ಇನ್ಸ್ಟಾಗ್ರಾಮ್ ಬಳಿಕ ಎಕ್ಸ್ಗೂ ಸೋನಿಯಾ ಗಾಂಧಿಗೆ ಎಂಟ್ರಿ: ರಾಜೀವ್ ಗಾಂಧಿ ಜತೆಗಿನ ಮೊದಲ ಭೇಟಿ ನೆನಪಿಸಿಕೊಂಡ ಕಾಂಗ್ರೆಸ್ ನಾಯಕಿ
ಕಳೆದ ಬುಧವಾರ ಇನ್ಸ್ಟಾಗ್ರಾಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈಗ ಇನ್ನೊಂದು ಪ್ರಮುಖ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ಗೆ ಪ್ರವೇಶ ಪಡೆದಿದ್ದಾರೆ. ಅವರು ತಮ್ಮ ಮೊದಲ ಪೋಸ್ಟ್ ನಲ್ಲಿ ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಗ್ಗೆ ಹೇಳಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕೇಂಬ್ರಿಡ್ಜ್ನ (Cambridge) ಸಣ್ಣ ಗ್ರೀಕ್ ರೆಸ್ಟೋರೆಂಟ್ವೊಂದರಲ್ಲಿ ನಮ್ಮ ಪ್ರೇಮಯಾನ ಆರಂಭವಾಯಿತು. ರಾಜೀವ್ (former Prime Minister Rajiv Gandhi) ಮತ್ತು ನಾನು ಪ್ರೀತಿ, ನಗು ಮತ್ತು ನೆನಪುಗಳಿಂದ ತುಂಬಿದ ಒಂದು ಜಗತ್ತನ್ನು ಸೃಷ್ಟಿಸಿದೆವು. ನವೆಂಬರ್ 10ರಂದು ಆ ಜಗತ್ತನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಾಡಿರುವ ಮೊದಲ ಪೋಸ್ಟ್ ನಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ (Congress Parliamentary Party) ಸೋನಿಯಾ ಗಾಂಧಿ (Sonia Gandhi) ಹೇಳಿಕೊಂಡಿದ್ದಾರೆ. ಕಳೆದ ಬುಧವಾರ ಇನ್ಸ್ಟಾಗ್ರಾಮ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಅವರು ಈಗ ಎಕ್ಸ್ ಖಾತೆಯನ್ನು ತೆರೆದಿದ್ದಾರೆ.
ವಿಡಿಯೊ ಸಂದೇಶವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಅವರು, 1965ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ತಮ್ಮ ಪ್ರೇಮಕಥೆಯು ಇಂಗ್ಲೆಂಡ್ನ ಕೇಂಬ್ರಿಡ್ಜ್ನಲ್ಲಿರುವ 'ದಿ ವರ್ಸಿಟಿ' ಎಂಬ ಗ್ರೀಕ್ ರೆಸ್ಟೋರೆಂಟ್ನಲ್ಲಿ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಂಡರು.
ಸೋನಿಯಾ ಗಾಂಧಿ ಇನ್ಸ್ಟಾಗ್ರಾಮ್ಗೆ ಗ್ರ್ಯಾಂಡ್ ಎಂಟ್ರಿ; ಆತ್ಮಕಥೆಯ ಫಸ್ಟ್ ಲುಕ್ ಶೇರ್ ಮಾಡಿದ ಕಾಂಗ್ರೆಸ್ ನಾಯಕಿ
ಇದರೊಂದಿಗೆ ನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕುರಿತು ಮಾತನಾಡಿರುವ ಅವರು, ರಾಜೀವ್ ಗಾಂಧಿ ಅವರೊಂದಿಗಿನ ತಮ್ಮ ಜೀವನದ ವೈಯಕ್ತಿಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಳೆಯ ಫೋಟೋಗಳು ಮತ್ತು ನೆನಪುಗಳ ಮೆಲುಕು ಹಾಕಿದ್ದಾರೆ.
ಕೇಂಬ್ರಿಡ್ಜ್ನ ಒಂದು ಸಣ್ಣ ಗ್ರೀಕ್ ರೆಸ್ಟೋರೆಂಟ್ನಲ್ಲಿ ನಮ್ಮ ಪ್ರೇಮಯಾನ ಆರಂಭವಾಯಿತು. ರಾಜೀವ್ ಮತ್ತು ನಾನು ಪ್ರೀತಿ, ನಗು ಮತ್ತು ನೆನಪುಗಳಿಂದ ತುಂಬಿದ ಒಂದು ಜಗತ್ತನ್ನು ಸೃಷ್ಟಿಸಿದೆವು. ಆ ಜಗತ್ತನ್ನು ನವೆಂಬರ್ 10ರಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದು ತಿಳಿಸಿದರು.
In a small Greek restaurant in Cambridge my journey of love began. Rajiv and I created a world filled with love, laughter and memories. On 10th November, I share that world with you. https://t.co/zvN5Rqqstf
— Sonia Gandhi (@SoniaGandhi) October 24, 2026
ಇದರೊಂದಿಗೆ ರಾಜೀವ್ ಗಾಂಧಿ ಅವರತ್ತ ತಮ್ಮನ್ನು ಆಕರ್ಷಿಸಿದ ಗುಣಗಳ ಬಗ್ಗೆ ನೆನಪಿಸಿಕೊಂಡ ಅವರು, ರಾಜೀವ್ ತುಂಬಾ ಸುಂದರವಾಗಿದ್ದರು. ಆ ದಿನಗಳಲ್ಲಿ ಇಂಗ್ಲೆಂಡ್ನಲ್ಲಿ ಒಳ್ಳೆಯ ಆಹಾರವನ್ನು ಹುಡುಕುವುದು ಎಷ್ಟು ಕಷ್ಟಕರವಾಗಿತ್ತು. ಆಗ ರೆಸ್ಟೋರೆಂಟ್ಗಳು ತುಂಬಾ ಕಡಿಮೆ ಇದ್ದವು. ಕೊನೆಗೆ ನಮಗೆ ಭಾರತೀಯ ಹಾಗೂ ಇಟಾಲಿಯನ್ ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದ ಒಂದು ಗ್ರೀಕ್ ರೆಸ್ಟೋರೆಂಟ್ ಸಿಕ್ಕಿತು. ಅದು ತಮ್ಮ ಸಂಬಂಧದ ಆರಂಭಕ್ಕೆ ಆ ರೆಸ್ಟೋರೆಂಟ್ ಹೇಗೆ ವೇದಿಕೆಯಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ.
ರಾಜೀವ್ ಗಾಂಧಿ ಅವರ ವ್ಯಕ್ತಿತ್ವದ ಬಗ್ಗೆಯೂ ಉಲ್ಲೇಖಿಸಿರುವ ಅವರು, ರಾಜೀವ್ ತುಂಬಾ ಸೌಮ್ಯ ಸ್ವಭಾವದವರು. ಅದು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ ಎಂದು ತಿಳಿಸಿದ್ದಾರೆ.
ಕಳೆದ ಬುಧವಾರ ಇನ್ಸ್ಟಾಗ್ರಾಮ್ಗೂ ಸೇರ್ಪಡೆಗೊಂಡಿದ್ದ ಸೋನಿಯಾ ಗಾಂಧಿ ಅವರು ಅಲ್ಲಿ ತಮ್ಮ ಆತ್ಮಚರಿತ್ರೆಯ ಮೊದಲ ನೋಟವನ್ನು ಹಂಚಿಕೊಂಡು ಇದು ಪ್ರೀತಿ, ಕರ್ತವ್ಯ, ನಷ್ಟ ಮತ್ತು ತಮಗೆ ಸೇರಿದ್ದೊಂದು ನೆಲೆ ಅಥವಾ ಸ್ಥಾನವನ್ನು ಕಂಡುಕೊಳ್ಳುವ ಕಥೆಯಾಗಿದೆ ಎಂದು ಹೇಳಿದ್ದರು.
ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆ ವಿವಾದ ಅಂತ್ಯ: ಹಾರ್ಪರ್ ಕಾಲಿನ್ಸ್ನಿಂದ ನ.10ಕ್ಕೆ ‘ಬಿಲಾಂಗಿಂಗ್’ ಬಿಡುಗಡೆ
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯು ಭಾರತದೊಂದಿಗಿನ ಅವರ ಸಂಬಂಧವನ್ನು ರೂಪಿಸಿದ ವೈಯಕ್ತಿಕ ಅನುಭವ ಮತ್ತು ದುರಂತಗಳನ್ನು ಮೆಲುಕು ಹಾಕುತ್ತದೆ. ಇಟಲಿಯಲ್ಲಿನ ಅವರ ಬಾಲ್ಯದಿಂದ ಭಾರತದಲ್ಲಿನ ಅವರ ಜೀವನದವರೆಗಿನ ಪ್ರಮುಖ ಸಂಗತಿಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.