ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಗ್ರ್ಯಾಂಡ್ ಫಿನಾಲೆ (Bigg Boss kannada Grand Finale) ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮನೆಯಿಂದ ಆಚೆ ಬರುತ್ತಿದ್ದಂತೆ ಫ್ಯಾನ್ಸ್ ಕಂಡು ಶಾಕ್ ಆಗಿದ್ದಾರೆ ಗಿಲ್ಲಿ (Gilli Nata). ಬಿಗ್ ಬಾಸ್ ಮನೆಯ ಹೊರಗಡೆ ಸಂಭ್ರಮ ಮನೆಮಾಡಿತ್ತು. ಗಿಲ್ಲಿ ಫ್ಯಾನ್ಸ್ (Gilli Fans) ಅಂತೂ ಕಾವ್ಯ ಅವರೊಂದಿಗೆ ಗಿಲ್ಲಿ ಅವರನ್ನು ಮದುವೆ ಮಾಡಿಸೋದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಗಿಲ್ಲಿ ಏನಂದ್ರು?
ದೇವರ ಆಶೀರ್ವಾದ ತುಂಬಾ ಜಾಸ್ತಿ ಸಿಕ್ಕಿದೆ
ನಾನು ಬಿಗ್ ಬಾಸ್ ಶೋ ವಿನ್ ಆದ ಬಳಿಕ, ಹೊರಗಡೆ ಹಾಗೆ ಕಟೌಟ್ ಹಾಕಿದ್ದಾರೆ ಅಂತೆಲ್ಲ ವಿಡಿಯೋ ತೋರಿಸಿದ್ದರು, ಅದನ್ನು ನಂಬೋಕೆ ಆಗುತ್ತಿಲ್ಲ. ಗಿಲ್ಲಿಕೊಂಡು ನೋಡುತ್ತಿದ್ದೇನೆ, ಅಳೋಣ ಎಂದರೂ ಕೂಡ ನನಗೆ ಅಳು ಬರೋದಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ. ಅದೆಲ್ಲ ನೋಡಿ ಕೈ ಹಿಂಡಿಕೊಂಡು ನೋಡ್ತಾ ಇದ್ದೆ, ನಂಬಲೇ ಆಗ್ತಾ ಇರಲಿಲ್ಲ. ದೇವರ ಆಶೀರ್ವಾದ ತುಂಬಾ ಜಾಸ್ತಿ ಸಿಕ್ಕಿದೆ. ಇಷ್ಟು ಜನ ಪ್ರೀತಿ ತೋರಿಸ್ತಾ ಇದ್ದಾರೆ, ಆ ಯೋಗ್ಯತೆ, ಅರ್ಹತೆ ನನಗೆ ಇದ್ಯಾ ಅನ್ನೋದು ಅನ್ನಿಸುತ್ತೆ ಎಂದಿದ್ದಾರೆ ಗಿಲ್ಲಿ.
ಕಾವ್ಯ ಜೊತೆ ಮದುವೆ?
ಕಾವ್ಯ ಶೈವ ಹಾಗೂ ನಿಮ್ಮ ಮದುವೆ ಮಾಡಿಸ್ತೀನಿ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. “ಇದನ್ನು ಹೇಗೆ ಹೇಳೋದು, ಟೈಮ್. ಇವರ ಕಂಕಣಬಲ ಕೂಡಿ ಬರಬೇಕು ಅಷ್ಟೇ. ಕಾವ್ಯ ಶೈವ ಅವರು ನನ್ನ ಸ್ನೇಹಿತರು. ಕಾವ್ಯ ನನ್ನ ಸ್ನೇಹಿತರಾಗಿ ಇರುತ್ತಾರೆ ಅಷ್ಟೇ” ಎಂದು ಹೇಳಿದ್ದಾರೆ.
ಇನ್ನು ಶಿವಣ್ಣ ಕುರಿತಾಗಿ ಮಾತನಾಡಿ, ಅವರ ಕಾಲಿನ ಧೂಳಿಗೂ ನಾನು ಸಮ ಇಲ್ಲ. . ಶಿವಣ್ಣ ನನ್ನ ಬಗ್ಗೆ ಮಾತಾಡಿದ್ದನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿದೆ. ಶಿವಣ್ಣ ವಿಶ್ ಮಾಡಿದ್ದು ನನ್ನ ಪುಣ್ಯ ಎಂದಿದ್ದಾರೆ.
ದರ್ಶನ್ ಅವರನ್ನು ನಾನು ದಿ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ನೋಡಿದ್ದೆ, ನನ್ನನ್ನು ನೋಡಿ ಅವರೇ ಕರೆದರು, ನಾನು ಬೇರೆ ಯಾರನ್ನೋ ಕರೆಯುತ್ತಿದ್ದಾರೆ ಎಂದುಕೊಂಡೆ, ಅವರು ಕರೆದು ಪ್ರಾಪರ್ಟಿ ಕಾಮಿಡಿ ಮಾಡುತ್ತೀರಾ ಎಂದರು. ಸಿಕ್ಕಾಪಟ್ಟೆ ಖುಷಿಯಾಗೋಯ್ತು” ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್‌ಬಾಸ್ ಗೆದ್ದ ಬಳಿಕ ಗಿಲ್ಲಿ ನಟ ಏನಂದ್ರು ಗೊತ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಚಾಂಪಿಯನ್ ಆಗಿದ್ದರಿಂದ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಗ್ರ್ಯಾಂಡ್ ಫಿನಾಲೆ ಹಿನ್ನೆಲೆಯಲ್ಲಿ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋದ ಬಿಗ್‌ಬಾಸ್ ಹೌಸ್ ಬಳಿ ಭಾನುವಾರ ರಾತ್ರಿ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದರು.