ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿನ ನಾಮಿನೇಟ್ ಮಾಡೋಕೆ ಇರೋ ಬೇರೆ ರೀಸನ್ ಏನು? ರಜತ್‌ ಬಾಯಲ್ಲಿ ಒಮ್ಮೆ ಕೇಳಿ ಬಿಡಿ

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ (Rajath) ಸಾಕಷ್ಟು ಬಾರಿ ಗಿಲ್ಲಿ ಪರ ಬ್ಯಾಟ್‌ ಬೀಸಿದ್ದಾರೆ. ಪ್ರತಿ ವಾರ ಗಿಲ್ಲಿಯನ್ನ ಕೆಲವು ಸ್ಪರ್ಧಿಗಳು ನಾಮಿನೇಟ್‌ ಮಾಡ್ತಾನೆ ಇರ್ತಾರೆ. ಆದರೆ ಕಾರಣ ಕೊಡೋದು ಮಾತ್ರ ಒಂದೇ. ಗಿಲ್ಲಿ ಸೋಮಾರಿ, ಕಾಮಿಡಿ ಮಾಡಿ ಡೌನ್‌ ಮಾಡ್ತಾನೆ ಅಂತ. ಈ ಬಗ್ಗೆ ರಜತ್‌ ಅವರು ಟಾಂಗ್‌ ಕೊಟ್ಟಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ನಾವು ಈಗ ಆಟ ಆಡೋವಷ್ಟು ನೀವ್ಯಾರು ಆಡಿಲ್ಲ ಅಂತ ಪರೋಕ್ಷವಾಗಿಯೇ ಹೇಳಿದ್ದಾರೆ.

ಗಿಲ್ಲಿನ ನಾಮಿನೇಟ್ ಮಾಡೋಕೆ ಇರೋ ಬೇರೆ ರೀಸನ್ ಏನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 11, 2025 7:21 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ರಜತ್‌ (Rajath) ಸಾಕಷ್ಟು ಬಾರಿ ಗಿಲ್ಲಿ ಪರ ಬ್ಯಾಟ್‌ ಬೀಸಿದ್ದಾರೆ. ಪ್ರತಿ ವಾರ ಗಿಲ್ಲಿಯನ್ನ ಕೆಲವು ಸ್ಪರ್ಧಿಗಳು ನಾಮಿನೇಟ್‌ ಮಾಡ್ತಾನೆ ಇರ್ತಾರೆ. ಆದರೆ ಕಾರಣ ಕೊಡೋದು ಮಾತ್ರ ಒಂದೇ. ಗಿಲ್ಲಿ (Gilli Nata) ಸೋಮಾರಿ, ಕಾಮಿಡಿ ಮಾಡಿ ಡೌನ್‌ ಮಾಡ್ತಾನೆ ಅಂತ. ಈ ಬಗ್ಗೆ ರಜತ್‌ ಅವರು ಟಾಂಗ್‌ ಕೊಟ್ಟಿದ್ದಾರೆ. ವೈಲ್ಡ್‌ ಕಾರ್ಡ್‌ (Wild Card Entry) ಎಂಟ್ರಿ ಪಡೆದು ನಾವು ಈಗ ಆಟ ಆಡೋವಷ್ಟು ನೀವ್ಯಾರು ಆಡಿಲ್ಲ ಅಂತ ಪರೋಕ್ಷವಾಗಿಯೇ ಹೇಳಿದ್ದಾರೆ.

ರಜತ್‌ ಹೇಳಿದ್ದೇನು?

73 ದಿನ ಜರ್ನಿಯನ್ನ ನಾವಿಬ್ಬರೂ ಕೇವಲ 15 ದಿನದಲ್ಲಿ ಹೊಡೆದು ಹಾಕಿದ್ದೀವಿ ಅಂತ ಯೋಚನೆ ಮಾಡ್ತಾ ಇದ್ದೇವೆ ಅಂತ ಚೈತ್ರಾ ಹೇಳಿದರು. ಹಾಗಾದ್ರೆ ಇದ್ರಲ್ಲಿ ಏನರ್ಥ ಅಂದರೆ ನಿಮಗೆ ಯಾರಿಗೂ ತಲೆ ಇಲ್ಲ ಅಂತ. ನಮ್ಮನ್ನ ಹೈಲೆಟ್‌ ಮಾಡೋ ಅವಶ್ಯತೆನೇ ಇರಲಿಲ್ಲ. ಆರಂಭದಿಂದ ಇಲ್ಲಿಯವರೆಗೆ ಸಾವಿರಾರೂ ಕಾರಣ ಕೊಡಬಹುದಿತ್ತು ಎಂದರು ರಜತ್‌.

ಅದಕ್ಕೆ ರಾಶಿಕಾ, ನಮಗೆ ನೀವೇನೂ ಕಣ್ಣಿಗೆ ಕಾಣಿಸಿಲ್ಲ ಅಂತ ತಿರುಗೇಟು ಕೊಟ್ಟರು. ಆಗ ರಜತ್‌ ಮಾತನಾಡಿ, ರಘು ಸರ್‌ಗೂ ನಾನು ಇವತ್ತು ಅದನ್ನೇ ಹೇಳಿದೆ. ಗಿಲ್ಲಿ ಅಂತ ಬಂದರೆ ಜೋಕ್‌ ಮಾಡ್ತಾನೆ. ಮನಸ್ಸಿಗೆ ಹರ್ಟ್‌ ಮಾಡ್ತಾನೆ. ಮೂರು ವಾರ ಆಯ್ತು ನಾವು ಬಂದಾಗಿಂದ ಕೇಳ್ತಾ ಇರೋದು ಇದೊಂದೇ ರೀಸನ್‌. ಅವನನ್ನ ನಾಮಿನೇಟ್‌ ಮಾಡಿ ತೊಂದರೆ ಇಲ್ಲ. ಬೇರೆ ಕಾರಣಗಳನ್ನು ಕೊಡಿ. 80ಪರ್ಸೆಂಟ್‌ ಜನ ಬರೀ ಇದೇ ಕಾರಣ ಕೊಡ್ತಾರೆ ಎಂದಿದ್ದಾರೆ ರಜತ್‌.

ಕಲರ್ಸ್‌ ಕನ್ನಡ ಪ್ರೋಮೋ

ಕಾವ್ಯ ಶೈವ ಬಗ್ಗೆ ಹೇಳಿದ್ದೇನು?

ಇನ್ನು ಈ ವಾರ ‘ಬಿಗ್‌ ಬಾಸ್’ನಲ್ಲಿ ಕಾವ್ಯ ಶೈವ ಗಿಲ್ಲಿ ನಟನನ್ನೇ ನಾಮಿನೇಟ್‌ ಮಾಡಿಬಿಟ್ಟಿದ್ದಾರೆ. ಸಾಲದಕ್ಕೆ ರಜತ್‌ ಅವರನ್ನು ಕೂಡ ನಾಮಿನೇಟ್‌ ಮಾಡಿದ್ದಾರೆ. ಆದರೆ, ಇಬ್ಬರನ್ನೂ ನಾಮಿನೇಟ್‌ ಮಾಡಲು ಕಾರಣ ಮಾತ್ರ ಒಂದೇ, ಅದುವೇ ಗಿಲ್ಲಿ ಕಾಮಿಡಿ. ಕಾವ್ಯ ಕೊಟ್ಟ ಕಾರಣಗಳು ಪ್ರೇಕ್ಷಕರಿಗೆ ಯಾಕೋ ಸರಿ ಅನಿಸಲಿಲ್ಲ.

ನನ್ನ ಮುಂದೆ ಯಾವತ್ತೂ ರಘು, ಧ್ರುವಂತ್‌ ಹಾಗೂ ಅಶ್ವಿನಿ ಅವರನ್ನ ಕೆಳಗೆ ಹಾಕಿ ಗಿಲ್ಲಿ ಮಾತಾಡಿಲ್ಲ, ರೇಗಿಸಿದ್ದಾನೆ. ನಿಮಗೆ ತಲೆ ಗಿರಾ ಗಿರಾ ಅಂತ ತಿರುಗುತ್ತಾ ಇರಬೇಕು ಅಂತೆನಿಸುತ್ತೆ, ನಿಮಗೆಲ್ಲಾ ಅರ್ಥ ಆಗ್ತಿಲ್ಲ ಅನ್ಸತ್ತೆ.ನಿಮ್ಮ ಪ್ರಕಾರ, ಈ ಮನೆಯಲ್ಲಿ ತಮಾಷೆನೇ ಮಾಡಬಾರ್ದಾ? ಟಾಸ್ಕ್‌ನಲ್ಲಿ ತಲೆ ಇಲ್ಲ ಅನ್ಕೊಂಡೆ, ನಾಮಿನೇಷನ್‌ನಲ್ಲೂ ತಲೆ ಇಲ್ವಲ್ಲಾ? ಎಂದಿದ್ದರು ರಜತ್‌.