ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rashmika Mandanna: ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌

Rashmika Mandanna:ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಮೈಸಾ, ರಣಬಾಲಿ, ಪುಷ್ಪ 3, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಮೈಸಾ ಬಗ್ಗೆ ಹೇಳೋದಾದ್ರೆ, ರವೀಂದ್ರ ಪುಲ್ಲೆ ನಿರ್ದೇಶನದ ಆ್ಯಕ್ಷನ್-ಥ್ರಿಲ್ಲರ್ 'ಮೈಸಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಕೇಂದ್ರಿತ ಸಿನಿಮಾದಲ್ಲಿ, ರಶ್ಮಿಕಾ ಗೋಂಡ್ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Aug 6, 2026 10:44 AM

ಗಾಯದಿಂದಾಗಿ ವಿಶ್ರಾಂತಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಆರೋಗ್ಯದ ಬಗ್ಗೆ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಮದುವೆಯ ಫೋಟೋಗಳನ್ನು (recovery routine ) ನೋಡುತ್ತಾ, ವಿಶ್ರಾಂತಿ ಪಡೆಯುತ್ತಿರುವ ದಿನಚರಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕುಟುಂಬದೊಂದಿಗೆ ಸಮಯ

ನಾನು ಎಲ್ಲಿಂದ ಪ್ರಾರಂಭಿಸಬೇಕು? ನನ್ನ ದಿನಗಳು ಚೆನ್ನಾಗಿ ನಡೆಯುತ್ತಿವೆ. ಬಹಳ ನಿದ್ರೆ ಮತ್ತು ಗುಣಮುಖರಾಗುವುದು, ಒಗಟುಗಳು, ಓದುವುದು, ಕೆಲವು ಕಾರ್ಯಕ್ರಮಗಳನ್ನು ನೋಡುವುದು. ಕೂದಲು ಮತ್ತು ಚರ್ಮದ ಆರೈಕೆ ಮಾಡುತ್ತಿದ್ದೇನೆ. ಸಭೆಗಳು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೇನೆ.”

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋಕೆ ಮುಹೂರ್ತ ಫಿಕ್ಸ್‌! ಇಲ್ಲಿದೆ ಹೊಸ ಪ್ರೋಮೋ

“ಮದುವೆ ಫೋಟೋಗಳು ಮತ್ತು ವೀಡಿಯೋಗಳನ್ನು ನೋಡುತ್ತಿದ್ದೇನೆ. ಈಗ ತನಕ ಸಮಯ ಸಿಗುತ್ತಿರಲಿಲ್ಲ. ನನ್ನ ದಿನಚರಿ ಹೀಗಿದೆ – ದೇಹ ಹೇಳಿದಾಗ ಎದ್ದೇಳುವುದು (ಅಲಾರಂ ಇಲ್ಲ), ದಿನಕ್ಕೆ ಎರಡು ಬಾರಿ ಊಟ, ಸಭೆಗಳು, ಒಗಟು ಅಥವಾ ಓದುವುದು ಹೆಚ್ಚು ಮಾಡದಂತೆ ನೋಡಿಕೊಳ್ಳುವುದು, ಒಂದು ಕಾರ್ಯಕ್ರಮ ನೋಡಿ ಮಲಗುವುದು.

ತೀರಾ ಕಷ್ಟಪಟ್ಟು ವರ್ಕೌಟ್ ಮಾಡುತ್ತಿದ್ದ ರಶ್ಮಿಕಾ ಅವರಿಗೆ ಈಗ ವಿಶ್ರಾಂತಿ ಅನಿವಾರ್ಯವಾಗಿದೆ. ವರ್ಕೌಟ್ ಇಲ್ಲದೆ ತೂಕ ಹೆಚ್ಚಾಗುವ ಭಯದಲ್ಲಿದ್ದಾರೆ. ಆದ್ದರಿಂದ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ನಿದ್ದೆ, ತ್ವಚೆಯ ಆರೈಕೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.. ನಾನು ಕಾಲನ್ನು ಮೇಲಕ್ಕೆತ್ತಿ ಎಲ್ಲವನ್ನೂ ಮಾಡಬಹುದು.

ಇದು ‘ಮೈದಾ’ ಚಿತ್ರದ ನೃತ್ಯ ಚಿತ್ರೀಕರಣದ ಸಮಯದಲ್ಲಿ ಆಯಿತು. ಇದು ನಾನು ಮಾಡಿದ ಅತ್ಯಂತ ಕಠಿಣ ಚಿತ್ರ. ಚಿಂತಿಸಬೇಡಿ… ನೋವು ಇದೆ, ಆದರೆ ತುಂಬಾ ಕಷ್ಟವಲ್ಲ ಎಂದು ಬರೆದುಕೊಂಡಿದ್ದಾರೆ.

ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಮೈಸಾ, ರಣಬಾಲಿ, ಪುಷ್ಪ 3, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಮೈಸಾ ಬಗ್ಗೆ ಹೇಳೋದಾದ್ರೆ, ರವೀಂದ್ರ ಪುಲ್ಲೆ ನಿರ್ದೇಶನದ ಆ್ಯಕ್ಷನ್-ಥ್ರಿಲ್ಲರ್ 'ಮೈಸಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಕೇಂದ್ರಿತ ಸಿನಿಮಾದಲ್ಲಿ, ರಶ್ಮಿಕಾ ಗೋಂಡ್ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್ ಮತ್ತು ನೀರೊಳಗಿನ ಸನ್ನಿವೇಶದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಆದ್ರೀಗ ಹಾಡಿನ ಚಿತ್ರೀಕರಣದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. 6 ವಾರಗಳ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಯ ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.