ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಮಂಜು ಎಂಟ್ರಿಗೆ ಯಶಸ್ ಫುಲ್‌ ಸೈಲೆಂಟ್‌! ಇಡೀ ಮನೆ ಅಲ್ಲೋಲ ಕಲ್ಲೋಲ

Bigg Boss Kannada 13: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ (Bigg Boss Kannada) ಮನೆಯಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಈ ಹಿಂದೆ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದ ‘ಮಾಡರ್ನ್ ಮಹಾಕವಿ ಮಂಜು’ (Mahakavi Manju) ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಮರುಪ್ರವೇಶಿಸಿದ್ದಾರೆ. ಮಂಜು ಅವರ ಈ ಅನಿರೀಕ್ಷಿತ ಎಂಟ್ರಿ ಮನೆಯ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದ್ದು, ಪ್ರೇಕ್ಷಕರ ಕುತೂಹಲವನ್ನೂ ಹೆಚ್ಚಿಸಿದೆ.

ಮಂಜು ಎಂಟ್ರಿಗೆ ಯಶಸ್ ಫುಲ್‌ ಸೈಲೆಂಟ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 9, 2026 6:35 PM

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ (Bigg Boss Kannada) ಮನೆಯಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಈ ಹಿಂದೆ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದ ‘ಮಾಡರ್ನ್ ಮಹಾಕವಿ ಮಂಜು’ (Mahakavi Manju) ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಮರುಪ್ರವೇಶಿಸಿದ್ದಾರೆ. ಮಂಜು ಅವರ ಈ ಅನಿರೀಕ್ಷಿತ ಎಂಟ್ರಿ ಮನೆಯ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದ್ದು, ಪ್ರೇಕ್ಷಕರ ಕುತೂಹಲವನ್ನೂ ಹೆಚ್ಚಿಸಿದೆ.

ಹೊರಗಿನ ಪ್ರಪಂಚದ ಸುದ್ದಿಗಳು, ಟ್ರೆಂಡಿಂಗ್ ವಿಚಾರಗಳು ಹಾಗೂ ಮನೆಯ ಹೊರಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸ್ಪರ್ಧಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಬಿಗ್ ಬಾಸ್ ಮಂಜು ಅವರನ್ನು ವಿಶೇಷವಾಗಿ ಮನೆಗೆ ಕರೆಸಿದ್ದಾರೆ.

ತಮ್ಮದೇ ಶೈಲಿಯಲ್ಲಿ ಮನೆಮಂದಿಗೆ ಮಾತನಾಡಿಸಿದ ಮಂಜು!

ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ಸ್ಪರ್ಧಿಗಳೊಂದಿಗೆ ಮಾತುಕತೆ ಆರಂಭಿಸಿದ ಮಂಜು, 'ಹೊರಗಿನ ಜಗತ್ತಿನ ಸುದ್ದಿಗಳನ್ನು ಪಡೆಯುವುದಕ್ಕಾಗಿ ಯಾರ್ ಯಾರೋ ಕಾಯುತ್ತಿದ್ದಾರೆ' ಎಂದು ತಮಾಷೆಯಾಗಿ ಹೇಳಿದ್ದಾರೆ.

ಬಳಿಕ ಸೌಂದರ್ಯಾ ಎದುರು ಕುಳಿತು ಹೊರಗಿನ ಪ್ರಪಂಚದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ನಿಮ್ಮ ಆಟವನ್ನೆಲ್ಲ ನೋಡಿದ್ದೇನೆ, ತುಂಬಾ ಚೆನ್ನಾಗಿ ಆಡುತ್ತಿದ್ದೀರಾ. ಮನೆ ಮನೆ ಹಾಗೂ ಮೂಲೆ ಮೂಲೆಗಳಲ್ಲೂ ನಿಮ್ಮದೇ ಸುದ್ದಿ ನಡೀತಿದೆ' ಎಂದು ಹೇಳುವ ಮೂಲಕ ಸ್ಪರ್ಧಿಗಳಿಗೆ ಹೊರಗಿನ ವಾತಾವರಣದ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಮತ್ತೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಮಹಾಕವಿ ಮಂಜ!

ಮಂಜು ಎಂಟ್ರಿಗೆ ಯಶಸ್ ಶಾಕ್!

ಇನ್ನು ಮಂಜು ಅವರ ಮರುಪ್ರವೇಶದಿಂದ ಅಚ್ಚರಿಗೊಳಗಾದವರಲ್ಲಿ ಯಶಸ್ ಕೂಡ ಒಬ್ಬರು. ಈ ಹಿಂದೆ ಮಂಜು ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದಾಗ ಯಶಸ್ ಪಾಯಸ ತಿಂದು ಸಂಭ್ರಮಿಸಿದ್ದರು. ಆದರೆ ಇದೀಗ ಅದೇ ಮಂಜು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಯಶಸ್‌ಗೆ ಶಾಕ್ ಆಗಿದೆ.

ಪ್ರೋಮೊದಲ್ಲಿ ಮಂಜು ಅವರನ್ನು ಕಂಡ ಯಶಸ್ ಗಾಬರಿಗೊಂಡಿದ್ದು, ಬಳಿಕ ಮೌನಕ್ಕೆ ಶರಣಾದ ದೃಶ್ಯಗಳು ಗಮನ ಸೆಳೆದಿವೆ. ಈ ದೃಶ್ಯ ಇದೀಗ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಮಂಜ ಎಂಟ್ರಿ ಕೊಟ್ಟಿದ್ದು ಹೇಗಿತ್ತು? ಸ್ಪರ್ಧಿಗಳು ಶಾಕ್‌

ಸ್ಪರ್ಧಿಗಳ ಆಟದ ಮೇಲೆ ಪ್ರಭಾವ ಬೀರಲಿದ್ದಾರಾ ಮಂಜು?

ಮಂಜು ಮನೆಗೆ ಅತಿಥಿಯಾಗಿ ಬಂದಿರುವುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಹೊರಗಿನ ಬೆಳವಣಿಗೆಗಳ ಮಾಹಿತಿ ಸ್ಪರ್ಧಿಗಳ ಆಟದ ದಿಕ್ಕನ್ನೇ ಬದಲಿಸಲಿದೆಯೇ ಎಂಬ ಪ್ರಶ್ನೆ ಮೂಡಿದೆ.