ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ರಕ್ಷಿತಾ ಶೆಟ್ಟಿ ಬಗ್ಗೆ ಕಾವ್ಯ ಅಸಮಾಧಾನ! ವೀಕ್ಷಕರು ಗರಂ

ಬಿಗ್‌ ಬಾಸ್‌ (Bigg Boss Kannada 12) ರಕ್ಷಿತಾ ವಯಸ್ಸಿನ ಕುರಿತಾಗಿ ಕಾವ್ಯ (Kavya) ಅವರಿಗೆ ಅಸಮಾಧಾನ ಶುರು ಆಗಿದೆ. ರಕ್ಷಿತಾ (rakshitha) ಅವರು ಮನೆಯಲ್ಲಿ ಅತ್ಯಂತ ಚಿಕ್ಕವರು ಎಂದು ಕೆಲವು ಸ್ಪರ್ಧಿಗಳು ಅಂದುಕೊಂಡಿದ್ದರು. ಈಗ ಈ ಬಗ್ಗೆ ಕಾವ್ಯ ಹಾಗೂ ಸ್ಪಂದನಾ (Kavya Spandana) ಚರ್ಚಿಸಿದ್ದಾರೆ. ಇದೀಗ ವೀಕ್ಷಕರು ಈ ಬಗ್ಗೆ ಕಮೆಂಟ್‌ ಮಾಡ್ತಾ ಇದ್ದಾರೆ. ಕಾವ್ಯ ಸ್ಪಂದನ ಎಷ್ಟು ಟಾಸ್ಕ್ ಗೆದ್ದಿದ್ದಾರೊ ಅದಕ್ಕಿಂತ ಹೆಚ್ಚು ರಕ್ಷಿತಾ ಬಗ್ಗೆ ಮಾತಾಡುತಿದ್ದಾರೆ. ಇವರ ಬಿಗ್ ಬಾಸ್ 10% ಕೂಡ ಲಾಭ ಆಗಿಲ್ಲ ಅಂತ ಕಮೆಂಟ್‌ ಮಾಡುತ್ತಿದ್ದಾರೆ.

ರಕ್ಷಿತಾ ಶೆಟ್ಟಿ ಬಗ್ಗೆ ಕಾವ್ಯ ಅಸಮಾಧಾನ! ವೀಕ್ಷಕರು ಗರಂ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 15, 2025 10:55 AM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ರಕ್ಷಿತಾ (Rakshitha Shetty) ಬಗ್ಗೆ ಸ್ಪಂದನಾ (Spandana) ಹಾಗೂ ಕಾವ್ಯ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸೇಫ್‌ ತಂಡದಿಂದ ಒಬ್ಬರನ್ನ ನಾಮಿನೇಟ್‌ ಮಾಡಿ, ನಾಮಿನೇಟೆಡ್‌ ತಂಡದಿಂದ ಒಬ್ಬರನ್ನ ಸೇಫ್‌ ಮಾಡುವಂತೆ ʻಬಿಗ್‌ ಬಾಸ್‌ʼ ನಾಮಿನೇಟೆಡ್‌ ತಂಡಕ್ಕೆ ಸೂಚಿಸಿದ್ದರು.

ಅಭಿಷೇಕ್‌ ಅವರನ್ನ ಸೇವ್‌ ಮಾಡುವ ಭರದಲ್ಲಿ ರಕ್ಷಿತಾ ಶೆಟ್ಟಿ ರಘು ಅವರನ್ನ ನಾಮಿನೇಟ್‌ ಮಾಡಿದ್ದರು. ಇದರಿಂದ ರಕ್ಷಿತಾ ಶೆಟ್ಟಿ ನೆಗೆಟಿವ್‌ ಆಗಿ ಕಾಣಿಸಿಕೊಂಡರು. ಇದಾದ ಬಳಿಕ ಕಾವ್ಯ ಅವರು ಬುದ್ಧಿವಾದ ಹೇಳಿದ್ದರು. ಕಾವ್ಯ ಅವರು ವೀಕ್ಷಕರಿಂದ ಭೇಷ್‌ ಕೂಡ ಅನಿಸಿಕೊಂಡಿದ್ದರು. ಆದರೆ ನಿನ್ನೆಯ ಎಪಿಸೋಡ್‌ ಕಂಡು ಕಾವ್ಯ ಅವರಿಗೆ ನೆಗೆಟಿವ್‌ ಕಮೆಂಟ್‌ ಮಾಡುತ್ತಿದ್ದಾರೆ ವೀಕ್ಷಕರು.

ಕಾವ್ಯ ಅವರಿಗೆ ಅಸಮಾಧಾನ

ರಕ್ಷಿತಾ ವಯಸ್ಸಿನ ಕುರಿತಾಗಿ ಕಾವ್ಯ ಅವರಿಗೆ ಅಸಮಾಧಾನ ಶುರು ಆಗಿದೆ. ರಕ್ಷಿತಾ ಅವರು ಮನೆಯಲ್ಲಿ ಅತ್ಯಂತ ಚಿಕ್ಕವರು ಎಂದು ಕೆಲವು ಸ್ಪರ್ಧಿಗಳು ಅಂದುಕೊಂಡಿದ್ದರು. ಆದರೆ ವೀಕೆಂಡ್‌ ಎಪಿಸೋಡ್‌ನಲ್ಲಿ ಸುದೀಪ್‌ ಅವರು ರಕ್ಷಿತಾ ಅವರ ವಯಸ್ಸನ್ನು ಕೇಳಿದ್ದರು. ಆಗ ರಕ್ಷಿತಾ ಅವರು 24ವರ್ಷ ಎಂದಿದ್ದರು. ಈಗ ಈ ಬಗ್ಗೆ ಕಾವ್ಯ ಹಾಗೂ ಸ್ಪಂದನಾ ಚರ್ಚಿಸಿದ್ದಾರೆ.

ಸ್ಪಂದನಾ ಅವರು ಕಾವ್ಯ ಬಳಿ, ‘ರಕ್ಷಿತಾ ಮಾಡಿದ್ದು ಸರಿ ಎಂದು ನಿನಗೆ ಅನಿಸುತ್ತಿದೆಯೇ’ ಎಂದು ಕೇಳಿದರು.

ಇದನ್ನೂ ಓದಿ: Bigg Boss Kannada 12: ಮುಖದ ಮೇಲೆ ಟವೆಲ್ ಹಾಕಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಾಳು ; ವೀಕ್ಷಕರ ಬೇಸರ

ತಪ್ಪು ನಿರ್ಧಾರ ತೆಗೆದುಕೊಂಡಾಗ ಪ್ರಬುದ್ಧತೆ ಇಲ್ಲ ಪಾಪ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅವಳು ಸರಿಯಾದ ನಿರ್ಧಾರ ತೆಗೆದುಕೊಂಡಾಗ ಚಿಕ್ಕವಳಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಳು ಎಂದು ಆಗುತ್ತಿದೆ. ಈ ಕಾರಣಕ್ಕೆ ಅವಳು ಯಾರ ಬಳಿಯೂ ವಯಸ್ಸು ಹೇಳುತ್ತಾ ಇರಲಿಲ್ಲ. ಸುದೀಪ್ ಅವರು ಕೇಳಿದ ಮೇಲೆ ವಯಸ್ಸು ಹೇಳಿದಳು’ ಎಂದಿದ್ದಾರೆ ಕಾವ್ಯಾ.



ಎಲ್ಲಾ ಪರಿಸ್ಥಿತಿಗಳು ಅವಳ ಪರವಾಗಿಯೇ ಇದೆ ಎಂದು ಕಾವ್ಯ ಹೇಳಿದರೆ, ಅವಳು ಸ್ಟ್ರೆಟಜಿ ಮಾಡುತ್ತಿಲ್ಲ, ಹೊರಗೆ ಇರುವ ರೀತಿಯೇ ಇದ್ದಾಳೆ ಎಂದರೆ ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ ಎಂದು ರಕ್ಷಿತಾ ಬಗ್ಗೆ ಸ್ಪಂದನಾ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗ್ರೂಪಿಸಮ್‌ ಮಾಡಿ ಕಳಪೆ ಕೊಡದಲ್ಲ, ಕಾರಣ ಅಂದ್ರೆ ಇದು; ಗಿಲ್ಲಿಗೆ ವೀಕ್ಷಕರಿಂದ ಬಹುಪರಾಕ್

ವೀಕ್ಷಕರು ಗರಂ

ಇದೀಗ ವೀಕ್ಷಕರು ಈ ಬಗ್ಗೆ ಕಮೆಂಟ್‌ ಮಾಡ್ತಾ ಇದ್ದಾರೆ. ಕಾವ್ಯ ಸ್ಪಂದನ ಎಷ್ಟು ಟಾಸ್ಕ್ ಗೆದ್ದಿದ್ದಾರೊ ಅದಕ್ಕಿಂತ ಹೆಚ್ಚು ರಕ್ಷಿತಾ ಬಗ್ಗೆ ಮಾತಾಡುತಿದ್ದಾರೆ. ಇವರ ಬಿಗ್ ಬಾಸ್ 10% ಕೂಡ ಲಾಭ ಆಗಿಲ್ಲ. ಕಾವ್ಯ ಗಿಲ್ಲಿ ಜೊತೆ ಸ್ಪಂದನ ಧನುಷ ಜೊತೆ ಬಕೆಟ್ ಹಡಿದು ಬಿಗ್ ಬಾಸ್ ಉಳಿಯುತಿದ್ದಾರೆ ಎಂದು ಕಮೆಂಟ್‌ ಮಾಡ್ತಿದ್ದಾರೆ.