ಬಿಗ್ ಬಾಸ್ ಸೀಸನ್ 12ರಲ್ಲಿ (Bigg boss Kannada 12) ವೀಕ್ಷಕರಿಗರ ಸಖತ್ ಕ್ರೇಜ್ ಹುಟ್ಟು ಹಾಕಿರೋ ಸ್ಪರ್ಧಿ ಅಂದರೆ ಅದುವೇ ಗಿಲ್ಲಿ ನಟ. ನಟನಿಗೆ ಅವರದ್ದೇ ಆದ ಫ್ಯಾನ್ಸ್ ವರ್ಗ ಇದೆ. ಇತ್ತೀಚೆಗಂತೂ ಗಿಲ್ಲಿ ಕ್ರೇಜ್ ಜೋರಾಗಿದೆ. ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಗಿಲ್ಲಿ ನಟನದ್ದೇ ರೀಲ್ಸ್. ಸೂರಜ್ ಎಲಿಮಿನೇಟ್ (Sooraj Eliminate) ಆದ ಬಳಿಕ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆಯೇ ಹಾಡಿ ಹೊಗಳಿದ್ದಾರೆ. ಹೀಗಿರುವಾಗ ಮಾಳು ಅವರು ಗಿಲ್ಲಿ ಬಗ್ಗೆ ಕೊಟ್ಟಿರುವ ಹೇಳಿಕೆಗಳ ಬಗ್ಗೆ ಗಿಲ್ಲಿ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಎಲಿಮಿನೇಷನ್‌ನಿಂದ ಉತ್ತರ ಕರ್ನಾಟಕ ಅಳುತ್ತಿದೆ ಎಂಬ ಮಾಳು ಹೇಳಿಕೆ ಕೂಡ ವೈರಲ್ ಆಗಿದ್ದು, ಈ ಘಟನೆ ಈಗ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ. ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು ಮಾಳು. ಅಲ್ಲಿ ಗಿಲ್ಲಿ ಫ್ಯಾನ್ಸ್‌ನಿಂದ (Gilli Fans) ಭಾರಿ ಮುಜುಗರ ಅನುಭವಿಸಿದ್ದಾರೆ.
ಮಾಳು ಹೇಳಿದ್ದೇನು?
ಮಾಳು ಅವರು ಮನೆಯಿಂದ ಔಟ್ ಆಗಿದ ಕೂಡಲೇ ಹೇಳಿಕೆ ನೀಡಿದ್ದು ಹೀಗೆ, ರೇಗಿಸುವುದಕ್ಕೂ ಒಂದು ಇತಿಮಿತಿ ಇರುತ್ತದೆ. ಒಬ್ಬ ವ್ಯಕ್ತಿ ಒಂದು ಸಲ ಎರಡು ಸಲ ಹೇಳಿಸಿಕೊಳ್ಳಬೇಕು. 10 ಸಲ ಹೇಳಿಸಿಕೊಂಡರೆ, ಅವನು ಮನುಷ್ಯನೇ ಅಲ್ಲ.
ಒಬ್ಬರ ಮನಸ್ಸಿಗೆ ಹರ್ಟ್ ಆಗೋ ಥರ ಕಾಮಿಡಿ ಮಾಡಬಾರದು. ಕೀಳಾಗಿ ಮಾತನಾಡಬಾರದು. ರಘು ಸರ್‌ನ ಕೆಳಗೆ ಹಾಕಿ ಮಾತನಾಡೋದು ನನಗೆ ಬಹಳ ನೋವಾಯ್ತು. ಗಿಲ್ಲಿ ಕಾಮಿಡಿ ಮಾಡಲಿ, ಆದರೆ ಇನ್ನೊಬ್ಬರನ್ನು ಕೀಳಾಗಿ ತೋರಿಸಿ, ಕಾಮಿಡಿ ಮಾಡೋದು, ಅದು ಕಾಮಿಡಿ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಬೆಲೆ ಇರುತ್ತದೆ. ಸ್ವಂತಿಕೆ ಇರಲಿ, ಇನ್ನೊಬ್ಬರ ಕಾಲೆಳೆದು ಕಾಮಿಡಿ ಮಾಡೋದು ಸರಿ ಅಲ್ಲ" ಎಂದು ಮಾಳು ಹೇಳಿದ್ದರು.
ವೈರಲ್ ವಿಡಿಯೊ
ತಾವೇ ಈ ಬಾರಿ ಕಪ್ ಗೆಲ್ಲಬೇಕಿತ್ತು, ಪ್ ಗೆಲ್ಲಲು ಯಾರೂ ಅರ್ಹರಲ್ಲ. ತಮ್ಮ ಎಲಿಮಿನೇಷನ್‌ನಿಂದ ಉತ್ತರ ಕರ್ನಾಟಕ ಅಳುತ್ತಿದೆ ಎಂಬ ಮಾಳು ಹೇಳಿಕೆ ಕೂಡ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಗೂ ಎಡೆ ಮಾಡಿಕೊಟ್ಟಿತ್ತು.
ಇದನ್ನೂ ಓದಿ: Bigg Boss Kannada 12: ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು! ಗಿಲ್ಲಿ ಎದುರು ಅಬ್ಬರಿಸಿದ ಅಶ್ವಿನಿ ಗೌಡ
ಇದೀಗ ಮಾಳು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಅಲ್ಲಿ ಅವರು ಭಾರೀ ಮುಜುಗರ ಅನುಭವಿಸಿದ್ದಾರೆ.ಮಾಳು ವೇದಿಕೆ ಏರುತ್ತಿದ್ದಂತೆ ಎಲ್ಲರೂ ‘ಗಿಲ್ಲಿ ಗಿಲ್ಲಿʼಎಂದು ಕೂಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಕಮೆಂಟ್‌ನಲ್ಲಿ ಅವನು ಕರ್ನಾಟಕ ಅಥವಾ ನೆರೆಯ ರಾಜ್ಯಗಳಲ್ಲಿ ಎಲ್ಲಿಗೆ ಹೋಗಲಿ, ಅವನ ಕಿವಿಗಳು ಇನ್ನು ಮುಂದೆ ಗಿಲ್ಲಿ ಹೆಸರಿನಿಂದ ಪ್ರತಿಧ್ವನಿಸುತ್ತವೆ ಎಂದು ಬರೆದುಕೊಂಡಿದ್ದಾರೆ.