ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಸುದೀಪ್​ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ? ವಿಡಿಯೋ ಹಾಕಿ ಕಿಚ್ಚ ಕ್ಲಾರಿಟಿ ಕೊಟ್ಟಿದ್ದೇನು?

Rajath: ರಜತ್‌ ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸುದೀಪ್ ಅವರಿಗೆ ಅವರು ಏಕವಚನದಲ್ಲಿ ಮಾತನಾಡಿದರು ಎಂಬ ವಿಡಿಯೋ ವೈರಲ್ ಆಗಿತ್ತು. ‘ಸುದೀಪ್ ಸರ್ ಅದನ್ನೇ ಹೇಳ್ತಾ ಇರ್ತಾನೆ’ ಎಂದು ಕಾವ್ಯಾ ಬಳಿ ಮಾತನಾಡುವಾಗ ಹೇಳಿದ್ದರು ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಆಗಿದೆ. ಕಾವ್ಯ ಜೊತೆ ಮಾತನಾಡುವ ಭರದಲ್ಲಿ ಸುದೀಪ್‌ ಅವರಿಗೆ ಏಕವಚನ ರಜತ್‌ ಬಳಸಿದ್ರಾ? ಸುದೀಪ್‌ ಕೊಟ್ಟ ಕ್ಲಾರಿಟಿ ಆದ್ರೂ ಏನು?

ಸುದೀಪ್​ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 7, 2025 11:17 AM

ಕಿಚ್ಚ ಸುದೀಪ್‌ (Sudeep) ಅವರು ಈ ವೀಕೆಂಡ್‌ನಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಷ್ಟೇ ಅಲ್ಲ ಅನೇಕ ಗಾಸಿಪ್‌ಗಳಿಗೂ (Gossip) ಸ್ಪಷ್ಟನೆ ಕೊಟ್ಟಿದ್ದಾರೆ. ರಜತ್‌ (Rajath) ವಿಚಾರವಾಗಿ, ವಿಟಿ ಪ್ಲೇ ಮಾಡಿ, ಕ್ಲಾರಿಟಿ ಕೊಟ್ಟಿದ್ದಾರೆ. ಕಾವ್ಯ (Kavya) ಜೊತೆ ಮಾತನಾಡುವ ಭರದಲ್ಲಿ ಸುದೀಪ್‌ ಅವರಿಗೆ ಏಕವಚನ (Singular) ರಜತ್‌ ಬಳಸಿದ್ರಾ? ಸುದೀಪ್‌ ಕೊಟ್ಟ ಕ್ಲಾರಿಟಿ ಆದ್ರೂ ಏನು?

ವಿಡಿಯೋ ವೈರಲ್

ರಜತ್‌ ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸುದೀಪ್ ಅವರಿಗೆ ಅವರು ಏಕವಚನದಲ್ಲಿ ಮಾತನಾಡಿದರು ಎಂಬ ವಿಡಿಯೋ ವೈರಲ್ ಆಗಿತ್ತು. ‘ಸುದೀಪ್ ಸರ್ ಅದನ್ನೇ ಹೇಳ್ತಾ ಇರ್ತಾನೆ’ ಎಂದು ಕಾವ್ಯಾ ಬಳಿ ಮಾತನಾಡುವಾಗ ಹೇಳಿದ್ದರು ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಆಗಿದೆ. ಇದಕ್ಕೆ ರಜತ್ ಸ್ಪಷ್ಟನೆ ನೀಡಿ ಸುದೀಪ್ ಸರ್ ಅದನ್ನೇ ಹೇಳ್ತಾರ್​ ತಾನೆ ಎಂದು ನಾನು ಹೇಳಿದ್ದು ಎಂದರು.

ಇದನ್ನೂ ಓದಿ: Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್‌ ನೇರ ಮಾತು

ಈ ಬಗ್ಗೆ ರಜತ್‌ಗೆ ಕೂಡ ಬೇಸರವಾಯ್ತು. ಸುಮ್ಮನೇ ಏನೂ ಮಾತನಾಡಿದ ರಜತ್‌ಗೆ ಸುದೀಪ್‌ ಹೇಳಿದ್ದು ಹೀಗೆ. ನನಗೆ ಇದೆಲ್ಲ ದೊಡ್ಡ ವಿಚಾರವೇ ಅಲ್ಲ. ನಾನು ಅಷ್ಟು ತೆಲೆ ಕೆಡಿಸಿಕೊಳ್ಳಲ್ಲ. ಈ ವಿಡಿಯೋ ಬಗ್ಗೆ ಯೋಚನೆ ಮಾಡಬೇಡಿ. ಅದರಿಂದ ಹೊರಕ್ಕೆ ಬನ್ನಿ ಎಂದರು. ಬಳಿಕ ರಜತ್‌ ಕೂಡ ಹತ್ತಿರದಿಂದ ನಿಮ್ಮ ಅಬ್ಸರ್ವ್ ಮಾಡಿ ನೋಡಿದ್ದೇನೆ. ನಾನು ಆ ರೀತಿ ಹೇಳಿಲ್ಲ. ಸಾರಿ ಕೇಳಲ್ಲ. ಐ ಲವ್ ಯೂ ಸರ್‌ ಎಂದರು ರಜತ್‌.

ವೈರಲ್‌ ವಿಡಿಯೋ



ಧ್ರುವಂತ್‌ ಜೊತೆ ವಾದ!

ಇನ್ನು ರಜತ್‌ ಕೂಡ ಆಟ ಯಾವಾಗ ಶುರು ಮಾಡ್ತೀರಾ ಅನ್ನೋ ವೀಕ್ಷಕರ ಪ್ರಶ್ನೆಗೆ ಉತ್ತರ ನೀಡಿದರು. ಮುಂದಿನ ವಾರದಿಂದ ಚೆನ್ನಾಗಿ ಆಡುವೆ ಎಂದು ಹೇಳಿದ್ದಾರೆ. ಈ ವೀಕೆಂಡ್‌ನಲ್ಲಿ ಸುದೀಪ್‌ ಅವರ ಮುಂದೆಯೇ ಧ್ರುವಂತ್‌ ಹಾಗೂ ರಜತ್‌ ನಡುವೆ ವಾದ ವಿವಾದಗಳು ನಡೆಯಿತು.

ಧ್ರುವಂತ್‌ ಅವರೇ ಮನೆ ಬಿಟ್ಟು ಹೋಗುವಂತದ್ದು ಏನಾಯ್ತು? ಅಂತ ವೀಕ್ಷರೊಬ್ಬರು ಬರೆದಿದ್ದರು. ಅದಕ್ಕೆ ಧ್ರುವಂತ್‌ ಉತ್ತರ ನೀಡಿ, ʻನಾವು ಕೆಲವೊಂದು ಬ್ಲೇಮ್ಸ್‌ಗಳನ್ನ ನಿರಂತರವಾಗಿ ತೆಗೆದುಕೊಳ್ಳಬೇಕಾಯ್ತು. ಡ್ಯಾಮೇಜ್‌ ಕೂಡ ಬೇಕಾ ಅಂತ ಅನ್ನಿಸಿತ್ತುʼ ಎಂದು ಹೇಳಿದ್ದಾರೆ. ಅದಕ್ಕೆ ರಜತ್‌ ಇದ್ದವರು,ʻ ಡ್ಯಾಮೇಜ್‌ ಮಾಡಿಕೊಳ್ಳುತ್ತಿರುವುದೇ ಧ್ರುವಂತ್.‌ ಅಸಭ್ಯವಾಗಿ ಮಾತನಾಡೋದು, ಅಸಭ್ಯವಾಗಿ ನಡೆದುಕೊಳ್ಳೋದುʼ ಎಂದರು.

ಇದನ್ನೂ ಓದಿ: Bigg Boss Kannada 12: ನನ್ನ ಶಿಷ್ಯ ಎಂದು ಒಬ್ಬೇ ಒಬ್ಬನನ್ನು ಸಹ ನಾನು ಬಿಗ್​​ಬಾಸ್​​ಗೆ ಕಳಿಸಿಲ್ಲ! ಹೀಗ್ಯಾಕೆ ಅಂದ್ರು ಕಿಚ್ಚ?

ಇದು ಧ್ರುವಂತ್‌ಗೆ ಕೋಪ ತರಿಸಿದೆ. ʻಈಗ ನಾನು ಮಾತಾಡೋದು ತಡ್ಕೋʼ ಅಂತ ಕಿಚ್ಚನ ಮುಂದೆಯೇ ಧ್ರುವಂತ್‌ಗೆ ಹೇಳಿದ್ದಾರೆ. ಧ್ರುವಂತ್‌ ಇದ್ದವರು, ʻನೀನೇ ತಡ್ಕೋ, ಎಷ್ಟರಲ್ಲಿ ಇರಬೇಕು. ಅಷ್ಟರಲ್ಲಿ ಇರುʼ ಅಂತ ಧ್ರುವಂತ್‌ ಅವಾಜ್‌ ಹಾಕಿದ್ದಾರೆ.