Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್ ನೇರ ಮಾತು
Gilli Nata: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಸದಾ ಕಾಮಿಡಿ ಮಾಡಿಕೊಂಡು, ತಮಾಷೆಯಿಂದ ಮತ್ತೊಬ್ಬರ ಕಾಲನ್ನು ಎಳೆಯುತ್ತಿರುತ್ತಾರೆ. ಮನೆಯ ಲಿವಿಂಗ್ ಏರಿಯಾದಲ್ಲಿ ಕುಳಿತಿರುವ ಧ್ರುವಂತ್ ಜೊತೆ ಮಾತನಾಡಿರುವ ಗಿಲ್ಲಿ ನಟ, "ನಿನ್ನ ಬಗ್ಗೆ ಪುಸ್ತಕ ಬರೆಯಬೇಕು ಎಂದುಕೊಂಡಿರುವೆ ಎಂದು ಈ ಹಿಂದೆ ಹೇಳಿಕೊಂಡಿದ್ದರು, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದರು. ಭಾನುವಾರದ ಪಂಚಾಯ್ತಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕಿಚ್ಚನ ಮುಂದೆ ಗಿಲ್ಲಿ ಅಭಿಪ್ರಾಯ ಹಂಚಿಕೊಂಡರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannnada 12) ಗಿಲ್ಲಿ ನಟ (Gilli Nata) ಸದಾ ಕಾಮಿಡಿ ಮಾಡಿಕೊಂಡು, ತಮಾಷೆಯಿಂದ ಮತ್ತೊಬ್ಬರ ಕಾಲನ್ನು ಎಳೆಯುತ್ತಿರುತ್ತಾರೆ. ಮನೆಯ ಲಿವಿಂಗ್ ಏರಿಯಾದಲ್ಲಿ ಕುಳಿತಿರುವ ಧ್ರುವಂತ್ (Dhruvanth) ಜೊತೆ ಮಾತನಾಡಿರುವ ಗಿಲ್ಲಿ ನಟ, "ನಿನ್ನ ಬಗ್ಗೆ ಪುಸ್ತಕ ಬರೆಯಬೇಕು ಎಂದುಕೊಂಡಿರುವೆ ಎಂದು ಈ ಹಿಂದೆ ಹೇಳಿಕೊಂಡಿದ್ದರು, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದರು. ಭಾನುವಾರದ ಪಂಚಾಯ್ತಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕಿಚ್ಚನ ಮುಂದೆ ಗಿಲ್ಲಿ ಅಭಿಪ್ರಾಯ ಹಂಚಿಕೊಂಡರು.
ಯಾರಿಗಾದರೂ ಕಚ್ಚುತ್ತಾ ಇರಬೇಕು!
ಮನೆಯವರ ಬಗ್ಗೆ ಪುಸ್ತಕ ಬರೀರಿ ಅಂದ್ರೆ ಯಾರ ಬಗ್ಗೆ ಬರೀತೀರಿ? ಅಂತ ಕಿಚ್ಚ ಅವರು ಗಿಲ್ಲಿಗೆ ಕೇಳಿದ್ದಾರೆ. ಅದಕ್ಕೆ ಗಿಲ್ಲಿ, ನಾ ಕಂಡ ಧ್ರುವಂತ್ ಅಂದರು ಗಿಲ್ಲಿ. ಕಾರಣ ಕೊಟ್ಟಿದ್ದು ಹೀಗೆ. ನಾಮಿನೇಶನ್ ಅಂತ ಬಂದರೆ, ನಾಗವಲ್ಲಿ ಆಗಿ ಬದಲಾಗ್ತಾರೆ ಎಂದರು.
ಇದನ್ನೂ ಓದಿ: Bigg Boss Kannada 12: ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಏನು ವಾರದ ಕಥೆ?
ಇನ್ನೊಂದು ಸೂರಜ್ ಬಗ್ಗೆ ಹೇಳಿದರು. ಈ ಕಥೆ ನಾಯಕ, ಪೂಲ್‌ನಿಂದ ಎದ್ದು ಬಂದಿದ್ದೀನಿ ಅಂತ ಅಂದುಕೊಂಡಿದ್ದಾರೆ. ಆದರೆ ಅವರು ಅಲ್ಲೇ ಬಿದ್ದೇ ಇದ್ದಾರೆ ಅನ್ನೋದು ಗೊತ್ತಿಲ್ಲ. ರಘು ಇಂದ ಫೈಟ್, ಆಕ್ಷನ್, ಎಲ್ಲ ಎಕ್ಸ್‌ಪೆಕ್ಟ್ ಮಾಡಿದ್ದೆ ಆದರೆ ಕಿಚನ್ ಅಲ್ಲಿ ಬೆಳ್ಳುಳ್ಳಿ ಬಿಡಿಸೋದು ಈರುಳ್ಳಿ ಕಟ್ ಮಾಡೋದು ನೋಡಿದೆ ಎಂದಿದ್ದಾರೆ.
ವೈರಲ್ ಪ್ರೋಮೋ
pic.twitter.com/0CHucDblnK
— ಜೀವನ್ (@Rockstar_1_9) December 7, 2025
🚨 ಮನೆ ಮಂದಿ ಬಗ್ಗೆ ಪುಸ್ತಕದಲ್ಲಿ ವರ್ಣಿಸಿದ ಗಿಲ್ಲಿ ನಟ 😂😂
Saturday S12 Sunday Promo 🚨👀@Rockstar_1_9 @Rockstar_1_9#BBK12 #BiggBossKannada12 #BiggBoss #BiggBossKannada #biggbossseason12 #BBKSeason12 #BBK12live #KantaraChapter1 #TheDevil
ಕೊನೆಯಲ್ಲಿ ಧ್ರುವಂತ್ ಅವರು ಗಿಲ್ಲಿ ಬಗ್ಗೆ, ಗಿಲ್ಲಿ ತಿಗಣೆ ಥರ. ಅವರು ಇಲ್ಲಿ ಸರ್‌ವೈವ್ ಆಗಬೇಕು ಅಂದರೆ ಯಾರಿಗಾದರೂ ಕಚ್ಚುತ್ತಾ ಇರಬೇಕು ಅಂತ ಗಿಲ್ಲಿ ಬಗ್ಗೆ ಹೇಳಿದ್ದಾರೆ.
ಎರಡು ಜೋಡಿಗಳಿಗೆ ಕ್ಲಾಸ್
ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಎರಡು ಜೋಡಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಾರಿ ಕೊಂಚ ಮಟ್ಟಿಗೆ ಸೀರಿಯಸ್ ಆಗಿಯೇ ಇತ್ತು.ಹಿಂದಿನ ಎಪಿಸೋಡ್‌ಗಳಲ್ಲೂ ಇದನ್ನು ನೋಡಿದ್ದೇವೆ. ಅವರು ಹೊರ ಬಂದ್ಮೇಲೆ ತಮಗೆ ಸಂಬಂಧವೇ ಇಲ್ಲವೇನೋ ಎನ್ನುವಂತೆ ಇದ್ದಿದ್ದೂ ಇದೆ.
ಇನ್ನು ಕೆಲವರು ಜೋಡಿಗಳಾಗಿದ್ದೂ ಇದೆ. ಅದೆಲ್ಲವನ್ನೂ ಪಕ್ಕಕ್ಕಿಟ್ಟು, ಈ ಸೀಸನ್‌ನಲ್ಲಿ ಏನಾಗುತ್ತಿದೆಯೆಂದು ಕಿಚ್ಚ ಸುದೀಪ್ ವಿವರಿಸಿದ್ದಾರೆ.ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಮನೆಯಲ್ಲಿ ಕೆಲವರು ಜೋಡಿಯಾಗಿ ಆಡುತ್ತಿದ್ದಾರೆ.
ಇದು ಸರಿಯಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಪ್ರಭಾವವನ್ನು ಬೀರುತ್ತಿದ್ದಾರೆ. ಹಾಗೆ ಮಾಡಿದವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಅಶ್ವಿನಿ ಹಾಗೂ ಜಾನ್ವಿಯನ್ನು ಉದಾಹರಣೆ ಕೊಟ್ಟು ಗಿಲ್ಲಿ-ಕಾವ್ಯಾ ಹಾಗೂ ರಾಶಿಕಾ-ಸೂರಜ್‌ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಮುಂದೆಯೇ 'ಧ್ರುವಂತ್-ರಜತ್' ವಾದ
ಇನ್ನು ಧ್ರುವಂತ್ ಅವರು ನಿನ್ನೆ ಸೇಫ್ ಆಗಿದ್ದಾರೆ. ಇದಕ್ಕೂ ಮೊದಲು ನನ್ನನ್ನು ಮನೆಯಿಂದ ಆಚೆ ಕಳುಹಿಸಿ ಅಂತ ಬಿಗ್ ಬಾಸ್‌ಗೆ ಮನವಿ ಮಾಡಿದ್ದರು. ಆದರೆ ಆಗಿದ್ದು ಬೇರೆ. ಧ್ರುವಂತ್ ಅವರಿಗೆ ಸುದೀಪ್ ಮನವರಿಕೆ ಕೂಡ ಮಾಡಿದರು. ಅವರ ತಂದೆಯ ಆಡಿಯೋ ಪ್ಲೇ ಮಾಡಿಸಿ ಧೈರ್ಯ ಕೂಡ ಹೇಳಿದರು.