Bigg Boss Kannada 12: ಏಕಾಏಕಿ ಫೈರ್ ಬ್ರ್ಯಾಂಡ್ ಚೈತ್ರಕ್ಕ ಗಿಲ್ಲಿಗೆ ಶರಣಾಗಿದ್ದೇಕೆ?
Gilli Nata: ಕಳಪೆ ಕೊಡುವಾಗ ಚೈತ್ರಾ ಹೇಳಿದ್ದು ಹೀಗೆ. ಗಿಲ್ಲಿ ನನಗೆ ವಯಸ್ಸಿನ ವಿಚಾರದಲ್ಲಿ ತಮಾಷೆ ಮಾಡಿದ್ದು ಇಷ್ಟವಾಗಲಿಲ್ಲ. ನನ್ನ ಫ್ಯಾಮಿಲಿ ಕೂಡ ನೋಡ್ತಾ ಇರತ್ತೆ. ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೆ. ಆದರೂ ಗಾರ್ಡನ್ ಏರಿಯಾದಲ್ಲಿ ಅದನ್ನೇ ರಿಪೀಟ್ ಮಾಡಿದ. ಬರೀ ಮನೆ ಕೆಲಸವನ್ನು ಮಾಡೋಕೆ ಬಂದಿದ್ದೀವ ಅನ್ನೋದು ತಪ್ಪು ಎಂದು ಚೈತ್ರಾ ಹೇಳಿದ್ದಾರೆ. ಇದು ಗಿಲ್ಲಿಗೆ ಕೋಪ ತರಿಸಿದೆ. ಮತ್ತಷ್ಟು ಗಿಲ್ಲಿ ಅವರು ಚೈತ್ರಾ ಅವರನ್ನು ಟ್ರಿಗರ್ ಮಾಡಲು ನೋಡಿದರು. ಇದೆಲ್ಲ ಆದ ಬಳಿಕ ಚೈತ್ರಾ ಅವರು ಇಲ್ಲಿಗೆ ಇದನ್ನು ಬಿಟ್ಟುಬಿಡು ಅಂತ ಚೈತ್ರಾ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಕಳೆದ ಸೀಸನ್‌ನಲ್ಲಿ (Bigg Boss Kannada 12) ಉತ್ತಮ ಪಡೆದುಕೊಳ್ಳಲು ಚೈತ್ರಾ ಕುಂದಾಪುರ (Chaithra Kundapura) ಅವರಿಗೆ ಸುಮಾರು 100 ದಿನಗಳೇ ಬೇಕಾಯ್ತು. ಇದೀಗ ಈ ಸೀಸನ್‌ನಲ್ಲಿ ಬಂದ ಎರಡೇ ವಾರಕ್ಕೆ ಉತ್ತಮ ಸಿಕ್ಕಿದೆ. ಟಾಸ್ಕ್‌ನಲ್ಲಿ ತಮ್ಮನ್ನು ತಾವು ಪ್ರೂವ್ (Proove) ಮಾಡಿಕೊಂಡಿದ್ದಾರೆ. ಆದರೆ ಗಿಲ್ಲಿಗೆ ಕಳಪೆ ಕೊಡುವಾಗ, ಚೈತ್ರಾ ಅವರು ಖಡಕ್ ಆಗಿ ಮಾತನಾಡಿದ್ದಾರೆ. ಮಾತನಾಡಿದ ಬಳಿಕ ಏಕಾಏಕಿ ಚೈತ್ರಾ, ಗಿಲ್ಲಿಗೆ ಶರಣಾದಂತಿದೆ. ಏನಂದ್ರು?
ಗಿಲ್ಲಿ ನನಗೆ ವಯಸ್ಸಿನ ವಿಚಾರದಲ್ಲಿ ತಮಾಷೆ ಮಾಡಿದ್ದು ಇಷ್ಟವಾಗಲಿಲ್ಲ. ನನ್ನ ಫ್ಯಾಮಿಲಿ ಕೂಡ ನೋಡ್ತಾ ಇರತ್ತೆ. ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೆ. ಆದರೂ ಗಾರ್ಡನ್ ಏರಿಯಾದಲ್ಲಿ ಅದನ್ನೇ ರಿಪೀಟ್ ಮಾಡಿದ. ಬರೀ ಮನೆ ಕೆಲಸವನ್ನು ಮಾಡೋಕೆ ಬಂದಿದ್ದೀವ ಅನ್ನೋದು ತಪ್ಪು ಎಂದು ಚೈತ್ರಾ ಕಳಪೆ ನೀಡುವಾಗ ಹೇಳಿದ್ದಾರೆ. ಇದು ಗಿಲ್ಲಿಗೆ ಕೋಪ ತರಿಸಿದೆ. ಮತ್ತಷ್ಟು ಗಿಲ್ಲಿ ಅವರು ಚೈತ್ರಾ ಅವರನ್ನು ಟ್ರಿಗರ್ ಮಾಡಲು ನೋಡಿದರು. ಇದೆಲ್ಲ ಆದ ಬಳಿಕ ಚೈತ್ರಾ ಅವರು ಇಲ್ಲಿಗೆ ಇದನ್ನು ಬಿಟ್ಟುಬಿಡು ಅಂತ ಚೈತ್ರಾ ಹೇಳಿದ್ದಾರೆ.
ಗಿಲ್ಲಿಗೆ ಏಕಾಏಕಿ ಶರಣಾಗಿದ್ದೇಕೆ ಚೈತ್ರಾ?
ಚೈತ್ರಾ ಮಾತನಾಡಿ, ʻನಾನು ಉತ್ತಮವನ್ನು ಯಾವಾಗ ಪಡೆದುಕೊಂಡಾಗ ಜಾಸ್ತಿ ಮಾತನಾಡಲು ಹೋಗುವುದಿಲ್ಲ. ಏಕೆಂದರೆ ಕಳಪೆ ತೆಗೆದುಕೊಂಡಿರುವವರಿಗೆ ನೋವಿರುತ್ತೆ. ಗಿಲ್ಲಿ ಇದನ್ನ ಇಲ್ಲಿಗೆ ಬಿಟ್ಟು ಹಾಕು. ಈ ಆಕ್ಟಿವಿಟಿ ಇಲ್ಲಿಗೆ ಮುಗಿಯಿತು. ನೀನು ತಿದ್ದಿಕೋ, ನಾನು ತಿದ್ದಿಕೊಳ್ಳುವೆ. ಇನ್ನು ಮೇಲೆ ನಾನು ಮನೆ ವಿಷಯಕ್ಕೆ ಕಳಪೆ ಕೊಡುವುದಿಲ್ಲ. ನೀನು ಇಲ್ಲಿಗೆ ಬಿಡಬೇಕು. ನಾನು ಅರ್ಥ ಮಾಡಿಕೊಳ್ಳುತ್ತೇನೆ.
ವೈರಲ್ ವಿಡಿಯೋ
ಚೈತ್ರ ಗಿಲ್ಲಿಗೆ ಶರಣಾಗಲು 10 ನಿಮಿಷ ಕೂಡ ತೆಗೆದುಕೊಳ್ಳಲಿಲ್ಲ.
— HOLABASU BANGI (@holabasu02) December 5, 2025
ಅವಳು ಅವನ ವಿರುದ್ಧ ಹೋದಾಗ ಏನಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿದಿದ್ದಾಳೆ.
ಗಿಲ್ಲಿ ಜೊತೆ ಇನ್ನ ಮೇಲೆ ಎಂದಿಗೂ ಗೊಂದಲಕ್ಕೀಡಾಗುವುದಿಲ್ಲ ಚೈತ್ರಕ್ಕ. #BiggBossKannada12 #BBK12 #ColorsKannada #KicchaSudeep pic.twitter.com/NnnMwqkRXI
ಕಳಪೆ ಅನ್ನೋದು ಬಿಗ್ ಬಾಸ್‌ನಲ್ಲಿ ಇರೋ ಒಂದು ಪ್ರಾಸಿಜರ್. ನನಗೆ ಹರ್ಟ್ ಆಗಿದ್ದು ನಾನು ಕನ್‌ಸಿಡರ್ ಮಾಡುತ್ತೇನೆ, ಕಳೆದ ಸೀಸನ್‌ನಲ್ಲಿ ಅತಿ ಹೆಚ್ಚು ಕಳಪೆ ಪಡೆದುಕೊಂಡಿದ್ದು ನಾನೆ. ಆ ತಪ್ಪುಗಳನ್ನು ತಿದ್ದಿಕೊಂಡು ಹೊರಗೆ ಹೋದಾಗ ಉತ್ತಮ ಪಡೆದುಕೊಂಡೆ' ಎಂದು ಗಿಲ್ಲಿಯನ್ನ ಸಮಾಧಾನ ಪಡಿಸಲು ನೋಡಿದ್ದಾರೆ ಚೈತ್ರ.
ಚೈತ್ರಕ್ಕ ಟ್ರೋಲ್
ಇದೀಗ ಚೈತ್ರಾ ಕುಂದಾಪುರ ಬಗ್ಗೆ ಗಿಲ್ಲಿ ಫ್ಯಾನ್ಸ್ ಟ್ರೋಲ್ ಕೂಡ ಮಾಡ್ತಿದ್ದಾರೆ. ಚೈತ್ರ ಗಿಲ್ಲಿಗೆ ಶರಣಾಗಲು 10 ನಿಮಿಷ ಕೂಡ ತೆಗೆದುಕೊಳ್ಳಲಿಲ್ಲ. ಗಿಲ್ಲಿ ವಿರುದ್ಧ ಹೋದಾಗ ಏನಾಗುತ್ತದೆ ಎಂದು ಸ್ಪಷ್ಟವಾಗಿ ಚೈತ್ರಾ ಅವರಿಗೆ ತಿಳಿದಿದೆ.ಗಿಲ್ಲಿ ಜೊತೆ ಇನ್ನ ಮೇಲೆ ಎಂದಿಗೂ ಗೊಂದಲಕ್ಕೀಡಾಗುವುದಿಲ್ಲ ಚೈತ್ರಕ್ಕ ಅಂತ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾಗೆ ಯೋಗ್ಯತೆನೇ ಇಲ್ಲ ಎಂದ ಮನೆಮಂದಿ
ಇಷ್ಟೆಲ್ಲ ಹೇಳಿದ ಮೇಲೂ ಚೈತ್ರಾ ಅವರು ಗಿಲ್ಲಿಗೆ ಕೈ ಕುಲಕಲು ಬಂದರು. ಗಿಲ್ಲಿ ಆಗಲೂ ತಿರಸ್ಕಾರ ಮಾಡಿದ್ದಾರೆ. ಇನ್ನಷ್ಟು ವಯಸ್ಸಾಗಿದೆ ನಿಂಗೆ ಅಂತ ತಮಾಷೆ ಮಾಡಿದ್ದರು ಗಿಲ್ಲಿ.
ಮನೆಯಲ್ಲಿ ಬಹುತೇಕರು ಗಿಲ್ಲಿ ಕಾಮಿಡಿ ಬಗ್ಗೆ ನೆಗೆಟಿವ್ ಆಗಿ ಹೇಳುತ್ತಿದ್ದಾರೆ. ರಘು ಕೂಡ ಳಪೆಯನ್ನು ನಾನು ಗಿಲ್ಲಿಗೆ ನೀಡುತ್ತಿದ್ದೇನೆ. ಯಾಕೆಂದರೆ, ತುಂಬಾ ದಿವಸದಿಂದ ನೋಡ್ತಾ ಇದ್ದೇನೆ. ಕಾಮಿಡಿ ಮತ್ತು ಪರ್ಸನಲ್ ಸ್ಪೇಸ್ ಮಧ್ಯೆ ಒಂದು ಲೈನ್ ಇರುತ್ತದೆ.
ಆ ಲೈನ್ ಅನ್ನು ಕ್ರಾಸ್ ಮಾಡಬಾರದು. ಕಾಮಿಡಿ ಮಾಡಲಿ, ಆದರೆ ಲಿಮಿಟ್ ಕ್ರಾಸ್ ಮಾಡಬಾರದು. ಈ ವಾರ ಅಂತೂ ತುಂಬಾ ಲಿಮಿಟ್ ಕ್ರಾಸ್ ಮಾಡಿದ. ನನಗೆ ತುಂಬಾ ಹರ್ಟ್ ಆಯ್ತು ಎಂದಿದ್ದಾರೆ.