ಬಿಗ್ ಬಾಸ್ (Bigg Boss Kannada 12) ಮನೆಯಿಂದ ಈಗಾಗಲೇ ಚೈತ್ರಾ ಹಾಗೂ ರಜತ್ (Chaithra Rajath) ಮನೆಯಿಂದ ಆಚೆ ಬಂದಿದ್ದಾರೆ. ಬಿಗ್ ಬಾಸ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಇದೆ. ಅದರಲ್ಲೂ ಟಾಸ್ಕ್‌ಗಳು ಅತ್ಯಂತ ಕಠಿಣವಾಗುತ್ತಿದೆ. ಇದೀಗ ಲಕ್ಷುರಿ ಬಜೆಟ್ (Luxury Budget) ವಿಚಾರಕ್ಕೆ ಅಶ್ವಿನಿ ಹಾಗೂ ಗಿಲ್ಲಿ (Ashwini Gillinata) ನಡುವೆ ಸಖತ್ ಜಗಳ ನಡೆದಿದೆ. ಗಿಲ್ಲಿ ಟಾಸ್ಕ್‌ಗೆ ಸಖತ್ ಪ್ರಾಮುಖ್ಯತೆ ಕೊಡ್ತಾ ಇದ್ದಾರೆ ಅಂತ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು.
ಪ್ರೋಮೋ ಔಟ್ ಆಗಿದೆ . ಲಕ್ಷುರಿ ಬಜೆಟ್‌ಗೆ ಟಾಸ್ಕ್‌ವೊಂದನ್ನ ನೀಡಿದ್ದರು ಬಿಗ್ ಬಾಸ್. ಸೂಚಿಸಲಾದ ಅವಧಿ ಒಳಗೆ ಆ ಪ್ರದೇಶಕ್ಕೆ ತಲುಪಿ ನೃತ್ಯ ಪ್ರದರ್ಶನ ಮಾಡಬೇಕು. ತೆಗೆದುಕೊಂಡ ಅವಧಿಯಲ್ಲಿ ವಾರದ ಸಾಮಾಗ್ರಿಗಳನ್ನು ಗಳಿಸುತ್ತದೆ ಎಂದು ಬಿಗ್ ಬಾಸ್ ಸೂಚಿಸಿದರು. ಆದರೆ ಈ ವೇಳೆ ಅಶ್ವಿನಿ ಅವರು ನಿಗದಿತ ಸಮಯದಲ್ಲಿ ತಲುಪಲೇ ಇಲ್ಲ.
ಹೀಗಾಗಿ ವಾರ ಸಾಮಾಗ್ರಿಯನ್ನ ಕಳೆದುಕೊಂಡಿದ್ದಾರೆ ಸ್ಪರ್ಧಿಗಳು. ಈ ವೇಳೆ ಗಿಲ್ಲಿ ನಟ ಹಾಗೂ ಅಶ್ವಿನಿ ನಡುವೆ ಮಾತಿನ ಚಕಮಕಿ ನಡೆದಿದೆ. ರಾಶಿಕಾ ಕೂಡ ಗಿಲ್ಲಿ ಕೂಡ ಎರಡು ಬಾರಿ ಮಾಡಿದ ಎಡವಟ್ಟಿಗೆ ದಿನಸಿ ಹೋಗಿತ್ತು ಅಲ್ವಾ ಎಂದಿದ್ದಾರೆ. ಅದಕ್ಕೆ ಗಿಲ್ಲಿ, ನಾನು ಮಾಡ್ದೆ ಅಂತ ನೀವು ಮಾಡೋದಾ? ಅಂತ ಕೇಳಿದ್ದಾರೆ. ಅದಕ್ಕೆ ಅಶ್ವಿನಿ ಅವರು ನಾನು ಬೇಕು ಅಂತ ಮಾಡಿದ್ದು ಏನಿವಾಗ? ಅಂತ ಕೇಳಿದ್ದಾರೆ. ಅದಕ್ಕೆ ಗಿಲ್ಲಿ ಅವರು ಪ್ರತಿ ರೌಂಡ್‌ನಲ್ಲಿಯೂ ತಪ್ಪುಗಳು ರಿಪೀಟ್ ಆಗ್ತಾವಾ? ಅಂತ ಕೇಳಿದ್ದಾರೆ ಗಿಲ್ಲಿ.
ಇದನ್ನೂ ಓದಿ: Bigg Boss Kannada 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್
ಚೈತ್ರ ಹೋದ ಮೇಲೆ ಗಿಲ್ಲಿಗೆ ಅಶ್ವಿನಿಯನ್ನು ಗುರಿಯಾಗಿಸಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ರಜತ್ ಹೋದ ಮೇಲೆ ಗಿಲ್ಲಿಗೆ ರಘು ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಕಮೆಂಟ್ ಮಾಡ್ತಿದ್ದಾರೆ ನೆಟ್ಟಿಗರು.
ಪ್ರೋಮೋ
ಇನ್ನು ಈ ವಾರ ಮನೆಯಿಂದ ರಜತ್ ಚೈತ್ರಾ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಿವಿಧ ರೀತಿ ಟಾಸ್ಕ್‌ಗಳನ್ನೆ ಕೊಟ್ಟಿದ್ದಾರೆ. ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ವೋಟಿಂಗ್ ಈ ವಾರವೂ ಓಪನ್ ಆಗಿಲ್ಲ. ಬಿಗ್ ಬಾಸ್ ಮನೆಗೆ ಎರಡು ವಾರಗಳ ಹಿಂದೆ 5 ಮಂದಿ ಕಳೆದ ಸೀಸನ್‌ನ ಸ್ಪರ್ಧಿಗಳು ಎಂಟ್ರಿ ನೀಡಿದ್ದರು. ಅದರಲ್ಲಿ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ ಒಂದು ವಾರ ಇದ್ದು ಹೊರಗೆ ಹೋದರು. ರಜತ್ ಮತ್ತು ಚೈತ್ರಾ ಕುಂದಾಪುರ ಅವರನ್ನು ಮನೆಯೊಳಗೆ ಇರಿಸಿಕೊಳ್ಳಲಾಗಿತ್ತು. ಅವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂದು ಬಿಂಬಿಸಲಾಗಿತ್ತು.
ಇದನ್ನೂ ಓದಿ: Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
ಅತಿಥಿಗಳಾಗಿ ಬಂದು ಬಿಗ್‌ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ, ಮನೆಯ ಸದಸ್ಯರೊಟ್ಟಿಗೆ ಆಟ ಆಡಿದ್ದಕ್ಕೆ ರಜತ್ ಮತ್ತು ಚೈತ್ರಾ ಅವರಿಗೆ ಧನ್ಯವಾದ ಹೇಳಿದರು ಸುದೀಪ್.