ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಅಧಿಕಾರ ಕೊಟ್ಟಾಗ, ನಮ್ಮಲ್ಲಿರೋ ಅಹಂಕಾರ ಹೇಗೆ ಹೊರಗೆ ಬರತ್ತೆ ಅನ್ನೋದಕ್ಕೆ ಗಿಲ್ಲಿನೇ ಸಾಕ್ಷಿ ಎಂದ ಅಶ್ವಿನಿ!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಗಿಲ್ಲಿ ನಟ ಕ್ಯಾಪ್ಟನ್‌ ಆಗಿದ್ದರು. ಇದೀಗ ಗಿಲ್ಲಿಯ ಕ್ಯಾಪ್ಟನ್ಸಿ ಬಗ್ಗೆ ನೆಗೆಟಿವ್‌ ಮಾತಾಡಿದ್ದಾರೆ ಮನೆಮಂದಿ. ಫ್ಯಾಮಿಲಿ ವೀಕ್‌ ಇತ್ತು. ಕಂಟೆಸ್ಟೆಂಟ್‌ಗಳ ಕುಟುಂಬದವರು ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಅವರಿಗೆ ಈ ಬಾರಿ ಕ್ಯಾಪ್ಟನ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಕ್ಕು ಅನ್ನು ಬಿಗ್​ ಬಾಸ್​ ನೀಡಿದ್ರು. ಈ ಪೈಕಿ ಕಂಟೆಸ್ಟೆಂಟ್‌ಗಳ ಕುಟುಂಬದವರು ಹೆಚ್ಚಿನ ಮತಗಳನ್ನ ಗಿಲ್ಲಿ ನೀಡಿ, ಆ ಬಳಿಕ ಅಶ್ವಿನಿ ಹಾಗೂ ಗಿಲ್ಲಿ ಮಧ್ಯೆ ಆಟವನ್ನ ಇಟ್ಟಿದ್ದರು ಬಿಗ್‌ ಬಾಸ್‌. ಗಿಲ್ಲಿ ಗೆದ್ದು ಮನೆಯ ಕ್ಯಾಪ್ಟನ್‌ ಆಗಿದ್ದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಈ ವಾರ ಗಿಲ್ಲಿ ನಟ (Gilli Nata) ಕ್ಯಾಪ್ಟನ್‌ (Captain) ಆಗಿದ್ದರು. ಇದೀಗ ಗಿಲ್ಲಿಯ ಕ್ಯಾಪ್ಟನ್ಸಿ ಬಗ್ಗೆ ನೆಗೆಟಿವ್‌ ಮಾತಾಡಿದ್ದಾರೆ ಮನೆಮಂದಿ. ಫ್ಯಾಮಿಲಿ ವೀಕ್‌ ಇತ್ತು. ಕಂಟೆಸ್ಟೆಂಟ್‌ಗಳ ಕುಟುಂಬದವರು ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಅವರಿಗೆ ಈ ಬಾರಿ ಕ್ಯಾಪ್ಟನ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಕ್ಕು ಅನ್ನು ಬಿಗ್​ ಬಾಸ್​ ನೀಡಿದ್ರು. ಈ ಪೈಕಿ ಕಂಟೆಸ್ಟೆಂಟ್‌ಗಳ ಕುಟುಂಬದವರು ಹೆಚ್ಚಿನ ಮತಗಳನ್ನ (Vote) ಗಿಲ್ಲಿ ನೀಡಿ, ಆ ಬಳಿಕ ಅಶ್ವಿನಿ ಹಾಗೂ ಗಿಲ್ಲಿ ಮಧ್ಯೆ ಆಟವನ್ನ ಇಟ್ಟಿದ್ದರು ಬಿಗ್‌ ಬಾಸ್‌. ಗಿಲ್ಲಿ ಗೆದ್ದು ಮನೆಯ ಕ್ಯಾಪ್ಟನ್‌ ಆಗಿದ್ದರು. ನಾಮಿನೇಶನ್‌ ವೇಳೆ ಕಾವ್ಯ (Kavya Shaiva) ಅವರಿಗೆ ಫೇವರಿಸಮ್‌ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಮನೆವರೆಲ್ಲ ಗರಂ ಆದರು. ಇದೀಗ ಗಿಲ್ಲಿ ಬಗ್ಗೆ ಅಸಮಾಧನ ಹೊರ ಹಾಕಿದ್ದಾರೆ ಸ್ಪರ್ಧಿಗಳು.

ಗಿಲ್ಲಿ ಕ್ಯಾಪ್ಟನ್‌ ಹೇಗಿತ್ತು?

ಗಿಲ್ಲಿ ಕ್ಯಾಪ್ಟನ್‌ ಹೇಗಿತ್ತು ಅಂತ ಸುದೀಪ್‌ ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಅವರು ಕ್ಯಾಪ್ಟನ್‌ ಅಂತ ಅನ್ನಿಸಲೇ ಇಲ್ಲ ಎಂದಿದ್ದಾರೆ. ರಘು ಅವರು, ಅವರಿಗೆ ರೆಸ್‌ಪಾನ್ಸಿಬಲ್‌ ಇರಲಿಲ್ಲ ಎಂದಿದ್ದಾರೆ. ಅಶ್ವಿನಿ ಮಾತನಾಡಿ, ಒಂದು ಅಧಿಕಾರ ಕೊಟ್ಟಾಗ, ನಮ್ಮಲ್ಲಿರುವ ಅಹಂಕಾರ ಹೊರಗೆ ಬರತ್ತೆ ಅನ್ನೋದಕ್ಕೆ ಸಾಕ್ಷಿ ಗಿಲ್ಲಿನೇ ಎಂದಿದ್ದಾರೆ. ಸ್ಪಂದನಾ ಕೂಡ ಗಿಲ್ಲಿ ತುಂಬಾ ಟಾಕ್ಸಿಕ್‌ ಥರ ಅನ್ನಿಸೋಕೆ ಶುರು ಆದ್ರು ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ತಾಕತ್ ಇದ್ದಿದ್ದಕ್ಕೆ ಕ್ಯಾಪ್ಟನ್‌ ಆದೆ, ನಿಮಗೆ ಯೋಗ್ಯತೆ ಇಲ್ಲ! ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ಉಗ್ರಾವತಾರ

ಅಶ್ವಿನಿ ಮತ್ತೆ ಮಾತನಾಡಿ, ನಾನು ಕಪ್‌ ಗೆದ್ದುಕೊಂಡು ಹೋಗ್ತೀನಿ, ಇನ್ನೊಬ್ಬರನ್ನು ಫಿನಾಲೆಗೆ ಕರೆದುಕೊಂಡು ಹೋಗ್ತೀನಿ ಅಂತ ಸವಾಲ್‌ ಒಡ್ದಿದಂತಹ ಗಿಲ್ಲಿ. ಯಾರೇ ಇದ್ದಿದ್ದರು ಕಾವ್ಯ ಅವರನ್ನೇ ಸೇಫ್‌ ಮಾಡ್ತಾ ಇದ್ದರು ಎಂದಿದ್ದಾರೆ ಸ್ಪಂದನಾ.



ಗಿಲ್ಲಿ ನಟ ಅವರದ್ದು ಎಲ್ಲರಿಗೂ ಇಷ್ಟ ಆಗೋ ವ್ಯಕ್ತಿತ್ವ. ಡೈಲಾಗ್ ಮೂಲಕ ತಮ್ಮ ಮಾತಿನ ಮೂಲಕ ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ಮಾಡೋ ಕಾಮಿಡಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅದರಲ್ಲೂ ಸಿನಿಮಾ ದೃಶ್ಯಗಳನ್ನು ಮನೆಯಲ್ಲಿ ನಡೆಯುವ ಘಟನೆಗಳಿಗೆ ಹೋಲಿಸಿ ಮಾಡುವ ಕಾಮಿಡಿಗಳು ಅದ್ಭುತವಾಗಿ ಇರುತ್ತವೆ.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ಥರ ನೂರು ಶತ್ರು ಇದ್ದರೂ ಓಕೆ, ರಘು ಥರ ಒಬ್ಬ ಸ್ನೇಹಿತನೂ ಬೇಡ; ಗಿಲ್ಲಿ ಫ್ಯಾನ್ಸ್‌ ಬೇಸರ

ಈ ವಾರ ಅಶ್ವಿನಿ ಮತ್ತು ಗಿಲ್ಲಿ ಇಬ್ಬರೂ ಟಾಸ್ಕ್​​ಗಳ ಉಸ್ತುವಾರಿ ವಹಿಸಿದ್ದರು. ಸಾಕಷ್ಟು ಸಮಯದಲ್ಲಿ ಈ ಇಬ್ಬರ ನಡುವೆ ಜಗಳಗಳು ನಡೆಯಿತು. ವಾರಾಂತ್ಯದಲ್ಲೂ ಈ ಜಗಳ ಮುಂದುವರೆದಿದೆ. ಗಿಲ್ಲಿ, ಅಶ್ವಿನಿಯ ಯೋಗ್ಯತೆಯ ಕುರಿತಾಗಿ ಮಾತನಾಡಿದ್ದಾರೆ. ಇದು ಅಶ್ವಿನಿ ಅವರನ್ನು ಕೆರಳಿಸಿದೆ. ಇಬ್ಬರ ನಡುವೆ ಭರ್ಜರಿ ವಾಗ್ಯುದ್ಧವೇ ನಡೆದಿದೆ. ಈ ಬಗ್ಗೆಯೂ ಕಿಚ್ಚ ಚರ್ಚಿಸಲಿದ್ದಾರೆ.

Yashaswi Devadiga

View all posts by this author