Bigg Boss Kannada 12: ಅಬ್ಬಬ್ಬಾ! ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಎಷ್ಟೊಂದು ಕೋಪ! ಸಿಕ್ಕಿದ್ದೇ ಚಾನ್ಸ್ ಅಂತ ಫುಲ್ ಪಂಚ್!
Bigg Boss 12 Promo: ಬಿಗ್ ಬಾಸ್ ಕನ್ನಡ 12ರ ಇಂದಿನ (ಜನವರಿ 4) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ 'ಪಂಚಿಂಗ್ ಬ್ಯಾಗ್' ಚಟುವಟಿಕೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರು ಧ್ರುವಂತ್ ವಿರುದ್ಧ ಅಬ್ಬರಿಸಿದ್ದು, ಪಂಚಿಂಗ್ ಬ್ಯಾಗ್ ಕಿತ್ತುಹೋಗುವಷ್ಟು ಜೋರಾಗಿ ಹೊಡೆದಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರದ ಸೂಪರ್ ಸಂಡೇ ವಿಥ್ ಬಾದ್‌ಷಾ ಸುದೀಪ ಸಂಚಿಕೆ ಮಸ್ತ್ ಆಗಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಇದು ಗೊತ್ತಾಗಿದೆ. ಮನೆಯ ಸದಸ್ಯರಿಗೆ ಸುದೀಪ್ ಅವರು ಒಂದು ಚಟುವಟಿಕೆ ನೀಡಿದ್ದಾರೆ. ಅದೇನೆಂದರೆ, ಮನೆಯೊಳಗೆ ಇರುವ ಪಂಚಿಂಗ್ ಬ್ಯಾಗ್‌ಗೆ ಪಂಚ್ ಮಾಡಬೇಕು, ಅದರ ಮೇಲೆ ಮನೆಯ ಸದಸ್ಯರ ಫೋಟೋವನ್ನು ಹಚ್ಚಿ, ಮನಸ್ಸಿಲ್ಲಿ ಏನು ಹೇಳಬೇಕೋ ಎಂದಿರುತ್ತೋ, ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಎಂದು ಸುದೀಪ್ ಹೇಳಿದ್ದಾರೆ.
ಕೆರಳಿದ ಅಶ್ವಿನಿ, ರಾಶಿಕಾ ಶೆಟ್ಟಿ
ಸಿಕ್ಕಿದ್ದೇ ಚಾನ್ಸ್ ಅಂತ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಅವರು ರೊಚ್ಚಿಗೆದ್ದಿದ್ದಾರೆ. ಏನೂ ಹೇಳಬೇಕೋ, ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಎಂದು ಸುದೀಪ್ ಹೇಳಿದ್ದೇ ತಡ, ಅಶ್ವಿನಿ ಗೌಡ ಅವರ ಫೋಟೋವನ್ನು ಪಂಚಿಂಗ್ ಬ್ಯಾಗ್‌ಗೆ ಅಂಟಿಸಿ ರಾಶಿಕಾ, "ಬರೀ ಮ್ಯಾನಿಪೂಲೇಟ್ ಮಾಡಿ, ಎದುರು ಇರುವ ವ್ಯಕ್ತಿಯನ್ನು ಬೇರೆ ಥರ ತೋರಿಸುವುದು ಇವರ ಗುಣ" ಎಂದು ಪಂಚಿಂಗ್ ಬ್ಯಾಗ್ ಪಂಚ್ ಮಾಡಿದ್ದಾರೆ.
ಇದಕ್ಕೆ ಕೌಂಟರ್ ಕೊಟ್ಟ ಅಶ್ವಿನಿ ಗೌಡ, "ಮಿಸ್ ಯೂನಿವರ್ಸ್ ಅಂದುಕೊಂಡಿರುವ ರಾಶಿಕಾ.. ಇನ್ನೊಂದು ಟ್ರ್ಯಾಕ್, ಮತ್ತೊಂದು ಟ್ರ್ಯಾಕ್ ಅಂತ ನಾನು ಶುರು ಮಾಡಿಕೊಂಡಿರಲಿಲ್ಲ" ಎಂದು ಹೇಳಿದ್ದಾರೆ. ಇದು ರಾಶಿಕಾಗೆ ಒಂಚೂರು ಬೇಸರ ಮಾಡಿದ್ದಂತೂ ಸುಳ್ಳಲ್ಲ.
ಬಿಗ್ ಬಾಸ್ ಪ್ರೋಮೋ
ರಕ್ಷಿತಾ ಅಬ್ಬರಕ್ಕೆ ಎಲ್ಲರೂ ಶಾಕ್
ನಂತರ ಈ ಅವಕಾಶವು ರಕ್ಷಿತಾ ಶೆಟ್ಟಿ ಅವರಿಗೆ ಸಿಕ್ಕಿತ್ತು. ಅವರು ಧ್ರುವಂತ್ ಫೊಟೋವನ್ನು ಅಂಟಿಸಿ, ಪಂಚ್ ಮಾಡಲು ಆರಂಭಿಸಿದರು. "ಒಬ್ಬ ವ್ಯಕ್ತಿಗೆ ಅಸಹ್ಯ ಅಂತೀರಲ್ಲ, ಯಾರೂ ನಿಮಗೆ ಅಧಿಕಾರ ನೀಡಿದರು" ಎಂದು ಅಬ್ಬರಿಸಿದರು. ರಕ್ಷಿತಾ ಪಂಚ್ ಮಾಡುವ ರೀತಿಗೆ ಪಂಚಿಂಗ್ ಬ್ಯಾಗ್ ಕಿತ್ತೇ ಹೋಯಿತು. ಆದರೂ ಅದನ್ನು ಎತ್ತಿಕೊಂಡು ಪಂಚ್ ಹೊಡೆಯುತ್ತಲೇ ಇದ್ದರು ರಕ್ಷಿತಾ. "ಇವರಿಗೆ ಎಷ್ಟು ಹೊಡೆದರೂ ಸಾಕಾಗಲ್ಲ" ಎನ್ನುತ್ತಲೇ ಪಂಚ್ ಮಾಡಿದರು ರಕ್ಷಿತಾ. ಇದನ್ನು ಕಂಡ ಧ್ರುವಂತ್‌ಗೆ ನಗು ತಡೆಯಲು ಸಾಧ್ಯವಾಗಲಿಲ್ಲ.
ಇದರ ಪೂರ್ಣ ಸಂಚಿಕೆಯು ಇಂದು (ಜ.4) ರಾತ್ರಿ ಪ್ರಸಾರವಾಗಲಿದೆ. ಇನ್ನುಳಿದ ಸದಸ್ಯರು ಯಾರಿಗೆಲ್ಲಾ ಪಂಚ್ ಮಾಡಿದರು.