪಡೆದುಕೊಳ್ಳುತ್ತಿದ್ದರು.

ಗಿಲ್ಲಿ ನಟ ಅವರು ಸಾಕಷ್ಟು ಕುತಂತ್ರ ಮಾಡಿದ್ದರು. ರಕ್ಷಿತಾನ (Rakshitha Shetty) ತಮ್ಮ ತಂಡದ ವಿರುದ್ಧವೇ ಎತ್ತಿ ಕಟ್ಟಿದ್ದರು. ಇದೀಗ ರಕ್ಷಿತಾಗೆ ಸುದೀಪ್‌ ಪ್ರಶ್ನೆ ಇಟ್ಟು ಗರಂ ಆಗಿಯೇ ಮಾತನಾಡಿದ್ದಾರೆ. ಸುದೀಪ್‌ ಪಿತ್ತ ನೆತ್ತಿಗೇರಿದೆ.

ಎಲ್ಲರಿಗೂ ಇರೆಟೇಟ್‌ ಮಾಡೋಕೆ ಮಾಡೋದಾ?

ಮೊದಲಿಗೆ ಕಿಚ್ಚ ರಕ್ಷಿತಾಗೆ, ʻನಿಮ್ಮ ಟೀಂ ಅಲ್ಲಿ ಒಬ್ಬರು ಹಿಂದೆ ಇರ್ತಾ ಇದ್ರು. ನೀವಿಬ್ಬರೂ ಸೇರಿ ಎಲ್ಲರಿಗೂ ಇರೆಟೇಟ್‌ ಮಾಡೋಕೆ ಮಾಡೋದಾ?ʼ ಎಂದು ಗಿಲ್ಲಿ ಬಗ್ಗೆ ಪರೋಕ್ಷವಾಗಿ ಕೇಳಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳದ ರಕ್ಷಿತಾ ಹೌದು ಎಂದಿದ್ದಾರೆ. ʻನಿಮ್ಮ ಸ್ವಂತ ಟೀಂವನ್ನು ಏನಕ್ಕೆ ಇರಿಟೇಟ್‌ ಮಾಡಬೇಕು?ʼ ಎಂದು ಕಿಚ್ಚ ಅವರು ರಕ್ಷಿತಾ ಅವರನ್ನ ಗರಂ ಆಗಿಯೇ ಕೇಳಿದ್ದಾರೆ.

ಸುದೀಪ್‌ಗೆ ಪಿತ್ತ ನೆತ್ತಿಗೆರಿಸಿದ ರಕ್ಷಿತಾ!

ಅದಕ್ಕೆ ರಕ್ಷಿತಾ ಅವರು ಸುದೀಪ್‌ ಅವರಿಗೆ ಮರು ಪ್ರಶ್ನೆ ಇಟ್ಟಿದ್ದಾರೆ. ʻನಿಮಗೆ ಯಾವಾಗ ಅನ್ನಿಸಿತು? ನಮ್ಮ ಟೀಂಗೆ ನಾನು ಇರಿಟೇಟ್‌ ಮಾಡಿದ್ದೀನಿʼ ಎಂದು ಕೇಳಿದ್ದಾರೆ. ʻಅದೇ ನನ್ನ ಪಿತ್ತ ನೆತ್ತಿಗೆ ಏರೋ ಮುಂಚೆ ಅನ್ನಿಸಿತ್ತಮ್ಮʼ ಅಂತ ಖಾರವಾಗಿಯೇ ಸುದೀಪ್‌ ಹೇಳಿದ್ದಾರೆ. ಮಾತು ಮುಂದುವರಿಸಿದ ಕಿಚ್ಚ, ʻನಾನು ಎರಡು ರೀತಿ ನಗ್ತೀನಿ, ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗʼ ಎಂದು ಕಿಚ್ಚ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ- ರಕ್ಷಿತಾ ತಂತ್ರ ಕುತಂತ್ರ ಆಟ! ಕಿಚ್ಚ ಸುದೀಪ್‌ ಕ್ಲಾಸ್‌ ಫಿಕ್ಸ್‌



ರಾಶಿಕಾ ವಿಚಾರದಲ್ಲಿಯೂ ರಕ್ಷಿತಾ ಎಡವಿದ್ದರು. ನಾಮಿನೇಷನ್‌ನಿಂದ ಪಾರಾಗಲು ಅಶ್ವಿನಿ ತಂಡದಲ್ಲಿ ಬಹುತೇಕರು ರಾಶಿಕಾ ಅವರನ್ನು ಸೇಫ್‌ ಮಾಡಲು ವೋಟ್‌ ಹಾಕಿದ್ದರು. ಆದರೆ ರಕ್ಷಿತಾ ಅವರು ಸುಧಿ ಅವರ ಹೆಸರನ್ನು ತೆಗೆದುಕೊಂಡರು. ಇದು ರಾಶಿಕಾ ಅವರಿಗೆ ಕೋಪ ಬರಿಸುವಂತೆ ಮಾಡಿತ್ತು.

ರಕ್ಷಿತಾ ವಿರುದ್ಧ ಕೂಗಾಡಿದ್ದ ರಾಶಿಕಾ!

ರಾಶಿಕಾ ಈ ವೇಳೆ ಪ್ರತಿ ವಾರ ನಾನು ನಾಮಿನೇಟ್‌ ಆಗಿದ್ದೇನೆ ಎಂದರು. ಅದಕ್ಕೆ ಒಪ್ಪದ ರಕ್ಷಿತಾ, ನಾವು ಕೂಡ ನಾಮಿನೇಷನ್‌ ಫೇಸ್‌ ಮಾಡಿದ್ದೇವೆ ಎಂದಿದ್ದಾರೆ. ರಾಶಿಕಾ ಕೂಡ ಇಡೀ ತಂಡವೇ ಒಂದು ನಿರ್ಧಾರ ತೆಗೆದುಕೊಂಡಿರುವಾಗ, ರಕ್ಷಿತಾ ನಿರ್ಧಾರವನ್ನು ನಾನು ಒಪ್ಪುವುದಿಲ್ಲ ಎಂದು ಕೂಗಾಡಿದ್ದರು.

ಇದನ್ನೂ ಓದಿ: Bigg Boss Kannada 12: ರಕ್ಷಿತಾ ಶೆಟ್ಟಿ ಬಗ್ಗೆ ಕಾವ್ಯ ಅಸಮಾಧಾನ! ವೀಕ್ಷಕರು ಗರಂ

ಯಾರೆಲ್ಲಾ ನಾಮಿನೇಟ್‌ ಆಗಿದ್ದಾರೆ?

ʻಬಿಗ್‌ ಬಾಸ್‌ʼ ಮನೆಯಲ್ಲಿ ಈ ವಾರ ಒಟ್ಟು 8 ಮಂದಿ ನಾಮಿನೇಟ್‌ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್‌ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈ ವಾರ ನಾಮಿನೇಟ್‌ ಆಗಿದ್ದಾರೆ. ಇದರಲ್ಲಿ ಬಹುತೇಕರನ್ನು ನಾಮಿನೇಟ್‌ ಮಾಡಿರುವುದು ಕ್ಯಾಪ್ಟನ್‌ ಆಗಿದ್ದ ಮಾಳು ನಿಪನಾಳ್.‌

Yashaswi Devadiga

View all posts by this author