ಬಿಗ್ ಬಾಸ್ (Bigg Boss Kannada 12) ಮನೆಯಿಂದ ಸ್ಪಂದನಾ (Spandana Somanna) ಔಟ್ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಇನ್ನು ಫಿನಾಲೆ ವೀಕ್‌ಗೆ (Finale Week) ಒಂದೇ ವಾರ ಇದೆ ಎಂದು ಸುದೀಪ್ (Sudeep) ಕೂಡ ಘೋಷಣೆ ಮಾಡಿದ್ದಾರೆ. ಅದಕ್ಕೂ ಮುಂಚೆ ಈಗ ನಾಮಿನೇಶನ್ (Nomination) ಪ್ರಕ್ರಿಯೆ ನಡೆದಿದೆ. ಈ ವೇಳೆ ರಕ್ಷಿತಾ (Rakshitha) ಹಾಗೂ ರಾಶಿಕಾ (Rashika Shetty) ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದಾರೆ.
ಹೊರ ಹೋಗುವಂತೆ ಕಿಕ್ ಔಟ್
ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದರು. ಮನೆಯಿಂದ ಹೊರ ಹೋಗುವಂತೆ ಕಿಕ್ ಔಟ್ ಮಾಡಬೇಕು. ಈ ವೇಳೆ ರಾಶಿಕಾ ಅವರು ರಕ್ಷಿತಾ ಹೆಸರನ್ನು ಸೂಚಿಸಿದರು. ವಾರ ಪೂರ್ತಿ ರಕ್ಷಿತಾ ತುಂಬಾ ಚೆನ್ನಾಗಿ ಮಾತಾಡ್ತಾರೆ. ವೀಕೆಂಡ್ ಬಂದಾಗ ಏನು ಮಾತಾಡಬೇಕು ಅದು ನಿಮಗೆ ಅರ್ಥ ಆಗಲ್ಲ. ಆಚೆ ಕಡೆನೂ ಗೊತ್ತಾಗಿದೆ. ನಮ್ಮ ಮನೆಯವರಿಗೆ ಗೊತ್ತಾಗಿದೆ. ಎಷ್ಟು ಮ್ಯಾನುಪುಲೆಟ್ ಹಾಗೂ ನಾಟಕ ಇದ್ದೀರಿ ಅನ್ನೋದು ಎಂದು ಹೇಳಿದ್ದಾರೆ. ಈ ಮಾತು ಕೇಳಿ ರಕ್ಷಿತಾ ಫುಲ್ ಗರಂ ಆಗಿದ್ದಾರೆ.
ನಿಮಗೆ ಫ್ಯಾಮಿಲಿ ಬಂದು ಎಲ್ಲವನ್ನು ಹೇಳಿಕೊಟ್ಟಿದ್ರಾ ಎಂದು ಕೇಳಿದ್ದಾರೆ ರಕ್ಷಿತಾ. ಫ್ಯಾಮಿಲಿಯನ್ನ ಮಧ್ಯಕ್ಕೆ ತರಬೇಡ ಅಂತ ರಕ್ಷಿತಾ ಮೇಲೆ ಗರಂ ಆಗಿದ್ದಾರೆ ರಾಶಿಕಾ. ಅಷ್ಟೇ ಅಲ್ಲ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲು ಹೋಗಿದ್ದಾರೆ.
ಸ್ಪಂದನಾ ಔಟ್
ಇನ್ನು ಸುದೀಪ್ ಅವರು ಸಹ ಈ ವಾರದ ಎಲಿಮಿನೇಷನ್ ಅನ್ನು ಸರಳವಾಗಿಯೇ ಮುಗಿಸಿದರು. ಈ ಹಿಂದಿನ ಕೆಲ ವಾರ ಬೇರೆ ಬೇರೆ ರೀತಿಯಲ್ಲಿ ಎವಿಕ್ಷನ್ ಅನ್ನು ಕೆಲ ಆಕ್ಟಿವಿಟಿಗಳ ಮೂಲಕ ಮಾಡಲಾಗಿತ್ತು. ನಾಮಿನೇಷನ್ನಿಂದ ಸೇಫ್ ಆಗುವುದಕ್ಕೂ ಆಕ್ಟಿವಿಟಿ ನೀಡಲಾಗಿತ್ತು. ಆದರೆ ಈ ವಾರ ಅದೇನೂ ಇಲ್ಲದೆ, ಬಹಳ ಸರಳವಾಗಿ ಸ್ಪಂದನಾರ ಹೆಸರು ಹೇಳುವ ಮೂಲಕ ಎವಿಕ್ಷನ್ ಪ್ರಕ್ರಿಯೆ ಪೂರ್ಣ ಮಾಡಲಾಯ್ತು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಕಿಚಾಯಿಸಿದ ಕಿಚ್ಚ
ಸ್ಪಂದನಾ ಅವರು ಇಷ್ಟ ದಿನ ಚೆನ್ನಾಗಿಯೇ ಆಡಿದರು. ಯಾರೊಟ್ಟಿಗೂ ವೈರತ್ವ ಕಟ್ಟಿಕೊಳ್ಳದೆ ಎಲ್ಲರೊಟ್ಟಿಗೂ ಬಾಂಧವ್ಯ ಇರಿಸಿಕೊಂಡು, ಸ್ನೇಹದೊಂದಿಗೆ ಆಟ ಆಡಿದರು. ಧನುಶ್, ಕಾವ್ಯಾ ಜೊತೆಗೆ ವಿಶೇಷ ಬಂಧ ಇರಿಸಿಕೊಂಡಿದ್ದ ಸ್ಪಂದನಾ, ರಘು, ಗಿಲ್ಲಿ ಅವರಿಗೂ ಗೆಳೆಯರಾಗಿದ್ದರು. ಆದರೆ ರಕ್ಷಿತಾ ಜೊತೆಗೆ ಕಳೆದ ಕೆಲ ವಾರಗಳಿಂದಲೂ ವೈರತ್ವ ಬೆಳೆಸಿಕೊಂಡಿದ್ದರು.