Bigg Boss Kannada 13: ಆಸಿಯಾ Vs ಸೌಂದರ್ಯ; ಯಾರಾಗ್ತಾರೆ ಕ್ಯಾಪ್ಟನ್?
Bigg Boss Kannada 13: ಈ ಬಾರಿ ಬಿಗ್ ಬಾಸ್ ಅಲ್ಲಿ (Bigg Boss Kannada 13) ದರೋಡೆಕೋರರು ಹಾಗೂ ರಕ್ಷಕರ ನಡುವೆ ಜಟಾಪಟಿ ನಡೆದಿದೆ. ನಾಮಿನೇಟ್ ಆದವರು ದರೋಡೆಕೋರರಾದರೆ, ನಾಮಿನೇಟ್ ಆಗದೇ ಇದ್ದವರು ರಕ್ಷಕರು. ಈ ಟಾಸ್ಕ್ ಅಲ್ಲಿ ದರೋಡೆಕೋರರ ತಂಡ ಯಶಸ್ಸು ಗಳಿಸಿದೆ. ಮೊದಲು ಡೈಮಂಡ್ ಕದಿಯಲಾಗಿದೆ.
ಬಿಗ್ ಬಾಸ್ ಕನ್ನಡ -
Yashaswi Devadiga
Oct 23, 2026 8:23 AM
ಈ ಬಾರಿ ಬಿಗ್ ಬಾಸ್ ಅಲ್ಲಿ (Bigg Boss Kannada 13) ದರೋಡೆಕೋರರು ಹಾಗೂ ರಕ್ಷಕರ ನಡುವೆ ಜಟಾಪಟಿ ನಡೆದಿದೆ. ನಾಮಿನೇಟ್ ಆದವರು ದರೋಡೆಕೋರರಾದರೆ, ನಾಮಿನೇಟ್ ಆಗದೇ ಇದ್ದವರು ರಕ್ಷಕರು. ಈ ಟಾಸ್ಕ್ ಅಲ್ಲಿ ದರೋಡೆಕೋರರ ತಂಡ ಯಶಸ್ಸು ಗಳಿಸಿದೆ. ಮೊದಲು ಡೈಮಂಡ್ ಕದಿಯಲಾಗಿದೆ. ಆ ಬಳಿಕ ಪದಕ ಕದಿಯುವ ಸಮಯದಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. ಇನ್ನು ಕಿರೀಟವನ್ನು ಯಶಸ್ವಿಯಾಗಿ ಬದಲಾವಣೆ ಮಾಡಲಾಗಿದೆ. ದರೋಡೆಕೋರರ ತಂಡ ವಾರದ ಟಾಸ್ಕ್ ಗೆದ್ದಿದೆ. ಕ್ಯಾಪ್ಟನ್ಸಿ ಓಟದಲ್ಲಿ ಸೌಂದರ್ಯ (Spundarya shetty) ಹಾಗೂ ಆಸಿಯಾ ಬಂದಿದ್ದಾರೆ.
36 ಬಿಲ್ಲೆಗಳನ್ನ ಒಂದರ ಮೇಲೆ ಒಂದು ಸಂಭಾಳಿಸುತ್ತಾ ಇಡಬೇಕು. ಈ ಟಾಸ್ಕ್ ಅಲ್ಲಿ ಯಾರು ವಿನ್ ಆಗ್ತಾರೋ ಅವರು ಮನೆಯ ಕ್ಯಾಪ್ಟನ್. ಈ ವಾರ ಸೌಂದರ್ಯಾ ಶೆಟ್ಟಿ ಹಾಗೂ ತಾಂಡವ್ ರಾಮ್ ಅವರ ಪೈಕಿ ಒಬ್ಬರಿಗೆ ಚಪ್ಪಾಳೆ ಸಿಗುವ ಸಾಧ್ಯತೆ ಇದೆ.