BBK 12: ಕಾವು ಜೊತೆ ಸೂರಜ್ ಡ್ಯಾನ್ಸ್ ಹೇಗಿತ್ತು ಗೊತ್ತಾ? ಕಿಚ್ಚನ ಮುಂದೆ ಅಸಲಿ ಕಹಾನಿ ಬಿಚ್ಚಿಟ್ಟ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ಜೋಡಿಯೇ ಪ್ರಮುಖ ಹೈಲೈಟ್. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಕಳೆದ ವಾರ ಸೂರಜ್ ಮತ್ತು ಕಾವ್ಯ ಡ್ಯಾನ್ಸ್ ಪ್ರ್ಯಾಕ್ಟಿಸ್ ಕಂಡು ಗಿಲ್ಲಿ ಸಖತ್ ಉರಿದುಕೊಂಡಿದ್ದರು. ಸೈಡ್‌ನಲ್ಲಿ ನಿಂತು ಹಾಗೇ ನೋಡ್ತಾ ನಿಂತಿದ್ದರು. ಈ ಬಗ್ಗೆ ಕಿಚ್ಚ ಇದೀಗ ಕಾಲೆಳೆದಿದ್ದಾರೆ. ಈ ನಡುವೆ ಅಶ್ವಿನಿ ಅವರಿಗೆ ಗಿಲ್ಲಿ ಕೌಂಟರ್ ಕೊಟ್ಟು ʻಅಶ್ವಿನಿ ಗೌಡ ಅವರು, ನನ್ನ ಹಿಂದೆ ಇವರು ಯಾಕೆ ಬಿದ್ದಿದ್ದಾರೆ ಗೊತ್ತಿಲ್ಲ. ನಾನು ಈಗಾಗಲೇ ಕಮಿಟ್ ಆಗಿರುವೆʼ ಎಂದು ಕಾಲೆಳೆದಿದ್ದಾರೆ.
bigg boss kannada -
Yashaswi Devadiga
Nov 2, 2025 12:26 PM
ಬಿಗ್ ಬಾಸ್ ಸೀಸನ್ 12 (Bigg Boss Kannada 12) ಕುತೂಹಲ ಘಟ್ಟ ತಲುಪಿದೆ. ಕಾವ್ಯ ಮತ್ತು ಸೂರಜ್ ಡ್ಯಾನ್ಸ್ ಮಾಡುವಾಗ ಗಿಲ್ಲಿಗೆ ʻಸ್ವಲ್ಪ ಹಾಗೇ ಹೀಗೆ ಆಗಿತ್ತು ಅಲ್ವ?ʼ ಅಂತ ಕಿಚ್ಚ ಸುದೀಪ್ ಅವರು ಕಾಲೆಳೆದಿದ್ದಾರೆ. ಆಗ ಗಿಲ್ಲಿ ಈ ಬಗ್ಗೆ ಕಾಮಿಡಿ ಮಾಡುತ್ತ, ʻಸತ್ಯ ಅವರಿಬ್ಬರು ಡ್ಯಾನ್ಸ್ ಹೇಗಿತ್ತು ಅಂದರೆ ರೊಮ್ಯಾಂಟಿಕ್ ಸಾಂಗ್ ತರ ಇರಲಿಲ್ಲ. ಅದು ಜಲ್ಲಿ ಕಟ್ಟು ಗೂಳಿ ಹಿಡಿಯುತ್ತಾರಲ್ಲ ಹಾಗೇ ಹಾಗೆ ಇತ್ತುʼ ಎಂದು ಹೇಳಿದ್ದಾರೆ.
ಕಾವ್ಯ ಕೂಡ ಪ್ರ್ಯಾಕ್ಟಿಸ್ ಮಾಡಿದ್ದು ಎಲ್ಲ ಹಾಳಾಗಿ ಹೋಯ್ತು ಎಂದು ಹೇಳಿದ್ದಾರೆ. ಅದಕ್ಕೆ ಸುದೀಪ್ ಅವರು ಗಿಲ್ಲಿಯ ಬಳಿ ʻಏನಾದರೂ ಸಹಾಯ ಇದ್ದರೆ ನೀವು ಮಾಡಬೇಕು ತಾನೆʼ? ಎಂದು ಹೇಳಿದ್ದಾರೆ. ಅದಕ್ಕೆ ಗಿಲ್ಲಿ ಕೂಡ ನನ್ನ ಗುಂಡಿ ನಾನೇ ತೋಡಿಕೊಳ್ಳಾ?ʼ ಎಂದು ಹೇಳಿದ್ದಾರೆ. ಇನ್ನು ಅಶ್ವಿನಿ ಅವರು ಕೂಡ ಗಿಲ್ಲಿ ಹೊಟ್ಟೆ ಉರಿದುಕೊಂಡು ನೋಡಿ ನನಗೂ ತುಂಬಾ ಖುಷಿʼ ಆಯ್ತು ಅಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಅಶ್ವಿನಿ ಅವರಿಗೆ ಗಿಲ್ಲಿ ಕೌಂಟರ್ ಕೊಟ್ಟು ʻಅಶ್ವಿನಿ ಗೌಡ ಅವರು, ನನ್ನ ಹಿಂದೆ ಇವರು ಯಾಕೆ ಬಿದ್ದಿದ್ದಾರೆ ಗೊತ್ತಿಲ್ಲ. ನಾನು ಈಗಾಗಲೇ ಕಮಿಟ್ ಆಗಿರುವೆʼ ಎಂದು ಕಾಲೆಳೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಪ್ರತಿ ಬಾರಿ ಕಿಚ್ಚನ ಚಪ್ಪಾಳೆ, ಎಲಿಮಿನೇಶನ್ ಸೇರಿದಂತೆ ಅನೇಕ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತದೆ. ಅದರಲ್ಲಿಯೂ ಕೆಲವೊಮ್ಮೆ ನೆಟ್ಟಿಗರು ಊಹಿಸಿದ್ದೇ ಸತ್ಯವಾಗುತ್ತದೆ. ಈ ಬಾರಿಗೂ ಎರಡು ಸ್ಪರ್ಧಿಗಳ ಹೆಸರು ಕೇಳಿಬರುತ್ತಿದೆ. ಇವರಿಬ್ಬರಲ್ಲಿ ಒಬ್ಬರು ಮನೆಯಿಂದ ಹೊರಹೋಗೋದು ಕನ್‌ಫರ್ಮ್ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ! ಹಾಗಾದ್ರೆ ಯಾರದು?ಸೋಷಿಯಲ್ ಮೀಡಿಯಾ ಚರ್ಚೆಗಳ ಪ್ರಕಾರ ಮಲ್ಲಮ್ಮ ಹೋಗಬಹುದು ಎನ್ನಲಾಗುತ್ತಿದೆ. ಜೊತೆಗೆ ಮನೆಯಿಂದ ಹೊರ ಬರಬಹುದಾದ ಎಲ್ಲ ಸಾಧ್ಯತೆಗಳಿರೋದು ಕಂಟೆಸ್ಟೆಂಟ್ ಧ್ರುವಂತ್ ಎನ್ನಲಾಗುತ್ತಿದೆ. ಏಕೆಂದರೆ ಅವರ ಆಟದ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.
View this post on Instagram A post shared by Gilli Nata (@official_gilli_nata)
ಬಿಗ್ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್!
ಬಿಗ್ ಬಾಸ್ ಶುರುವಾಗಿನಿಂದ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ಅಪಸ್ವರ ಕೇಳಿ ಬರುತ್ತಲೇ ಇತ್ತು. ಅದುವೇ ಸ್ಪರ್ಧಿಗಳ ಅತಿರೇಕದ ವರ್ತನೆ, ಕಿರುಚಾಟ, ಕೂಗಾಟ. ಈ ಬಗ್ಗೆ ಸುದೀಪ್ ಅವರು ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.ನೀವು ಮಾಡ್ತಿರೋದು ಸರಿ ಅಲ್ಲ ಎಂದು ಹೇಳಿದ್ದಾರೆ. ನೀವು ಹೊರಗೆ ಜೋಕರ್ಸ್ ರೀತಿ ಕಾಣಿಸುತ್ತಿದ್ದೀರಿ .
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಹೊರಗೆ ಸಾಕಷ್ಟು ದೃಷ್ಟಿ ಕೋನ ಇದೆ. ಗುಂಪು ಮಾಡಿದ್ದರೂ, ಟೀಂ ಆಗಿ ಯಾರೂ ಆಡಿಲ್ಲ ಎಂದರು. ಈ ಹಿಂದೆ ಕುಟುಂಬದವರು ಕಾಲ್ ಮಾಡಿ ಮಾತನಾಡಿದ್ದರು. ಆದರೆ ಸ್ಪರ್ಧಿಗಳು ಆ ಮಾತನ್ನೇ ನಂಬಿಕೊಂಡು ಇದ್ದರು. ಈ ಬಗ್ಗೆ ಸುದೀಪ್ ಅವರು ಪ್ರಸ್ತಾಪಿಸಿ, ಮನೆಯವರ ಮಾತನ್ನು ನೀವು ನಂಬಿದರೆ ನಿಮ್ಮಷ್ಟು ದೊಡ್ಡ ಮುಟ್ಠಾಳರು ಮತ್ತೊಬ್ಬರು ಇಲ್ಲ ಎಂದು ನೇರವಾಗಿಯೇ ಹೇಳಿದರು.