ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ತಾಕತ್ ಇದ್ದಿದ್ದಕ್ಕೆ ಕ್ಯಾಪ್ಟನ್‌ ಆದೆ, ನಿಮಗೆ ಯೋಗ್ಯತೆ ಇಲ್ಲ! ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ಉಗ್ರಾವತಾರ

Gilli Nata: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಉತ್ತಮ ಹಾಗೂ ಕಳಪೆ ಸಮಯದಲ್ಲಿ ಭಾರಿ ಗಲಾಟೆ ನಡೆದಿದೆ. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವೆ ದೊಡ್ಡ ವಾಗ್ವಾದವೇ ನಡೆದು ಹೋಗಿದೆ. ಅಶ್ವಿನಿ ಅವರಿಗೆ ಗಿಲ್ಲಿ ಕಳಪೆ ನೀಡಿದರು ಮತ್ತು ಸಾಲು ಸಾಲು ಕಾರಣ ಕೊಟ್ಟರು. ಗಿಲ್ಲಿ ಸಿಕ್ಕಾಪಟ್ಟೆ ಸಿಟ್ಟಿನಿಂದ ಮಾತನಾಡಿದರು. ನನಗೆ ತಾಕತ್‌ ಇದ್ದಿದ್ದಕ್ಕೆ ನಾನು ಕ್ಯಾಪ್ಟನ್‌ ಆಗಿದ್ದು. ನಿಮಗೆ ಅದು ಯೋಗ್ಯತೆನೂ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ ಗಿಲ್ಲಿ.

ತಾಕತ್ ಇದ್ದಿದ್ದಕ್ಕೆ ಕ್ಯಾಪ್ಟನ್‌ ಆದೆ! ಗಿಲ್ಲಿ ಉಗ್ರಾವತಾರ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 3, 2026 8:43 AM

ಈ ವಾರ ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಉತ್ತಮ ಹಾಗೂ ಕಳಪೆ (Kalape) ಸಮಯದಲ್ಲಿ ಭಾರಿ ಗಲಾಟೆ ನಡೆದಿದೆ. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವೆ ದೊಡ್ಡ ವಾಗ್ವಾದವೇ ನಡೆದು ಹೋಗಿದೆ. ಅಶ್ವಿನಿ ಅವರಿಗೆ ಗಿಲ್ಲಿ ಕಳಪೆ ನೀಡಿದರು ಮತ್ತು ಸಾಲು ಸಾಲು ಕಾರಣ ಕೊಟ್ಟರು. ಗಿಲ್ಲಿ ಸಿಕ್ಕಾಪಟ್ಟೆ (Gilli Nata) ಸಿಟ್ಟಿನಿಂದ ಮಾತನಾಡಿದರು. ನನಗೆ ತಾಕತ್‌ ಇದ್ದಿದ್ದಕ್ಕೆ ನಾನು ಕ್ಯಾಪ್ಟನ್‌ (Captain) ಆಗಿದ್ದು. ನಿಮಗೆ ಅದು ಯೋಗ್ಯತೆನೂ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ ಗಿಲ್ಲಿ.

ಎಲ್ಲರ ಮುಂದೆ ಹೀರೋ ಆಗಬೇಕು!

ಅಶ್ವಿನಿ ಅವರಿಗೆ ಕಳಪೆ ಕೊಡ್ತೀನಿ. ಫೇವರಿಸಮ್‌ ಅಂತಾರೆ, ನಿಜವಾಗಲೂ ಮಾಡ್ತಾ ಇರೋದು ಅವರು. ಜಾನು, ಸುಧಿ , ಈಗ ಧ್ರುವಂತ್‌. ರಕ್ಷಿತಾ ಅವರು ಯಾರು ಕ್ಯಾಪ್ಟನ್‌ ಆಗಬೇಕು ಅಂದಾಗ ನಿಮ್ಮ ಹೆಸರು ತೆಗೆದುಕೊಂಡರು. ಅದಕ್ಕಾಗಿ ನೀವು ಈಗ ಅವಳಿಗೆ ಉತ್ತಮ ಕೊಟ್ಟಿರಿ. ಇಲ್ಲ ಅಂದ್ರೆ ಧ್ರುವಂತ್‌ಗೆ ನೀವು ಕೊಡ್ತಾ ಇದ್ರಿ. ಬಾತ್‌ರೂಮ್‌ ವಿಚಾರಕ್ಕೆ ಬಂದರೆ, ಅವರು ಏನೇ ಆಗಿರಲಿ ಅವರು ಎಲ್ಲರ ಮುಂದೆ ಹೀರೋ ಆಗಬೇಕು ಎಂದರು.

ಇದನ್ನೂ ಓದಿ: Bigg Boss Kannada 12: ‌ ಇಂದು ವಾರದ ಕತೆ ಕಿಚ್ಚನ ಜೊತೆ: ಈ ಸ್ಪರ್ಧಿಗಳಿಗೆ ಕ್ಲಾಸ್ ಫಿಕ್ಸ್‌?

ಆದೇ ಸಮಯಕ್ಕೆ ಅಶ್ವಿನಿ, ಜೋಕರ್‌ ಆಗಬೇಡ ಎಂದಿದ್ದಾರೆ. ಇದು ಗಿಲ್ಲಿಗೆ ಪಿತ್ತ ನೆತ್ತಿಗೇರಿದೆ. ನನಗೂ ನಿಮಗೂ ವ್ಯತ್ಯಾಸ ಇದೆ. ನೀವು ಜೋಕರ್‌ ಆಗಿ ಹೋಗಿದ್ದೀರಿ. ಮೂರನೇ ಸಾಲ ಕೂಡ ಪಾತ್ರ ತೊಳೆದು ಇಡಿ ಎಂದೆ. ಆದ್ರೆ ನಿಮ್ಮ ಟೋನ್‌ ಸರಿ ಇರಲಿಲ್ಲ. ಕೂಲ್‌ ಆಗಿ ಮಾತಾಡು ಅಂತ ಒಳ್ಳೆಯ ಟೋನ್‌ ಅಲ್ಲಿ ಮಾತಾಡೇ ಇಲ್ಲ. ವೈಲೆಂಟ್‌ ಆಗೂ ಇರಲ್ಲ, ಸೈಲೆಂಟ್‌ ಆಗೂ ಇರಲ್ಲ, ಬೇರೆ ಏನೋ ಪ್ಲೇ ಮಾಡ್ತಾ ಇರ್ತಾರೆ. ಎಂತವರಿಗೂ ಅದು ಕೋಪ ಬರಿಸುತ್ತೆ. ಅಸಮರ್ಥರು ಅಂತ ನಾನು ಸೆಲೆಕ್ಟ್‌ ಮಾಡಿದಾಗ ಸಖತ್‌ ಚಾನ್ಸ್‌ ಸಿಕ್ಕಿತು ಅಂತ ಖುಷಿ ಪಟ್ಟಿರಿ. ಆದರೆ ಬಗ್ಗೆ ಏನೂ ಪ್ರಶ್ನೆ ಇಟ್ಟಿಲ್ಲ ಎಂದರು.

ವೈರಲ್‌ ವಿಡಿಯೊ



ಕ್ಯಾಪ್ಟನ್‌ ಆಗಲೂ ಯೋಗ್ಯತೆನೂ ಇಲ್ಲ

ನಾನು ಧನು ನಿಮ್ಮನ್ನ ಫೈನಲ್‌ ತನಕ್‌ ಬಿಟ್ಟೆವು. ಒಂದು ಮೈಕ್‌ ಕೂಡ ಸರಿ ಹಾಕಲ್ಲ. ನಾನು ಗುಲಾಮ ಆಗಿದ್ದರು ಸ್ವಲ್ಪ ಆದರೂ ಕೆಲಸ ಮಾಡ್ತೀನಿ. ತಾಕತ್‌ ಇದ್ದಿದ್ದಕ್ಕೆ ನಾನು ಕ್ಯಾಪ್ಟನ್‌ ಆಗಿದ್ದು. ನಿಮಗೆ ಅದು ಯೋಗ್ಯತೆನೂ ಇಲ್ಲ ಎಂದು ಅಬ್ಬರಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಕಳಪೆ ಹಾಗೂ ಉತ್ತಮ ನೀಡಲಾಯಿತು. ಈ ವೇಳೆ ಅಶ್ವಿನಿ ಅವರಿಗೆ ಗಿಲ್ಲಿ ಕಳಪೆ ನೀಡಿದರು ಮತ್ತು ಸಾಲು ಸಾಲು ಕಾರಣ ಕೊಟ್ಟರು. ಗಿಲ್ಲಿ ಇಷ್ಟು ಸಿಟ್ಟಿನಿಂದ ಮಾತನಾಡಿದ್ದನ್ನು ಯಾರು ನೋಡಿಯೇ ಇರಲಿಲ್ಲ .

ಇದನ್ನೂ ಓದಿ: Bigg Boss Kannada 12: ನನಗೆ ಕ್ಯಾಪ್ಟನ್ಸಿ ಕೊಡ್ತೀನಿ ಎಂದು ಹೇಳಬಹುದಿತ್ತು! ಮನಸಾಕ್ಷಿ ಬಗ್ಗೆ ಅಶ್ವಿನಿ ಮಾತು; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ

ಈ ಸೀಸನ್‌ನ ಕೊನೆಯ ಕ್ಯಾಪ್ಟನ್‌ ಪಟ್ಟವೂ ಧನುಷ್‌ಗೆ ಸಿಕ್ಕಿದ್ದರಿಂದ ಅಶ್ವಿನಿಗೆ ಕ್ಯಾಪ್ಟನ್‌ ಆಗುವ ಯಾವ ಚಾನ್ಸ್‌ ಕೂಡ ಇಲ್ಲ! ಆ ಮೂಲಕ ಗಿಲ್ಲಿ ಹಾಕಿದ್ದ ಚಾಲೆಂಜ್‌ನಲ್ಲಿ ಅಶ್ವಿನಿ ಸೋತಿದ್ದಾರೆ. ಧ್ರುವಂತ್‌ ಕಳಪೆ ಆದ್ರೆ ರಕ್ಷಿತಾ, ಧನುಷ್‌ ಉತ್ತಮ ಪಡೆದುಕೊಂಡಿದ್ದಾರೆ.