Bigg Boss Kannada 12: ಬಿಗ್ಬಾಸ್ ಮನೆಯಿಂದ ರಿಷಾ ಔಟ್
Risha Bigg Boss Kannada : ರಿಷಾ ಆಟ ಅಂತ ಬಂದರೆ ಅಷ್ಟಾಗಿ ಸಾಮರ್ಥ್ಯ ತೋರಿಸಿಲ್ಲ. ಬಂದ ದಿನದಿಂದಲೇ ಎಲ್ಲರ ಮೇಲೆ ರಿಷಾ ಅವರ ಕಿರುಚಾಟ ಜೋರಾಯ್ತು. ಅದರಲ್ಲು ಮಸಿ ಬಳಿಯುವ ಟಾಸ್ಕ್‌ನಲ್ಲಿ ಅನೇಕ ಸ್ಪರ್ಧಿಗಳು ಅವರಿಗೆ ಮಸಿ ಬಳಿದರು. ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದರು. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ರಿಷಾ ಔಟ್ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್ ಅವರು ಈ ವಾರ ನಾಮಿನೇಟ್ ಆಗಿದ್ದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಿಂದ ರಿಷಾ (Risha Bigg Boss Kannada 12) ಔಟ್ (Out) ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್ ಅವರು ಈ ವಾರ ನಾಮಿನೇಟ್ (Nomination This Week) ಆಗಿದ್ದರು. ಕಳೆದ ವಾರ ಕಾಕ್ರೋಚ್ ಸುಧಿ ಅವರು ಔಟ್ ಆಗಿದ್ದರು.
ಸೇಫ್ ಮಾಡಿದ್ದ ಸ್ಪರ್ಧಿಗಳು!
ಬಾತ್‌ರೂಮ್ ವಿಚಾರಕ್ಕೆ ಗಿಲ್ಲಿ (Gilli) ನಟ ಮತ್ತು ರಿಷಾ ನಡುವೆ ಜಗಳ ಆಗಿತ್ತು. ಜಗಳದ ಭರದಲ್ಲಿ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದರು. ಆಗಲೇ ರಿಷಾ ಔಟ್ ಆಗ್ತಾರೆ ಅಂತ ಅಂದುಕೊಂಡಿದ್ದರು ವೀಕ್ಷಕರು. ಆದರೆ ಬಿಗ್ ಬಾಸ್ ಅವರಿಗೊಂದು ಚಾನ್ಸ್ ಕೊಟ್ಟಿತ್ತು. ಸ್ಪರ್ಧಿಗಳು ಕೂಡ ರಿಷಾ ಅವರಿಗ ಒಂದು ಚಾನ್ಸ್ ಕೊಟ್ಟು ಉಳಿಸಿಕೊಂಡಿದ್ದರು. ಬದಲಾಗಿ ಒಂದು ದಿನ ಕಳಪೆ ನೀಡಿದ್ದರು.
ಇದನ್ನೂ ಓದಿ: Bigg Boss Kannada 12: ಆಡಿದ ಮಾತಿಗೆ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆ ಕೇಳಿದ ಗಿಲ್ಲಿ
ಗಲಾಟೆಗೆ ಸೈ
ರಿಷಾ ಆಟ ಅಂತ ಬಂದರೆ ಅಷ್ಟಾಗಿ ಸಾಮರ್ಥ್ಯ ತೋರಿಸಿಲ್ಲ. ಬಂದ ದಿನದಿಂದಲೇ ಎಲ್ಲರ ಮೇಲೆ ಕಿರುಚಾಟ ಜೋರಾಯ್ತು. ಅದರಲ್ಲು ಮಸಿ ಬಳಿಯುವ ಟಾಸ್ಕ್‌ನಲ್ಲಿ ಅನೇಕ ಸ್ಪರ್ಧಿಗಳು ಅವರಿಗೆ ಮಸಿ ಬಳಿದರು. ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದರು. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದರು.
ಮಾಳು ಜೊತೆ ಅಸಮಾಧಾನ
ಇನ್ನು ಮಾಳು ಅವರು ಕ್ಯಾಪ್ಟನ್ ಆದ ಸಂದರ್ಭದಲ್ಲಿ ರಿಷಾ ಹಾಗೂ ಅವರಿ ಮಧ್ಯೆ ಜಗಳವೂ ಆಗಿತ್ತು. ಬಾತ್‌ರೂಮ್ ತೊಳಿ ಎಂದು ರಿಷಾಗೆ ಮಾಳು ಹೇಳಿದ್ದಾರೆ. ಆದರೆ, ನಾನು ಮಾಡಲ್ಲ ಅಂತ ರಿಷಾ ಹಠ ಹಿಡಿದಿದ್ದರು. ಅವತ್ತು ರಿಷಾಗೆ ಮಾಳು ಬಾತ್‌ರೂಮ್ ಕ್ಲೀನಿಂಗ್‌ಗೆ ಹಾಕಿದಾಗ, “ನನ್ನನ್ನ ಪರ್ಸನಲ್ ಆಗಿ ಟಾರ್ಗೆಟ್ ಮಾಡಿ ಮಾಳು ಈ ಕೆಲಸ ಕೊಟ್ಟಿದ್ದಾರೆ.
ನಾನು ಬಾತ್‌ರೂಮ್ ತೊಳಿಯಲ್ಲ ಅಂತ ರಿಷಾ ಅತ್ತು ಹೈಡ್ರಾಮಾ ಮಾಡಿದ್ದರು. ಕಿಚನ್ ಏರಿಯಾದಲ್ಲಿ ಮಾಳು, ರಘು , ರಕ್ಷಿತಾ ಇದ್ದರು. ರಿಷಾ ಸುಮ್ಮನೆ ನಕ್ಕಿದ್ದಾರೆ.ಇದಕ್ಕೆ ಮಾಳು ಅವರು, ʻಸುಮ್ಮಸುಮ್ಮನೇ ನಗೋರಿಗೆ ಹುಚ್ಚುರು ಅಂತಾರೆʼ ಎಂದಿದ್ದರು. ಇದು ರಿಷಾ ಅವರನ್ನ ಕೆರಳಿಸಿತ್ತು. ʻನಿಮ್ಮ ಈ ವರ್ತನೆ ಮನೆಯಲ್ಲಿ ಇಟ್ಟುಕೊಳ್ಳಿʼ ಅಂತ ಮಾಳು ಅವರಿಗೆ ರಿಷಾ ಕೂಗಾಡಿಕೊಂಡು ಹೇಳಿದ್ದರು.
ಜಾಹ್ನವಿ ಜೊತೆಗೂ ಜಗಳ ಮಾಡಿಕೊಂಡಿದ್ದ ರಿಷಾ
ಕಿಚ್ಚ ಸುದೀಪ್ ಅವರು, ನಿಮ್ಮ ದೃಷ್ಟಿಕೋನದಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮೇಲೆ ಅಭಿಪ್ರಾಯ ತಿಳಿಸಿ ಎಂದು ಇತರೆ ಸ್ಪರ್ಧಿಗಳನ್ನ ಕೇಳಿದ್ದರು. ಇದಕ್ಕೆ ಅಶ್ವಿನಿ ಅವರು, ರಿಷಾ ಬಗ್ಗೆ ನನ್ಗೆ ತುಂಬಾ ಪಾಸಿಟಿವ್ ಅಂತ ಅನಿಸಲಿಲ್ಲ ಎಂದಿದ್ದರು. ಬಳಿಕ ಜಾನ್ವಿ, ರಿಷಾ ಅವರು ಚಂದ್ರಪ್ರಭ ಜೊತೆಗೆ ಇರಬಹುದು ಅಥವಾ ಗಿಲ್ಲಿ ಜೊತೆಗೆ ಇರಬಹುದು ಅವರು ಫನ್ ಆಗೇ ಇರ್ತಾರೆ.. ಆದ್ರೆ ನಮ್ಗೆ ಅದು ಎಲ್ಲೊ ಒಂದುಕಡೆ ಸಣ್ಣದಾಗಿ ಮುಜುಗರ ಆಗುತ್ತೆ ಎಂಬ ಸ್ಟೇಟ್ಮೆಂಟ್ ಕೊಟ್ಟಿದ್ದರು.
ಜಾನ್ವಿ ನೀಡಿದ ಈ ಹೇಳಿಕೆಗೆ ಕೆರಳಿ ಕೆಂಡವಾದ ರಿಷಾ, ನೀವು ಆಡಿದಾಗ ಆಟ ಚೆನ್ನಾಗಿರುತ್ತೆ.. ನಾವು ಆಡಿದ್ರೆ ಅದು ಅಸಹ್ಯ ಥೂ ಆಗುತ್ತಾ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಜಗಳ ನಡೆಯುತ್ತಿರುವಾಗ ಅತ್ತ ಕಿಚ್ಚ ಸುದೀಪ್ ಇದನ್ನೆಲ್ಲ ಗಮನಿಸಿದ್ದರು.
ಮಿಸ್ ಕರ್ನಾಟಕ 2020 ರನ್ನರ್ ಅಪ್
ರಿಷಾ ಗೌಡ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ. ಅಸಲಿಗೆ ರಿಷಾ ಗೌಡ ಕ್ರೀಡಾಪಟು ಆಗಬೇಕೆಂಬ ಕನಸು ಹೊತ್ತಿದ್ದವರು. ಅವರು ಸ್ಪಿರಂಟರ್ ಆಗಿದ್ದರು. ವೇಗದ ಓಟಗಾರ್ತಿ ಆಗಿದ್ದರು. ಲಿಗಮೆಂಟ್ ಫ್ರ್ಯಾಕ್ಚರ್ ಆಗಿದ್ದಕ್ಕೆ ಅವರು ಕ್ರೀಡೆ ಬಿಡಬೇಕಾಯ್ತಂತೆ.
ಇದನ್ನೂ ಓದಿ: Bigg Boss Kannada 12: ಎಮೋಷನಲ್ ಬ್ಲಾಕ್ಮೇಲ್ ಮಾಡ್ತೀದ್ದೀರಾ? ಊಟ ಬಿಟ್ಟಿದ್ದು ಯಾಕೆ? ಅಶ್ವಿನಿಗೆ ಕಿಚ್ಚನ ಕ್ಲಾಸ್
ಆಸ್ಟಿನ್ ನ ಮಹಾನ್ ಮೌನ’, ‘ಬೆಂಗಳೂರು ಇನ್’, ‘ಜೂನಿಯರ್’, ‘ಗ್ಯಾಂಗ್ಸ್ಟರ್ ಆಫ್ ರಾಜಧಾನಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.ಮಿಸ್ ಕರ್ನಾಟಕ 2020 ರನ್ನರ್ ಅಪ್ ಆಗಿರುವ ರಿಷಾ ಗೌಡಗೆ ರಂಗಭೂಮಿ ನಂಟು ಕೂಡ ಇದೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಕ್ರೇಜಿ ಕೀರ್ತಿ ಅನ್ನೋ ಸಿನಿಮಾದಿಂದ ಬಣ್ಣದ ಲೋಕಕ್ಕೆ ಎಂಟ್ರ ಕೊಟ್ಟಿದ್ದಾರೆ.