ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು! ಗಿಲ್ಲಿ ಎದುರು ಅಬ್ಬರಿಸಿದ ಅಶ್ವಿನಿ ಗೌಡ

Ashwini Gowda Gilli Nata: ಈ ವಾರ ಗಿಲ್ಲಿ ನಟ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಇಷ್ಟೂ ದಿನ ಮನೆಯಲ್ಲಿ ಸೋಮಾರಿತನ ತೋರಿದ್ದ ಗಿಲ್ಲಿ ವಿರುದ್ಧ ಇದೀಗ ಅಶ್ವಿನಿ ಗರಂ ಆಗಿದ್ದಾರೆ. ಈ ಮೊದಲು ಬೇರೆ ಅವರು ಕ್ಯಾಪ್ಟನ್‌ ಆದಾಗ ಕೆಲಸ ಮಾಡಲು ಸೋಮಾರಿತನ ತೋರಿದ್ದ ಗಿಲ್ಲಿ, ಈಗ ಅವರೇ ಕ್ಯಾಪ್ಟನ್ ಆಗಿದ್ದು, ಬೇರೆಯವರು ಸರಿಯಾಗಿ ಕೆಲಸ ಮಾಡದೇ ಇರದ ಕಾರಣ ಗರಂ ಆಗಿದ್ದಾರೆ. ಇನ್ನು ಅಶ್ವಿನಿ ಅವರಿಗೆ ಏಕವಚನ ಬಳಸಿದ್ದಾರೆ. ಇದು ಅಶ್ವಿನಿ ಅವರ ಕೋಪ ನೆತ್ತಿಗೇರಿದೆ.

ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು! ಗಿಲ್ಲಿ ವಿರುದ್ಧ ಅಶ್ವಿನಿ ಗರಂ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 30, 2025 7:31 AM

ಈ ವಾರ ಗಿಲ್ಲಿ ನಟ (Gilli Nata) ಬಿಗ್‌ ಬಾಸ್‌ (Bigg Boss Kannada 12) ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಇಷ್ಟೂ ದಿನ ಮನೆಯಲ್ಲಿ ಸೋಮಾರಿತನ ತೋರಿದ್ದ ಗಿಲ್ಲಿ ವಿರುದ್ಧ ಇದೀಗ ಅಶ್ವಿನಿ (Ashwini Gowda) ಗರಂ ಆಗಿದ್ದಾರೆ. ಈ ಮೊದಲು ಬೇರೆ ಅವರು ಕ್ಯಾಪ್ಟನ್‌ ಆದಾಗ ಕೆಲಸ ಮಾಡಲು ಸೋಮಾರಿತನ ತೋರಿದ್ದ ಗಿಲ್ಲಿ, ಈಗ ಅವರೇ ಕ್ಯಾಪ್ಟನ್ ಆಗಿದ್ದು, ಬೇರೆಯವರು ಸರಿಯಾಗಿ ಕೆಲಸ ಮಾಡದೇ ಇರದ ಕಾರಣ ಗರಂ ಆಗಿದ್ದಾರೆ. ಇನ್ನು ಅಶ್ವಿನಿ ಅವರಿಗೆ ಏಕವಚನ (Singular) ಬಳಸಿದ್ದಾರೆ. ಇದು ಅಶ್ವಿನಿ ಅವರ ಕೋಪ ನೆತ್ತಿಗೇರಿದೆ.

ಶುಗರ್ ಕೋಟಿಂಗ್ ಮಾಡುತ್ತಾರೆ

ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. ಒಬ್ಬ ಸದಸ್ಯರಿಂದ ನಾಮಿನೇಶನ್‌ ಮಾಡುವ ಅಧಿಕಾರವನ್ನು ಕಿತ್ತುಕೊಳ್ಳಬೇಕಿತ್ತು. ಅಶ್ವಿನಿ ಅವರ ಅಧಿಕಾರವನ್ನು ಗಿಲ್ಲಿ ಕಸಿದುಕೊಂಡರು. ಅಷ್ಟೇ ಅಲ್ಲ ಸೂಕ್ತ ಕಾರಣವನ್ನು ನೀಡಬೇಕಿತ್ತು.

ಇದನ್ನೂ ಓದಿ: Bigg Boss Kannada 12: ಅಶ್ವಿನಿಗೆ ಸಖತ್‌ ಕ್ವಾಟ್ಲೆ ಕೊಟ್ಟ ಗಿಲ್ಲಿ; ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತಿನಿ ಅಂತ ಸವಾಲ್‌!

ಗಿಲ್ಲಿ ಮಾತನಾಡಿ, ಅಶ್ವಿನಿ ಅವರು ಹೇಳಿದ ಮಾತುಗಳನ್ನು ಕೇಳಲ್ಲ. ಮತ್ತು ಮಾತುಗಳನ್ನು ತಿರುಚುತ್ತಾರೆ. ಸುಳ್ಳು ತುಂಬಾ ಹೇಳ್ತಾರೆ. ಕೆಲಸ ಮಾಡಿಸಲು ಆಗಿಲ್ಲ. ರೂಲ್ಸ್‌ ಬುಕ್‌ನಲ್ಲಿಯೇ ಇದ್ದ ಆಣೆ, ಪ್ರಮಾಣ ಅದೆಲ್ಲ ಮಾಡೋ ಹಾಗಿಲ್ಲ ಅಂತ. ಅವರು ಮಾತಿನಲ್ಲಿ ಬಹಳ ಶುಗರ್ ಕೋಟಿಂಗ್ ಮಾಡುತ್ತಾರೆ. ಹಾಗಾಗಿ ನಾಮಿನೇಷನ್ ಮಾಡುವ ಅಧಿಕಾರವನ್ನು ಅವರಿಂದ ಕಸಿದುಕೊಳ್ಳುತ್ತೇನೆ’ ಎಂದು ಗಿಲ್ಲಿ ನಟ ಹೇಳಿದರು.

ಇದು ನಿನ್ನ ದುರಹಂಕಾರ

ಇದು ಅಶ್ವಿನಿ ಅವರಿಗೆ ಕೋಪ ಬರಿಸಿದೆ. ಮೂರ್ಖರ ಜೊತೆ ಗುದ್ದಾಡೋದು ಇಷ್ಟ ಇಲ್ಲ. ಹಾಗಾಗಿ ನಿನ್ನ ಜೊತೆ ಮಾತನಾಡಿ ನಾನು ನನ್ನ ವ್ಯಕ್ತಿತ್ವವನ್ನು ಕೆಳಗೆ ಇಡಲು ಇಷ್ಟಪಡಲ್ಲ. ಕ್ಯಾಪ್ಟನ್ ಆದವರಿಗೆ 2 ಕೊಂಬು ಇರಲ್ಲ. ಈ ಮನೆಯ ಜವಾಬ್ದಾರಿಯನ್ನು ಎಲ್ಲರೂ ಮಾಡಬೇಕು. ನೀನು ಮೊದಲು ಕೆಲಸ ಮಾಡೋದು ಕಲಿ’ ಎಂದು ಅಶ್ವಿನಿ ಗೌಡ ಕೂಗಾಡಿದರು.



ಅಷ್ಟೇ ಅಲ್ಲ ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು. ನಾಮಿನೇಷನ್ ಅಧಿಕಾರ ಕಿತ್ತುಕೊಂಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ ಇದು ನಿನ್ನ ದುರಹಂಕಾರ. ಇದು ವ್ಯಕ್ತಿತ್ವದ ಆಟ, ದುರಹಂಕಾರದ ಆಟ ಅಲ್ಲ. ನನ್ನಿಂದ ಏನು ಕಿತ್ತಿಕೊಳ್ಳೋಕೆ ಆಗಲ್ಲ ಎಂದು ಅಬ್ಬರಿಸಿದ್ದಾರೆ.

ಇನ್ನು ಮನೆಯಲ್ಲಿ ನಾಮಿನೇಶನ್‌ ಪ್ರಕ್ರಿಯೆಲ್ಲಿ ಗಿಲ್ಲಿ ನಟ ಫೇವರಿಸಂ ಮಾಡಿದ್ದಾರೆ ಎಂದೂ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಕ್ಷಿತಾ ಅವರು ಕಾವ್ಯ ಎದುರಾಳಿಯಾಗಿ, "ನನಗೆ ಕಾವ್ಯ ಅವರಲ್ಲಿ ವ್ಯಕ್ತಿತ್ವ, ಮನುಷ್ಯತ್ವ ಕಾಣಿಸ್ತಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಈ ನಡುವೆ ಕಾವ್ಯ ಎದುರಾಳಿಯಾಗಿದ್ದ ರಾಶಿಕಾ ಮತ್ತು ಧ್ರುವಂತ್ ಅವರನ್ನು ಗಿಲ್ಲಿ ನಾಮಿನೇಟ್‌ ಮಾಡಿದ್ದಾರೆ. ಇದನ್ನು ಅಶ್ವಿನಿ ಗೌಡ ಖಂಡಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ! ಬಿಗ್‌ಬಾಸ್‌ ಯಾರೇ ಗೆದ್ರೂ ನಾನು ಒಪ್ಪಲ್ಲ; ಮಾಳು

"ಇಲ್ಲಿ ಎಲ್ಲಾ ಅಂದುಕೊಂಡಂತೆಯೇ ನಡೆಯುತ್ತಿದೆ" ಎಂದಿದ್ದಾರೆ. ಅಲ್ಲದೆ, ಗಿಲ್ಲಿ ನಿರ್ಧಾರಕ್ಕೆ ಧ್ರುವಂತ್‌ ಮತ್ತು ರಾಶಿಕಾ ಕೂಡ ಅಸಹನೆ ವ್ಯಕ್ತಪಡಿಸಿದ್ದಾರೆ. ನಂತರ ಇದಕ್ಕೆ ಪ್ರತಿ ಹೇಳಿಕೆ ನೀಡಿರುವ ಗಿಲ್ಲಿ ನಟ, "ಇಲ್ಲಿ ಯಾವುದೇ ಫೇವರಿಸಂ ಇಲ್ಲ" ಎಂದು ಕಡ್ಡಿ ತುಂಡು ಮಾಡಿದಂತೆ ಗಿಲ್ಲಿ ನಟ ಹೇಳಿದ್ದಾರೆ.