Bigg Boss Kannada 12: ಹೀಗೆ ಮುಂದುವರಿದರೆ, ಕಾವು ಹೊರಗೆ ಬಂದಮೇಲೆ ಸಿಕ್ತೀನಿ ಅನ್ಬೇಕಾಗುತ್ತೆ ಎಂದು ಗಿಲ್ಲಿಗೆ ಎಚ್ಚರಿಸಿದ ಕಿಚ್ಚ
Gilli Nata Kavya: ಗಿಲ್ಲಿ ಸದಾ ಕಾವು ಕಾವು ಅಂತಲೇ ಇರ್ತಾರೆ ಎನ್ನೋದು ಕೆಲವು ಸದಸ್ಯರ ಅಭಿಪ್ರಾಯ. ಕಾವ್ಯ ಅವರಿಗೂ ಇದು ಸಾಕಷ್ಟು ಬಾರಿ ಬೇಸರವೂ ಆಗಿದೆ. ಗಿಲ್ಲಿಯಿಂದ ಕಾವ್ಯ ಅನ್ನೋ ಮಾತು ಅವರಿಗೆ ಬೇಸರ ಉಂಟು ಮಾಡಿತ್ತು. ಅಷ್ಟೇ ಅಲ್ಲ ಈ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಈ ಬಗ್ಗೆಯೇ ಕಾರಣ ಕೊಟ್ಟಿದ್ದರು ಮನೆಮಂದಿ. ಈಗ ಸುದೀಪ್ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜಾಹ್ನವಿ ಹಾಗೂ ಅಶ್ವಿನಿ ಅವರ ಉದಾಹರಣೆ ಇಟ್ಟುಕೊಂಡು ಕಾವ್ಯ-ಗಿಲ್ಲಿ ಹಾಗೂ ರಾಶಿಕಾ-ಸೂರಜ್ ಜೋಡಿಗೆ ಖಡಕ್ ಆಗಿಯೇ ನೇರವಾಗಿಯೇ ಸುದೀಪ್ ಮಾತನಾಡಿದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಅದೆಷ್ಟೋ ಸೀನ್‌ಗಳಲ್ಲಿ ಸ್ಪರ್ಧಿಗಳ ಮಧ್ಯೆ ಒಳ್ಳೆ ಬಾಡಿಂಗ್ ಬೆಳೆದಿರೋ ಉದಾಹರಣೆಗಳನ್ನು ನೋಡಿದ್ದೇವೆ. ಆದರೆ ಈ ಸ್ನೇಹದಿಂದಲೇ ಆಟದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ವೀಕೆಂಡ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಜಾಹ್ನವಿ ಹಾಗೂ ಅಶ್ವಿನಿ ಅವರ ಉದಾಹರಣೆ ಇಟ್ಟುಕೊಂಡು ಕಾವ್ಯ-ಗಿಲ್ಲಿ (Kavya Gilli) ಹಾಗೂ ರಾಶಿಕಾ-ಸೂರಜ್ (Rashika Sooraj) ಜೋಡಿಗೆ ಖಡಕ್ ಆಗಿಯೇ ನೇರವಾಗಿಯೇ ಸುದೀಪ್ ಮಾತನಾಡಿದರು. ಹೀಗೆ ಆದರೆ ಒಬ್ಬರು ಹೋಗ್ತೀರಿ ಎಂದರು.
ಗಿಲ್ಲಿ ಸದಾ ಕಾವು ಕಾವು ಅಂತಲೇ ಇರ್ತಾರೆ ಎನ್ನೋದು ಕೆಲವು ಸದಸ್ಯರ ಅಭಿಪ್ರಾಯ. ಕಾವ್ಯ ಅವರಿಗೂ ಇದು ಸಾಕಷ್ಟು ಬಾರಿ ಬೇಸರವೂ ಆಗಿದೆ. ಗಿಲ್ಲಿಯಿಂದ ಕಾವ್ಯ ಅನ್ನೋ ಮಾತು ಅವರಿಗೆ ಬೇಸರ ಉಂಟು ಮಾಡಿತ್ತು. ಅಷ್ಟೇ ಅಲ್ಲ ಈ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಈ ಬಗ್ಗೆಯೇ ಕಾರಣ ಕೊಟ್ಟಿದ್ದರು ಮನೆಮಂದಿ. ಈಗ ಸುದೀಪ್ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್ ನೇರ ಮಾತು
ಹೊರಗೆ ಬಂದಮೇಲೆ ಸಿಕ್ತೀನಿ ಅಂತ ಹೇಳ್ತೀರಾ?
ಮನೆಯಲ್ಲಿ ಕೆಲವರು ಜೋಡಿಯಾಗಿ ಆಡುತ್ತಿದ್ದಾರೆ. ಇದು ಸರಿಯಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಪ್ರಭಾವವನ್ನು ಬೀರುತ್ತಿದ್ದಾರೆ. ಹಾಗೆ ಮಾಡಿದವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಜಾಹ್ನವಿ-ಅಶ್ವಿನಿ ಒಟ್ಟಾಗಿದ್ದರು. ಈಗ ಜಾಹ್ನವಿ ಹೋಗಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್. ‘ಅಂಚಲ್ಲಿ ಒಬ್ಬರೇ ಕೂತಿದ್ದಾರೆ ನೋಡಿ’ ಎಂದು ಅಶ್ವಿನಿ ಉದಾಹರಣೆ ಕೊಟ್ಟು ಹೇಳಿದರು.
ಅವರಿಗೆ ಅವರಿಗೆ ಆಡುವುದಕ್ಕೆ ಬಿಡಿ
ಗಿಲ್ಲಿ ಹಾಗೂ ಕಾವ್ಯಾ ಬಳಿನೂ ಸುದೀಪ್ ಚರ್ಚೆ ಮಾಡಿದ್ದಾರೆ. ನಿಮ್ಮಬ್ಬರ ಬಳಿ ಒಳ್ಳೆಯ ಫ್ರೆಂಡ್‌ಶಿಪ್ ಇರಬಹುದು. ಅವರ ಆಟ ಅವರಿಗೆ ಅವರಿಗೆ ಆಡುವುದಕ್ಕೆ ಬಿಡಿ. ನಿಮ್ಮ ಪ್ರಭಾವ ಅವರ ಮೇಲೆ ಬೀಳದೆ ಇರಲಿಲ್ಲ. ಅದರಿಂದಲೇ ಅವರು ಹೊರಗೆ ಹೋದರೆ, "ಕಾವು ಹೋಗಿ ಬಾ. ಹೊರಗೆ ಬಂದಮೇಲೆ ಸಿಕ್ತೀನಿ" ಎಂದು ಹೇಳುತ್ತೀರಾ ಎಂದು ಕೇಳಿದ್ದಾರೆ.
ಇನ್ನು ರಾಶಿಕಾ ಹಾಗೂ ಸೂರಜ್‌ಗೂ ಸುದೀಪ್ ಕ್ಲಾಸ್ ತೆಗೆದುಕೊಂಡರು. ನೀವು ಇಬ್ಬರೂ ಪ್ರತ್ಯೇಕವಾಗಿ ಆಡೋಣ ಎಂದು ಹೇಳ್ತೀರಾ. ಆ ಬಳಿಕ ಮತ್ತೆ ಒಂದಾಗುತ್ತಿರಾ ಎಂದು ಕಿಚ್ಚ ಎಚ್ಚರಿಕೆ ನೀಡಿದ್ದಾರೆ.
Sudeep sir and makers ge dodda 🙏
— Keerthiii (@RiyaRao936940) December 6, 2025
Weekday episodes >>>>cringe Weekend #BBK12 #BBKSeason12 https://t.co/TPniJltF7o
ಇದನ್ನೂ ಓದಿ: Bigg Boss Kannada 12: ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಏನು ವಾರದ ಕಥೆ?
ಮನೆಯಲ್ಲಿ ರಾಶಿಕಾ ಹಾಗೂ ಸೂರಜ್ ಇಬ್ಬರೂ ಯಾವಾಗಲೂ ಒಟ್ಟಿಗೆ ಇರುತ್ತಾರೆಂಬ ಆರೋಪವಿದೆ. ಅಷ್ಟೇ ಅಲ್ಲ ರಾಶಿಕಾ ನಾಮಿನೇಶನ್ ವೇಳೆ ಗಿಲ್ಲಿ ಕಾವ್ಯ ಬಗ್ಗೆ ಹೇಳಿದ್ರೆ, ಗಿಲ್ಲಿ ಕೂಡ ಸೂರಜ್ ವಿಚಾರವನ್ನು ಎತ್ತಿಕೊಂಡು ಮಾತಾಡಿದ್ರು.