ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ವಂದೇ ಭಾರತ್ ನಿಲುಗಡೆ ಬೇಕು

ನಗರ- ನಗರಗಳ ನಡುವೆ ಸಂಪರ್ಕ ಕಲ್ಪಿಸಬೇಕಾದ ವಂದೇ ಭಾರತ್, ಇಲ್ಲಿ ಮಾತ್ರ ಪ್ರಮುಖ ನಗರ ಮಂಗಳೂರಿನಿಂದ ಹೊರಹೊರಗೇ ಸಂಚರಿಸುವುದು ಯಾಕೋ ವಿಚಿತ್ರವಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವವರು ಮಂಗಳೂರು ಸೆಂಟ್ರಲ್‌ಗೆ ಹೋಗಬಯಸುತ್ತಾರೆಯೇ ವಿನಃ ನಗರದ ಹೊರಗೆ ಇಳಿದುಕೊಳ್ಳುವುದಿಲ್ಲ. ಈ ಎರಡು ನಗರಗಳ ನಡುವೆ ರೈಲಿಗೆ ಬೇಕಾದ ಪ್ರಯಾಣದ ಸಮಯ ಹೆಚ್ಚೆಂದರೆ 15 ನಿಮಿಷ.

Vishwavani Editorial: ವಂದೇ ಭಾರತ್ ನಿಲುಗಡೆ ಬೇಕು

-

Profile
Ashok Nayak Nov 12, 2026 9:17 AM

ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭವಾಗಲಿದ್ದು, ನ.13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು 670 ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ರೈಲು 12 ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ವಾರದಲ್ಲಿ ಆರು ದಿನ ಸಂಚರಿಸಲಿರುವ ಇದು, ಯಶವಂತಪುರದಿಂದ ಬೆಳಗ್ಗೆ 7.35ಕ್ಕೆ ಹೊರಟು ರಾತ್ರಿ 8.35ಕ್ಕೆ ಮಡಗಾಂವ್ ತಲುಪಲಿದೆ. ಆದರೆ, ಈ ರೈಲು ಮಾರ್ಗದಲ್ಲಿ ಬರಲೇಬೇಕಾದ ಪ್ರಮುಖ ನಿಲ್ದಾಣವಾದ, ಕರಾವಳಿಯ ಪ್ರಮುಖ ಬಂದರು ಹಾಗೂ ವಾಣಿಜ್ಯ ಕೇಂದ್ರವಾದ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಇದು ಪ್ರವೇಶಿಸುವುದಿಲ್ಲ. ಬದಲಾಗಿ, ಅಲ್ಲಿಂದ 6 ಕಿಲೋಮೀಟರ್ ದೂರದಲ್ಲಿರುವ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ನಿಂತು, ಉಡುಪಿಯತ್ತ ಮುಂದುವರಿಯು ತ್ತದೆ.

ಇದನ್ನೂ ಓದಿ: Vande Bharat Sleeper Express: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಚಾಲನೆ

ನಗರ- ನಗರಗಳ ನಡುವೆ ಸಂಪರ್ಕ ಕಲ್ಪಿಸಬೇಕಾದ ವಂದೇ ಭಾರತ್, ಇಲ್ಲಿ ಮಾತ್ರ ಪ್ರಮುಖ ನಗರ ಮಂಗಳೂರಿನಿಂದ ಹೊರಹೊರಗೇ ಸಂಚರಿಸುವುದು ಯಾಕೋ ವಿಚಿತ್ರವಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವವರು ಮಂಗಳೂರು ಸೆಂಟ್ರಲ್‌ಗೆ ಹೋಗಬಯಸುತ್ತಾರೆಯೇ ವಿನಃ ನಗರದ ಹೊರಗೆ ಇಳಿದುಕೊಳ್ಳುವುದಿಲ್ಲ. ಈ ಎರಡು ನಗರಗಳ ನಡುವೆ ರೈಲಿಗೆ ಬೇಕಾದ ಪ್ರಯಾಣದ ಸಮಯ ಹೆಚ್ಚೆಂದರೆ 15 ನಿಮಿಷ. ಆದರೆ ಇದರ ಸೇರ್ಪಡೆ, ಪ್ರಯಾಣಿಕರ ಸಂಖ್ಯೆ ಯನ್ನು ಎರಡೂ ಕಡೆಗಳಲ್ಲಿ ಗಣನೀಯವಾಗಿ ಹೆಚ್ಚಿಸಲಿದೆ.

ಉಡುಪಿಯ ಬಳಿಕ ಕುಂದಾಪುರ, ಬೈಂದೂರು ಮೊದಲಾದ ಕೆಲವು ಸಣ್ಣ ನಿಲ್ದಾಣಗಳಲ್ಲೂ ನಿಲ್ಲುವ ವಂದೇ ಭಾರತ್, ಮಂಗಳೂರು ನಗರದೊಳಗೆ ಯಾಕೆ ಪ್ರವೇಶಿಸಬಾರದೋ ತಿಳಿಯದು. ಇದರಿಂದ ಪ್ರಯಾಣದ ಸಮಯದಲ್ಲಿ ಗಣನೀಯ ವ್ಯತ್ಯಾಸವೇನೂ ಆಗದು. ಬೆಂಗಳೂರಿನಿಂದ ಅರ್ಧ ಗಂಟೆ ಮುನ್ನವೇ ಹೊರಡುವುದರಿಂದ ಇದನ್ನು ಸರಿದೂಗಿಸಬಹುದು. ವಂದೇ ಭಾರತ ರೈಲಿನಿಂದ ಕರಾವಳಿಯ ಪ್ರವಾಸೋದ್ಯಮ, ತೀರ್ಥಕ್ಷೇತ್ರ ಪ್ರವಾಸೋದ್ಯಮ ಗಣನೀಯವಾಗಿ ಹೆಚ್ಚಬಹುದು. ಆದರೆ ರೈಲು ಪ್ರಮುಖ ನಿಲ್ದಾಣವನ್ನು ಸ್ಪರ್ಶಿಸುವುದು ಮುಖ್ಯ.

ಈ ಮೊದಲು ಮಂಗಳೂರು ವಿಭಾಗವು ಕೇರಳದ ಪಾಲ್ಘಾಟ್ ವಿಭಾಗಕ್ಕೆ ಸೇರಿದ್ದಾಗ, ಮಂಗಳೂರು ಸೆಂಟ್ರಲ್ ಅನ್ನು ಬೈಪಾಸ್ ಮಾಡಿ ಕೇರಳದ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಹೋಗುವ ರೈಲುಗಳ ಚಾಳಿ ಹೆಚ್ಚಿತ್ತು. ಈ ಬಾರಿ ಅದು ಗೋವಾ ಕಡೆಗೂ ವಿಸ್ತರಿಸಿದಂತಿದೆ. ಆದರೆ ಮಂಗಳೂರು ಈ ತ್ರಿಕೋನದ ಪ್ರಮುಖ ಬಿಂದು ಆಗಿರುವುದರಿಂದ, ಅದನ್ನು ಕೈಬಿಟ್ಟು ಫಾಯಿದೆ ಪಡೆಯುತ್ತೇವೆ ಎಂದು ಅಷ್ಟೇನೂ ಫಲ ನೀಡದು ಹಾಗೂ ಅಪ್ರಾಯೋಗಿಕ