ಬಿಗ್ ಬಾಸ್ ವೀಕೆಂಡ್‌ನಲ್ಲಿ ಸುದೀಪ್ (Sudeep) ಕೆಲವೊಂದು ಚಟುವಟಿಕೆ ಕೊಡುತ್ತಾರೆ. ಈ ವಾರ ಹಾವು ಏಣಿ ಟಾಸ್ಕ್ ಕೊಟ್ಟಿದ್ದರು. ಗಿಲ್ಲಿ ನನಗೆ ಹಾವಾಗಿದ್ದಾರೆ (Snake) ಅಂತ ಸ್ವತಃ ಕಾವ್ಯ ಹೇಳಿದರು. ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ (Gilli Nata) ಹಾಗೂ ಅಶ್ವಿನಿ ಗೌಡ (Ashwini Gowda) ಮಧ್ಯೆ ಸಾಕಷ್ಟು ಜಗಳ ಆಗಿದೆ. ಆರಂಭದ ದಿನಗಳಿಂದಲೂ ಇವರು ಜಗಳ ಆಡಿಕೊಂಡಿದ್ದಾರೆ. ಈಗ ಯಾರೆಲ್ಲ ಗಿಲ್ಲಿ ವಿರುದ್ಧ ಮಾತನಾಡಿದ್ರು?
ಕಾವ್ಯ ಹೀಗೆ ಹೇಳೋದಾ?
ಒಬ್ಬರು ನನ್ನ ಜರ್ನಿಯಲ್ಲಿ ಏಣಿ ಆಗಿದ್ದಾರೆ, ಇನ್ನೊಬ್ಬರು ಹಾವಾಗಿದ್ದಾರೆ ಅನ್ನೋದನ್ನ ಸ್ಪರ್ಧಿಗಳು ಹೇಳಬೇಕಿತ್ತು. ಗಿಲ್ಲಿ ಅವರು ಕಾವ್ಯ ಅವರು ತನ್ನ ಪಾಲಿಗೆ ಏಣಿ ಆಗಿದ್ದಾರೆ ಅಂದರು. ಅದೇ ರಘು ಅವರು ಮಾಳು ಅಂದರು. ಆದರೆ ರಘು ಅವರು ಗಿಲ್ಲಿ ತನಗೆ ಹಾವಾಗಿದ್ದಾನೆ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್ ನೇರ ಮಾತು
ಅಶ್ವಿನಿ ಕೂಡ ಗಿಲ್ಲಿ ಅವರೇ ಹಾವಾಗಿದ್ದಾರೆ ಎಂದರು. ರಘು ಗಿಲ್ಲಿ ಬಗ್ಗೆ ಕಾರಣ ಕೊಟ್ಟಿದ್ದು ಹೀಗೆ. ಬಂದಾಗಿನಿಂದ ಗಿಲ್ಲಿ ನನ್ನ ವ್ಯಕ್ತಿತ್ವ ಚೇಂಜ್ ಮಾಡಲು ಟ್ರೈ ಮಾಡ್ತಾನೆ ಇದ್ದರು. ಅಶ್ವಿನಿ ಮಾತನಾಡಿ, ಮನಸ್ಸನ್ನ ಒಡೆಯುವುದು. ನಿರಂತರವಾಗಿ ಹಾಗೇ ಮಾಡ್ತಾ ಇರೋದು ಗಿಲ್ಲಿ. ಕಾವ್ಯ ಮಾತನಾಡಿ, ನನ್ನ ಕಾವು ಅಂತ ರೇಗಿಸೋದಾಗಿರಲಿ, ಬೇರೆ ಅವರ ಕಣ್ಣಿಗೆ ಬೇರೆ ಥರ ಕಾಣಿಸತ್ತೆ, ಹರ್ಟ್ ಆಗ್ತಿದೆ, ಅಂದಾಗ ಅಲ್ಲೇ ಸ್ಟಾಪ್ ಮಾಡ್ತಾನೆ ಅಂದುಕೊಂಡಿದ್ದೆ ಎಂದಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಗಿಲ್ಲಿ ಸದಾ ಕಾವು ಕಾವು ಅಂತಲೇ ಇರ್ತಾರೆ ಎನ್ನೋದು ಕೆಲವು ಸದಸ್ಯರ ಅಭಿಪ್ರಾಯ. ಕಾವ್ಯ ಅವರಿಗೂ ಇದು ಸಾಕಷ್ಟು ಬಾರಿ ಬೇಸರವೂ ಆಗಿದೆ. ಗಿಲ್ಲಿಯಿಂದ ಕಾವ್ಯ ಅನ್ನೋ ಮಾತು ಅವರಿಗೆ ಬೇಸರ ಉಂಟು ಮಾಡಿತ್ತು.
ಅಷ್ಟೇ ಅಲ್ಲ ಈ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಈ ಬಗ್ಗೆಯೇ ಕಾರಣ ಕೊಟ್ಟಿದ್ದರು ಮನೆಮಂದಿ. ನಿನ್ನೆ ಸುದೀಪ್ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜಾಹ್ನವಿ ಹಾಗೂ ಅಶ್ವಿನಿ ಅವರ ಉದಾಹರಣೆ ಇಟ್ಟುಕೊಂಡು ಕಾವ್ಯ-ಗಿಲ್ಲಿ ಹಾಗೂ ರಾಶಿಕಾ-ಸೂರಜ್ ಜೋಡಿಗೆ ಖಡಕ್ ಆಗಿಯೇ ನೇರವಾಗಿಯೇ ಸುದೀಪ್ ಮಾತನಾಡಿದರು.
ಇದನ್ನೂ ಓದಿ: Bigg Boss Kannada 12: ಸುದೀಪ್ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ? ವಿಡಿಯೋ ಹಾಕಿ ಕಿಚ್ಚ ಕ್ಲಾರಿಟಿ ಕೊಟ್ಟಿದ್ದೇನು?
ಮನೆಯಲ್ಲಿ ಕೆಲವರು ಜೋಡಿಯಾಗಿ ಆಡುತ್ತಿದ್ದಾರೆ. ಇದು ಸರಿಯಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಪ್ರಭಾವವನ್ನು ಬೀರುತ್ತಿದ್ದಾರೆ. ಹಾಗೆ ಮಾಡಿದವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಜಾಹ್ನವಿ-ಅಶ್ವಿನಿ ಒಟ್ಟಾಗಿದ್ದರು. ಈಗ ಜಾಹ್ನವಿ ಹೋಗಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್. ‘ಅಂಚಲ್ಲಿ ಒಬ್ಬರೇ ಕೂತಿದ್ದಾರೆ ನೋಡಿ’ ಎಂದು ಅಶ್ವಿನಿ ಉದಾಹರಣೆ ಕೊಟ್ಟು ಹೇಳಿದರು.