ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg boss Kannada 13: ಕಿಚ್ಚನ ಮೊದಲ ಚಪ್ಪಾಳೆ ಇವರಿಗೆ! ಜೊತೆ ಸಿಗಲಿದೆ ಈ ಬಂಪರ್‌ ಗಿಫ್ಟ್‌

Bigg boss Kannada 13:ಬಿಗ್‌ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಬಂದ ಸುದೀಪ್, ಅಲ್ಲಿರೋ ವಿಶೇಷತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಲು ಆರಂಭಿಸಿದರು. ಹಾಗೆಯೇ ಮೂರ್ತಿಯ ಕೈಯಲ್ಲಿ "ಕಿಚ್ಚನ ಚಪ್ಪಾಳೆ" ಬರಹವುಳ್ಳ ಪತ್ರವಿತ್ತು. ಬಿಗ್​​ಬಾಸ್ ಆರಂಭವಾದ ಮೊದಲ ದಿನವೇ ಸುದೀಪ್ ಅವರು ಈ ಸೀಸನ್ನಿನ ತಮ್ಮ ಮೊದಲ ಚಪ್ಪಾಳೆ ನೀಡಿದ್ದಾರೆ. ಯಾರಿಗೆ?

ಕಿಚ್ಚನ ಮೊದಲ ಚಪ್ಪಾಳೆ ಇವರಿಗೆ! ಜೊತೆ ಸಿಗಲಿದೆ ಈ ಬಂಪರ್‌ ಗಿಫ್ಟ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 7, 2026 9:35 AM

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13ಕ್ಕೆ (Bigg Boss Kannada 13) ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಬಂದ ಸುದೀಪ್, ಅಲ್ಲಿರೋ ವಿಶೇಷತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಲು ಆರಂಭಿಸಿದರು. ಹಾಗೆಯೇ ಮೂರ್ತಿಯ ಕೈಯಲ್ಲಿ "ಕಿಚ್ಚನ ಚಪ್ಪಾಳೆ" ಬರಹವುಳ್ಳ ಪತ್ರವಿತ್ತು. ಬಿಗ್​​ಬಾಸ್ ಆರಂಭವಾದ ಮೊದಲ ದಿನವೇ ಸುದೀಪ್ ಅವರು ಈ ಸೀಸನ್ನಿನ ತಮ್ಮ ಮೊದಲ ಚಪ್ಪಾಳೆ ನೀಡಿದ್ದಾರೆ. ಯಾರಿಗೆ?

ಕಿಚ್ಚನ ಚಪ್ಪಾಳೆ ಇವರಿಗೆ!

ಪ್ರತಿ ಬಿಗ್‌ ಬಾಸ್‌ ಸೀಸನ್‌ನಲ್ಲಿ ಕಿಚ್ಚನ ಚಪ್ಪಾಳೆಗೆ ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಪ್ರತಿ ವಾರವೂ ಸ್ಪರ್​ಧಿಗಳು ವಿಶೇಷ ಶ್ರಮ ಹಾಕುತ್ತಾರೆ. ಕಿಚ್ಚನ ಚಪ್ಪಾಳೆ ಪಡೆದವರ ಚಿತ್ರವನ್ನು ಗೋಡೆಗೆ ನೇತು ಹಾಕಲಾಗುತ್ತದೆ. ಹಾಗಾಗಿಯೇ ಕಿಚ್ಚನ ಚಪ್ಪಾಳೆಗೆ ಸಾಕಷ್ಟು ವಿಶೇಷ. ಗೋಡೆಯ ಮೇಲೆ ಹಾಕುವ ಜೊತೆಗೆ ಈ ಬಾರಿ ಚಪ್ಪಾಳೆ ಪಡೆದ ವ್ಯಕ್ತಿಗೆ ಸುದೀಪ್ ಅವರಿಂದ ವಿಶೇಷ ಉಡುಗೊರೆಯೂ ಸಹ ದೊರಕಲಿದೆ.

ಇದನ್ನೂ ಓದಿ: Bigg Boss Kannada 13: ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

ಸುದೀಪ್ ಅವರ ಇಷ್ಟದ ವಸ್ತುಗಳನ್ನೇ ಉಡುಗೊರೆಗಳಾಗಿ ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಅದನ್ನು ಈಗ ಪ್ರದರ್ಶನಕ್ಕೂ ಇಡಲಾಗಿದೆ.

ಈ ಬಾರಿ ಇಡೀ ಮನೆಯನ್ನು ಜಾಗತಿಕ ಪ್ರವಾಸಿ ತಾಣಗಳು ಮತ್ತು ಏವಿಯೇಷನ್ ಶೈಲಿಯಲ್ಲಿ ವಿನೂತನವಾಗಿ ಸಿಂಗರಿಸಲಾಗಿದೆ. ವಿಮಾನದ ಕಾಕ್‌ಪಿಟ್ ಪ್ರವೇಶದ್ವಾರ, ಕನ್ನಡದ ಸೊಗಡಿನ ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮಾದರಿಯ ಜೈಲು ಇನ್ನಿತರ ಸ್ಪೆಷಾಲಿಟಿಗಳು ಮನೆಯೊಳಗೆ ಇವೆ.

ಕಳೆದ ಬಾರಿಯ ಮೈಸೂರು ಅರಮನೆಯ ವಿನ್ಯಾಸದ ಬದಲು ಈ ಬಾರಿ ಪ್ರವೇಶ ದ್ವಾರಕ್ಕೆ ‘ನ್ಯೂಯಾರ್ಕ್ ಸಿಟಿ’ಯ ಅತ್ಯಾಧುನಿಕ ರೂಪ ನೀಡಲಾಗಿದೆ. ಮುಖ್ಯದ್ವಾರದ ಮೇಲ್ಭಾಗದಲ್ಲೇ ವಿಮಾನದ ಕಾಕ್‌ಪಿಟ್ ರೂಪಿಸಲಾಗಿದ್ದು, ಅಲ್ಲಿಂದ ಒಳಗೆ ಇಳಿದುಬರಲು ಮೆಟ್ಟಿಲುಗಳನ್ನು ಜೋಡಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಇದರ ಜೊತೆಗೆ, ಸ್ಪರ್ಧಿಗಳ ಆರೋಗ್ಯ ರಕ್ಷಣೆ ಮತ್ತು ತುರ್ತು ಚಿಕಿತ್ಸೆಗಾಗಿ 24 ಗಂಟೆಯೂ ಕಾರ್ಯನಿರ್ವಹಿಸುವ ವೈದ್ಯಕೀಯ ತಂಡದೊಂದಿಗೆ ಸುಸಜ್ಜಿತ ‘ಪ್ರಥಮ ಚಿಕಿತ್ಸಾ ಕೇಂದ್ರ’ವನ್ನು ಪ್ರವೇಶ ದ್ವಾರದ ಬಳಿಯೇ ಸ್ಥಾಪಿಸಲಾಗಿದೆ. ಇನ್ನು ಇಡೀ ಮನೆಯ ಸಂಚಾರಕ್ಕೆ ಸಾಂಕೇತಿಕವಾಗಿ ದಾರಿ ತೋರಲು ಒಳಗೊಂದು ದೊಡ್ಡ ದಿಕ್ಸೂಚಿಯನ್ನು ಅಳವಡಿಸಲಾಗಿದೆ.

ವಿಶೇಷವಾಗಿ, ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಪ್ರತಿಮೆಗೆ ಕನ್ನಡದ ಸೊಗಡು ನೀಡಲಾಗಿದ್ದು, ಮೂಗುತಿ, ಹಣೆಗೆ ಬೊಟ್ಟು ಇರಿಸಿ, ಕೈಯಲ್ಲಿ ‘ಕಿಚ್ಚನ ಚಪ್ಪಾಳೆ’ ಫ್ರೇಮ್ ನೀಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Bigg Boss kannada 13: ನಮ್ಮನ್ನ ಕರೆಸಿ ಈ ರೀತಿ ರೋಧನೆ ಏಕೆ ಕೊಡ್ತಾ ಇದ್ದೀರಾ ಬಿಗ್‌ ಬಾಸ್‌? ಸ್ಪರ್ಧಿಗಳು ಗರಂ

ಇದರ ಪಕ್ಕದಲ್ಲೇ ಜಪಾನಿ ಶೈಲಿಯ ವಾಸ್ತುಶಿಲ್ಪ, ಡ್ರ್ಯಾಗನ್ ಕಲಾಕೃತಿಗಳು ಹಾಗೂ ಸಾಧಕರ ನೆನಪಿನ ‘ವಾಲ್ ಆಫ್ ಫೇಮ್’ ಅನ್ನು ರೂಪಿಸಲಾಗಿದೆ.