ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್‌ ಹೊಸ ತಂತ್ರ? ಸೂರಜ್‌ ಆರೋಪ

Gilli Nata: ಬೇರೆ ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿ ನಟ ಎಂದರೆ ಅಚ್ಚುಮೆಚ್ಚು. ಅಂದಹಾಗೆ, ಮನೆಯ ಮುಂದಿನ ಕ್ಯಾಪ್ಟನ್‌ ಯಾರಾಗಬೇಕು ಎಂಬ ನಿರ್ಧಾರ ಕೂಡ ಈ ಕುಟುಂಬ ಸದಸ್ಯರ ಆಯ್ಕೆಯ ಮೇಲಿದೆ. ಹಾಗಾಗಿ, ಬಹುತೇಕ ಆಯ್ಕೆ ಗಿಲ್ಲಿ ನಟ ಅವರೇ ಆಗಿದ್ದಾರೆ.ಅಶ್ವಿನಿ ಗೌಡ ಅವರ ತಾಯಿ ಗಿಲ್ಲಿಯನ್ನ ಸೆಲೆಕ್ಟ್‌ ಮಾಡಿ, "ಗಿಲ್ಲಿ ಈ ಮನೆಯ ಕ್ಯಾಪ್ಟನ್‌ ಆಗಿ ಏನೆಲ್ಲಾ ಕೆಲಸ ಮಾಡಿಸುತ್ತಾನೆ? ಹೇಗೆಲ್ಲಾ ಮ್ಯಾನೇಜ್ ಮಾಡುತ್ತಾನೆ ಎಂಬುದನ್ನು ನೋಡಬೇಕು, ಅದಕ್ಕಾಗಿ ಗಿಲ್ಲಿಯನ್ನು ಸೆಲೆಕ್ಟ್‌ ಮಾಡುತ್ತೇನೆ" ಎಂದಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲೀಗ ಫ್ಯಾಮಿಲಿ ವೀಕ್‌ (Family Week) ನಡೆಯುತ್ತಿದೆ. ಅದರಲ್ಲೂ ಬಂದವರೆಲ್ಲರ ಫೇವರೆಟ್‌ ಗಿಲ್ಲಿ (Gilli Nata) ಆಗಿದ್ದಾರೆ. ಸೂರಜ್‌ ಅಮ್ಮ ಹಾಗೂ ಧನುಷ್‌ ಮೊದಲಿಗೆ ಹೊಗಳಿದ್ದೇ ಗಿಲ್ಲಿ ಅವರನ್ನು. ಧನುಷ್‌ ಅವರ ಅಮ್ಮನಂತೂ, ಮಗ ಇರಲಿಲ್ಲ ಅಂದರೆ ನನ್ನ ವೋಟ್‌ ಎಲ್ಲ ಗಿಲ್ಲಿಗೆ ಎಂದಿದ್ದಾರೆ. ಅಷ್ಟೇ ಅಲ್ಲ ಅಶ್ವಿನಿ (Ashwini Gowda) ಅವರ ತಾಯಿ ಕೂಡ ಗಿಲ್ಲಿನೇ ಫೇವರೆಟ್‌ ಅಂದಿದ್ದಾರೆ. ಕ್ಯಾಪ್ಟನ್(Captain) ಯಾರಾಗಬೇಕು ಎಂದು ಹೇಳಿದರೆ ಬಹುತೇಕರು ಗಿಲ್ಲಿ ಹೆಸರು ತೆಗೆದುಕೊಂಡಿದ್ದಾರೆ. ಈಗಾಗಲೇ 4 ವೋಟ್‌ ಪಡೆದುಕೊಂಡಿದ್ದಾರೆ ಗಿಲ್ಲಿ. ಈ ವಿಚಾರವಾಗಿ ಸೂರಜ್‌ ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಗಿಲ್ಲಿ ನಟ ಎಂದರೆ ಅಚ್ಚುಮೆಚ್ಚು

ಬೇರೆ ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿ ನಟ ಎಂದರೆ ಅಚ್ಚುಮೆಚ್ಚು. ಅಂದಹಾಗೆ, ಮನೆಯ ಮುಂದಿನ ಕ್ಯಾಪ್ಟನ್‌ ಯಾರಾಗಬೇಕು ಎಂಬ ನಿರ್ಧಾರ ಕೂಡ ಈ ಕುಟುಂಬ ಸದಸ್ಯರ ಆಯ್ಕೆಯ ಮೇಲಿದೆ. ಹಾಗಾಗಿ, ಬಹುತೇಕ ಆಯ್ಕೆ ಗಿಲ್ಲಿ ನಟ ಅವರೇ ಆಗಿದ್ದಾರೆ.ಅಶ್ವಿನಿ ಗೌಡ ಅವರ ತಾಯಿ ಗಿಲ್ಲಿಯನ್ನ ಸೆಲೆಕ್ಟ್‌ ಮಾಡಿ, "ಗಿಲ್ಲಿ ಈ ಮನೆಯ ಕ್ಯಾಪ್ಟನ್‌ ಆಗಿ ಏನೆಲ್ಲಾ ಕೆಲಸ ಮಾಡಿಸುತ್ತಾನೆ? ಹೇಗೆಲ್ಲಾ ಮ್ಯಾನೇಜ್ ಮಾಡುತ್ತಾನೆ ಎಂಬುದನ್ನು ನೋಡಬೇಕು, ಅದಕ್ಕಾಗಿ ಗಿಲ್ಲಿಯನ್ನು ಸೆಲೆಕ್ಟ್‌ ಮಾಡುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?

ಹಾಗೆಯೇ, ರಕ್ಷಿತಾ ಅವರ ತಾಯಿ ಕೂಡ ಗಿಲ್ಲಿಗೆ ತಮ್ಮ ಮತವನ್ನು ಹಾಕಿದ್ದಾರೆ. ಧನುಷ್‌ ತಾಯಿ ವೋಟ್ ಕೂಡ ಗಿಲ್ಲಿಗೆ ಸಿಕ್ಕಿದೆ. "ನನಗೆ ಅಶ್ವಿನಿ ಗೌಡ ಕೂಡ ಇಷ್ಟ. ಆದರೆ, ಗಿಲ್ಲಿ ಸ್ವಲ್ಪ ಜಾಸ್ತಿನೇ ಇಷ್ಟ. ಅವರ ಕಾಮಿಡಿ ನನಗೆ ತುಂಬಾ ಇಷ್ಟ. ಗಿಲ್ಲಿ ಕ್ಯಾಪ್ಟನ್‌ ಆಗಲಿ” ಎಂದಿದ್ದಾರೆ ಧನುಷ್‌ ತಾಯಿ.ಧ್ರುವಂತ್‌ ಅವರ ಕುಟುಂಬದವರು ಕೂಡ ಗಿಲ್ಲಿ ಫೋಟೋವನ್ನ ಆಯ್ಕೆ ಮಾಡಿ, ಬೋರ್ಡ್‌ನಲ್ಲಿ ಇರಿಸಿದ್ದಾರೆ. ಇಲ್ಲಿ ಹೆಚ್ಚು ಗಿಲ್ಲಿ ಅವರ ಫೋಟೋಗಳೇ ಇರುವುದರಿಂದ, ಅವರೇ ಕ್ಯಾಪ್ಟನ್‌ ಆಗುವ ಸಾಧ್ಯತೆ ಇದೆ.

ವೈರಲ್‌ ವಿಡಿಯೋ



ಸೂರಜ್‌, ರಘು ಅಸಮಾಧಾನ

ಈ ವಿಷಯದ ಬಗ್ಗೆ ರಾತ್ರಿ ಮಲಗಿರುವಾಗ ಚರ್ಚೆ ನಡೆದಿದೆ. ರಘು ಹಾಗೂ ಸೂರಜ್ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ‘ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದರು ರಘು. ಆಗ ಸೂರಜ್ ಅವರು, ‘ಬಿಗ್ ಬಾಸ್​ ಪ್ಲ್ಯಾನ್ ಹಾಕಿದಾರೆ’ ಎಂದರು.

ಸೂರಜ್‌ ಮಾತಿಗೆ ಗಿಲ್ಲಿ ಫ್ಯಾನ್ಸ್‌ ಕೆಂಡ ಆಗಿದ್ದಾರೆ. ಈ ಮೊದಲು ವೋಟಿಂಗ್ ಮೂಲಕ ಧನುಷ್, ಕಾವ್ಯಾ ಕೂಡ ಕ್ಯಾಪ್ಟನ್ ಆಗಿದ್ದಾರೆ ಅಂತ ಕಮೆಂಟ್‌ ಮಾಡಿದ್ದಾರೆ.

ಕುಟುಂಬ ಸದಸ್ಯರು, ತಮ್ಮವರನ್ನು ಬಿಟ್ಟು ಬೇರೆ ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ಹಾಗಾಗಿ, ಬಹುತೇಕರ ಆಯ್ಕೆ ಗಿಲ್ಲಿ ಆಗಿದ್ದರು. ರಾಶಿಕಾ ಶೆಟ್ಟಿ ಸಹೋದರ, ಸೂರಜ್‌ ಅವರ ಹೆಸರನ್ನ ಘೋಷಿಸಿದರು.

ಇದನ್ನೂ ಓದಿ: Bigg Boss Kannada 12: ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಗಿಲ್ಲಿ! ಕಾವು ಉತ್ತರ ಏನು?

ಸಾಮಾನ್ಯವಾಗಿ ಕ್ಯಾಪ್ಟನ್ಸಿ ರೇಸ್‌ ಮೂಲಕ ಕ್ಯಾಪ್ಟನ್‌ ಆಯ್ಕೆ ಮಾಡಲಾಗುತ್ತದೆ. ಈವರೆಗೂ ಈ ರೀತಿ ಟಾಸ್ಕ್ ಆಡಿ ಗಿಲ್ಲಿ ಕ್ಯಾಪ್ಟನ್‌ ಆಗಲು ಸಾಧ್ಯವಾಗಿಲ್ಲ. ಇದೀಗ ಕಟುಂಬ ಸದಸ್ಯರ ಕಡೆಯಿಂದಾದರೂ ಕ್ಯಾಪ್ಟನ್‌ ಆಗುತ್ತಾರಾ? ಕಾದುನೋಡಬೇಕು.

Yashaswi Devadiga

View all posts by this author