ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಟಾಸ್ಕ್ ಅಂತ ಬಂದಾಗ, ಹುಡುಗರಿಗೂ ಫೈಟ್ ಕೊಡ್ತಿರುವ ಕಂಟೆಸ್ಟೆಂಟ್ ಅಂದರೆ ರಾಶಿಕಾ ಶೆಟ್ಟಿ (Rashika Shetty). ಅದೆಷ್ಟೊ ಬಾರಿ ಕ್ಯಾಪ್ಟನ್ಸಿ ರೇಸ್‌ಗೆ ಬಂದರೂ ಕೊನೆಯ ಕ್ಷಣದಲ್ಲಿ ಮಿಸ್ ಆಗ್ತಾ ಇತ್ತು. ಆದರೆ ಈ ವಾರ ರಾಶಿಕಾ ಕ್ಯಾಪ್ಟನ್ (Rashika Captain) ಆಗಿ ಹೊರ ಹೊಮ್ಮಿದ್ದಾರೆ. ಪ್ರತೀ ಟಾಸ್ಕ್‌ನಲ್ಲೂ ಬೆಸ್ಟ್ ಪರ್ಫಾರ್ಮೆನ್ಸ್ ಕೊಡ್ತಿರುವ ರಾಶಿಕಾಗೆ ಅದೃಷ್ಟ ಕೈ ಕೊಡ್ತಾ ಇದ್ದರೂ, ಈ ಬಾರಿ ರಾಶಿಕಾ ವಿನ್ ಆಗಿದ್ದಾರೆ.
ಅತ್ಯಂತ ಕಠಿಣ ಹಾಗೂ ಚಾಲೆಂಜಸ್ ರೀತಿಯ ಟಾಸ್ಕ್
ಈ ವಾರ ಇಡೀ ಬಿಗ್ ಬಾಸ್ ಮನೆ ವಿಲನ್ ಮನೆಯಾಗಿತ್ತು. ವಿಲನ್ ಕ್ಯಾಪ್ಟನ್ಸಿ ರೇಸ್‌ಗೆ ಕೆಲವು ಟಾಸ್ಕ್‌ವನ್ನು ನೀಡಿದ್ದರು. ಅತ್ಯಂತ ಕಠಿಣ ಹಾಗೂ ಚಾಲೆಂಜಸ್ ರೀತಿಯ ಟಾಸ್ಕ್ ಕೊಡ್ತಾ ಇದ್ದರು. ಅಂತೂ ರಾಶಿಕಾ ವಿನ್ ಆಗಿದ್ದಾರೆ. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ, ಡೈರೆಕ್ಟ್ ಆಗಿ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿಯಾಗಲು ಆಫರ್ ಪಡೆದುಕೊಂಡರು. ರಜತ್ ಹಾಗೂ ಅಶ್ವಿನಿ ಇಬ್ಬರಿಗೆ ಟಾಸ್ಕ್ ಕೊಟ್ಟಾಗ, ಎರರು ರೌಂಡ್‌ನಲ್ಲಿ ರಜತ್ ವಿನ್ ಆದ್ರು.
ಇದನ್ನೂ ಓದಿ: Bigg Boss Kannada 12: ಚೈತ್ರಾ ಜೊತೆ ಕೈ ಜೋಡಿಸಿದ ರಜತ್! ದುರಹಂಕಾರ ನಮ್ಮ ಹತ್ರ ಬೇಡ ಅಂತ ಅಶ್ವಿನಿಗೆ ಆವಾಜ್!
ರಜತ್ ಅವರಿಗೆ ಮೊದಲನೇಯದ್ದು ಹೇರ್ ಕಲರ್ ಮಾಡಿಸೋದು. ರಾಶಿಕಾ ಈ ಟಾಸ್ಕ್‌ಗೆ ಒಪ್ಪಿಗೆ ಸೂಚಿಸಿರಲಿಲ್ಲ. ಆ ಬಳಿಕ ಕಾವ್ಯ ಒಪ್ಪಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದರು. ನಂತರದಲ್ಲಿ ಟ್ಯಾಟೂ ಟಾಸ್ಕ್ ಕೂಡ ರಜತ್ ಅವರೇ ಸ್ವತಃ ಹಾಕಿಸಿಕೊಂಡು ವಿನ್ ಆದ್ರು ಮೂರನೇ ಬಾರಿ ಮಾಳು ಅವರು ಹೇರ್ ಕಟ್ ಮಾಡಿಸಿಕೊಂಡು ಎರಡು ಪಾಯಿಂಟ್ಸ್ ಒಮ್ಮೆಲೆ ಪಡೆದುಕೊಂಡರು.
ಕೊನೆಯಲ್ಲಿ ರಜತ್ ಅವರು ಕೆಲವು ಸದಸ್ಯರನ್ನ ಆಯ್ಕೆ ಮಾಡಿ, ಅಂತೂ ರಾಶಿಕಾ ಕ್ಯಾಪ್ಟನ್ ಆದರು. ಕಾವ್ಯ, ಸೂರಜ್, ಅಶ್ವಿನಿ, ಗಿಲ್ಲಿ, ರಾಶಿಕಾ ನಡುವೆ ಬಾಲ್ ಟಅಸ್ಕ್ ಇತ್ತು. ಈ ಟಾಸ್ಕ್‌ನಲ್ಲಿ ಅತ್ಯಂತ ಹೆಚ್ಚು ಬಾಲ್ ಸಂಗ್ರಹಿಸಿ ರಾಶಿಕಾ ವಿನ್ ಆಗಿ ಕ್ಯಾಪ್ಟನ್ ಆಗಿದ್ದಾರೆ.
ಚೈತ್ರಾ-ಅಶ್ವಿನಿ ನಡುವೆ ಮಾತಿನ ಚಕಮಕಿ
ಟಾಸ್ಕ್ ಬಳಿಕ ಅಶ್ವಿನಿ ಹಾಗೂ ಚೈತ್ರಾ ನಡವೆ ಮಾತಿನ ಚಕಮಕಿ ಆಯ್ತು. ಕೂತಿರೋರು ಯಾರಿಗೂ ಏನನ್ನೂ ಹೇಳಿಕೊಡಬಾರದು ಅಂತ ಅಶ್ವಿನಿ ಕೂಗಾಡಿದ್ದಾರೆ. ರೂಲ್ಸ್ ಗೊತ್ತಿಲ್ಲದೆ ಹತ್ತು ಸಲ ಪಾಠ ಮಾಡಿಕೊಳ್ಳುವವರು ನನಗೆ ಹೇಳೋ ಅವಶ್ಯಕತೆ ಇಲ್ಲ ಅಂತ ಚೈತ್ರಾ ಇದಕ್ಕೆ ಟಾಂಗ್ ಕೊಟ್ಟಿದ್ದಾರೆ. ಉಸ್ತುವಾರಿ ಕೇಳುವ ಅಧಿಕಾರ ಪ್ರತಿಯೊಬ್ಬರಲ್ಲಿಯೂ ಇದೆ ಎಂದಿದ್ದಾರೆ ಅಶ್ವಿನಿ.
ಕೊನೆಗೆ ಮಧ್ಯೆ ಪ್ರವೇಶಿಸಿದ ರಜತ್ ಉರಿಯುವ ಬೆಂಕಿಗೆ ತುಪ್ಪ ಸುರಿದು ಆಡಕ್ಕೆ ಯೋಗ್ಯತೆ ಇಲ್ಲ ಅಂದ್ರು ಇಂಥ ಡ್ರಾಮಾಗಳಿಗೆ ಏನೂ ಕೊರತೆ ಇಲ್ಲ ಎಂದರು. ಬಳಿಕ ಚೈತ್ರಾ ಕೂಡ ಫೂಟೇಜ್ ಬೇಕು ಅಂತ ಕೂಗಾಡ್ತಾ ಇದ್ದಾರೆ ಅಂತ ಅಶ್ವಿನಿಗೆ ಟಾಂಗ್ ಕೊಟ್ಟರು. ಚೈತ್ರಾಗೆ ಕೂಡ ಈ ವೇಳೆ ಅಶ್ವಿನಿ ಕೂಗಾಡಿದ್ದಾರೆ.