ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ʻಬಿಗ್‌ಬಾಸ್ ಕನ್ನಡ ಸೀಸನ್ 13ರʼ (Bigg Boss Kannada 13) ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಕಾಮನ್ ಮ್ಯಾನ್ ಎಂಟ್ರಿ. ಬಿಗ್‌ಬಾಸ್ ಸೀಸನ್ 13 ರಲ್ಲಿ ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, 'ಬಿಗ್‌ಬಾಸ್ ಅಗ್ನಿಪರೀಕ್ಷೆ' (Bigg Boss Agnipariksha) ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಅಗ್ನಿಪರೀಕ್ಷೆಗೆ ತೀರ್ಪುಗಾರರಾಗಿ ವಿನಯ್ ಗೌಡ ಆಯ್ಕೆಯಾಗಿದ್ದು, ಪ್ರೇಕ್ಷಕರಿಗೆ ಲೈವ್ (Live) ವೀಕ್ಷಣೆಗೆ ಲಾಲ್‌ಬಾಗ್‌ನಲ್ಲಿ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.
ಬಿಗ್‌ಬಾಸ್ ಸ್ಪರ್ಧಿಗಳಂತೆಯೇ ಅಗ್ನಿಪರೀಕ್ಷೆ ನಡೆಸಿಕೊಡುವವರ ಬಗ್ಗೆಯೂ ಇದಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಅವರು, ಇವರು ಎಂದೆಲ್ಲಾ ಚರ್ಚೆಯಾಗುತ್ತಿದ್ದು, ಅವರ ಪೈಕಿ ಮೊದಲ ಜಡ್ಜ್ ಫೋಟೋ ಅನ್ನು ಕಲರ್ಸ್ ವಾಹಿನಿ ಶೇರ್ ಮಾಡಿದೆ. ಅಗ್ನಿಪರೀಕ್ಷೆಗೆ ready ಆಗಿರೋ ಸ್ಪರ್ಧಿಗಳನ್ನು ಜಡ್ಜ್ ಮಾಡೋ ಈ handsome ಯಾರು ಎಂದು ಕ್ಯಾಪ್ಟನ್ ಕೊಟ್ಟಿದೆ. ಅವರು ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಎನ್ನೋದು ಗೊತ್ತಾಗುತ್ತಿದೆ. ಇದಕ್ಕೆ ಹಲವರು ಕಮೆಂಟ್ ಮಾಡಿದ್ದು, ಇವರ ಹೆಸರನ್ನು ತಿಳಿಸಿದ್ದಾರೆ.
ಇದನ್ನೂ ಓದಿ: Rashmika Mandanna: ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್
ಆಗಸ್ಟ್ 6ರಿಂದ ಆರಂಭವಾಗಿರುವ ಫ್ಲವರ್ ಶೋನಲ್ಲಿ ಬಿಗ್ ಬಾಸ್ ತಂಡ ವಿಶೇಷವಾದ ‘ಬಿಗ್ ಬಾಸ್ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಜೋನ್’ ಸಿದ್ಧಪಡಿಸಿದೆ. ಈ ಜೋನ್‌ನಲ್ಲಿ ಬಿಗ್ ಬಾಸ್‌ನ ಐಕಾನಿಕ್ ಚೇರ್ ಜೊತೆಗೆ ವಿಶೇಷ ಸೆಲ್ಫಿ ಜೋನ್ ಕೂಡ ಇರಲಿದೆ.
ಬಿಗ್‌ಬಾಸ್ ಎಕ್ಸ್‌ಪೀರಿಯನ್ಸ್ ಜೋನ್ಗೆ ಹೋಗಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು. ಹೀಗೆ ಹಂಚಿಕೊಂಡ ಫೋಟೊವನ್ನು ಕಲರ್ಸ್ ಕನ್ನಡದ ಜೊತೆಗೆ ಟ್ಯಾಗ್ ಮಾಡಬೇಕು.ಚಿತ್ರಕ್ಕೆ #BBKAGNIPARIKSHE ಹ್ಯಾಷ್ ಟ್ಯಾಗ್ ಹಾಕಬೇಕು. ಕಲರ್ಸ್ ವಾಹಿನಿ ಅಥವಾ ಬಿಗ್‌ಬಾಸ್ ಆಯೋಜಕರು ಆಯ್ದ ಕೆಲವರನ್ನು ಬಿಗ್‌ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ನೋಡಲು ಆಹ್ವಾನವನ್ನು ಕಳಿಹಿಸುತ್ತಾರೆ. ಲಾಲ್ಬಾಗ್ ಫ್ಲವರ್ ಶೋ ಆಗಸ್ಟ್ 06 ಆರಂಭವಾಗಿದ್ದು, ಆಗಸ್ಟ್ 17ರ ವರೆಗೆ ನಡೆಯಲಿದೆ.
ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ. ರಿಲೀಸ್ ಆದ ಪ್ರೋಮೋದಲ್ಲಿ `Thank You Karnataka’ ಎಂದು ಶುರುವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋ ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನ ತಲುಪಿವೆ.
ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Bigg Boss Kannada 13: ಬಿಗ್‌ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ
ಅಸಂಖ್ಯ ಜನರು ತಮ್ಮ ವಿಡಿಯೋ ಕಳುಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದವರು ಒಂದಿಷ್ಟು ಮಂದಿ. ಅವರು ಯಾರು, ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ಯಾರು ಎನ್ನೋದನ್ನು ಆಗಸ್ಟ್ 16ರ ರಾತ್ರಿ 9 ಗಂಟೆಗೆ ಹೇಳುವುದಾಗಿ ಈ ಪ್ರೊಮೋದಲ್ಲಿ ತಿಳಿಸಲಾಗಿದೆ.