ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanjana Galrani: `ʼನಾನು ಸಾಯುತ್ತೇನೆ, ನನ್ನಿಂದ ಇಲ್ಲಿರಲು ಸಾಧ್ಯವಿಲ್ಲʼ' ಎಂದು ಕಣ್ಣೀರಿಟ್ಟ ಸಂಜನಾ ಗಲ್ರಾನಿ

Bigg Boss Telugu: ಸಂಜನಾ ಗಲ್ರಾನಿ ಅವರು ಬಿಗ್‌ ಬಾಸ್‌ ಆರಂಭವಾದಾಗಿನಿಂದಲೂ ಒಳ್ಳೆಯ ರೀತಿ ಆಟ ಆಡಿಕೊಂಡು ಬರ್ತಿದ್ದಾರೆ. ಈ ಇಬ್ಬರು ಫಿನಾಲೆವರೆಗೆ ಹೋಗೋದು ಖಂಡಿತ ಎನ್ನಲಾಗುತ್ತಿದೆ. ಆದರೆ ನಿನ್ನೆ ಸಂಜನಾ ಅವರು `ನನ್ನನ್ನು ಮನೆಗೆ ಕಳಿಸಿಬಿಡಿ, ನನ್ನ ಕೈಯಿಂದ ಆಗುತ್ತಿಲ್ಲ. ನಾನು ಸತ್ತೇ ಹೋಗ್ತೇನೆ' ಎಂದು ಕಣ್ಣೀರಿಟ್ಟಿದ್ದಾರೆ. ಆಗಿದ್ದೇನು?

ʻನಾನು ಸಾಯುತ್ತೇನೆ, ಮನೆಗೆ ಕಳುಹಿಸಿಕೊಡಿʼ ಎಂದು  ಸಂಜನಾ ಗಲ್ರಾನಿ ಕಣ್ಣೀರು

ಸಂಜನಾ ಗಲ್ರಾನಿ -

Yashaswi Devadiga
Yashaswi Devadiga Nov 16, 2025 6:31 PM

ಬಿಗ್‌ ಬಾಸ್‌ ತೆಲುಗುವಿನಲ್ಲಿ (Bigg Boss Telugu) ಇಬ್ಬರು ಕನ್ನಡತಿಯರು ಸ್ಪರ್ಧಿಗಳಾಗಿ ಆಟವಾಡುತ್ತಿದ್ದಾರೆ. ಸಂಜನಾ ಗಲ್ರಾನಿ (Sanjana Galrani) ಮತ್ತು ತನುಜಾ ಗೌಡ (Tanuja Gowda). ಸಂಜನಾ ಅವರು ಬಿಗ್‌ ಬಾಸ್‌ ಆರಂಭವಾದಾಗಿನಿಂದಲೂ ಒಳ್ಳೆಯ ರೀತಿ ಆಟ ಆಡಿಕೊಂಡು ಬರ್ತಿದ್ದಾರೆ. ಈ ಇಬ್ಬರು ಫಿನಾಲೆವರೆಗೆ (Finale) ಹೋಗೋದು ಖಂಡಿತ ಎನ್ನಲಾಗುತ್ತಿದೆ. ಆದರೆ ನಿನ್ನೆ ಸಂಜನಾ ಅವರು `ನನ್ನನ್ನು ಮನೆಗೆ ಕಳಿಸಿಬಿಡಿ, ನನ್ನ ಕೈಯಿಂದ ಆಗುತ್ತಿಲ್ಲ. ನಾನು ಸತ್ತೇ ಹೋಗ್ತೇನೆ' ಎಂದು ಕಣ್ಣೀರಿಟ್ಟಿದ್ದಾರೆ (Cried). ಆಗಿದ್ದೇನು?

ಆಟಕ್ಕೆ ಅಡ್ಡಿಯಾಗ್ತಿದ್ದಾರಾ ಸಂಜನಾ?

ತೆಲುಗು ಬಿಗ್‌ ಬಾಸ್‌ನಲ್ಲಿ ಫ್ಯಾಮಿಲಿ ವೀಕ್‌ ಆಗ್ತಿದೆ. ಕೆಲವು ದಿನಗಳ ನಂತರ ಮನೆಯ ಸದಸ್ಯರು ತಮ್ಮ ಕುಟುಂಬವನ್ನು ನೋಡಿ ಭಾವುಕರಾಗುತ್ತಿದ್ದಾರೆ . ಶನಿವಾರದ ಸಂಚಿಕೆಯಲ್ಲಿ, ಒಂದು ಡಬಲ್ ಎಲಿಮಿನೇಷನ್ ಜೊತೆಗೆ ಪ್ರತಿಯೊಬ್ಬರೂ ಎರಡು ಹೆಸರುಗಳನ್ನು ಹೇಳಿ ,ಯಾರು ಹೆಚ್ಚು ಬೆಂಬಲ ನೀಡುತ್ತಾರೆ ಮತ್ತು ಯಾರು ಆಟಕ್ಕೆ ಅಡ್ಡಿಯಾಗಿದ್ದಾರೆ ಎಂಬುದು ಸೂಚಿಸಲು ಬಿಗ್‌ ಬಾಸ್‌ ಹೇಳಿದ್ದರು.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆ ಛತ್ರ ಅಲ್ಲ; ರಾಶಿಕಾ -ರಿಷಾಗೆ ಕಿಚ್ಚ ಸುದೀಪ್‌ ಎಚ್ಚರಿಕೆ

ಬಹುತೇಕ ಸ್ಪರ್ಧಿಗಳು ಸಂಜನಾ ತಮ್ಮ ಆಟಕ್ಕೆ ಅಡ್ಡಿ ಆಗುತ್ತಿದ್ದಾರೆ ಎಂದರು. ಇದರಿಂದಾಗಿ ಅವರಿಗೆ ‘ನೋ ಫ್ಯಾಮಿಲಿ ವೀಕ್’ ಎಂಬ ಶಿಕ್ಷೆ ವಿಧಿಸಲಾಯ್ತು. ಅದನ್ನು ಸ್ಪರ್ಧಿಗಳೇ ಅವರಿಗೆ ನೀಡಿದರು.

ಭಾವುಕರಾದ ಸಂಜನಾ!

ಇದನ್ನು ನೋಡಿ ಸಂಜನಾ ಭಾವುಕರಾದರು. ಏಕೆಂದರೆ ಸಂಜನಾಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಸಂಜನಾ ಒಂದು ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಶೋಗೆ ಬಂದಿದ್ದಾರೆ. ಪ್ರತಿನಿತ್ಯವೂ ತಮ್ಮ ಕುಟುಂಬವನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಹೀಗಿರುವಾಗ ಅವರು ತುಂಬಾ ಭಾವುಕಾರದು.

ನಾಗಾರ್ಜುನ ಅವರನ್ನು ಕುರಿತು, ‘ಸರ್, ನಾನು ಮನೆಗೆ ಹೋಗುತ್ತೇನೆ ಸರ್.. ನನ್ನಿಂದ ಇಲ್ಲಿರಲು ಸಾಧ್ಯವಿಲ್ಲ.. ನಾನು ಸಾಯುತ್ತೇನೆ.. ಇಲ್ಲ ಸರ್, ನಾನು ಹೋಗುತ್ತೇನೆ.. ನನಗೆ ಈ ಆಟ ತುಂಬಾ ಇಷ್ಟ ಮತ್ತು ಪ್ರತಿ ವಾರ ನಿಮ್ಮನ್ನು ನೋಡುವುದು ನನಗೆ ತುಂಬಾ ಇಷ್ಟ, ಆದರೆ ನಾನು ಇನ್ನು ಮುಂದೆ ಇರಲು ಸಾಧ್ಯವಿಲ್ಲ ಸರ್.. ನಾನು ದಿನದಲ್ಲಿ ಹಲವು ಬಾರಿ ಅಳುತ್ತೇನೆ. ನಾನು ಈ ಶೋವನ್ನು ಗೌರವಿಸುತ್ತೇನೆ.. ನಾನು ಇಲ್ಲಿ ಯಾರಿಗೂ ಅಷ್ಟು ಕೆಟ್ಟದ್ದನ್ನು ಮಾಡಿಲ್ಲ ಸರ್.."ಎಂದು ಸಂಜನಾ ಕಣ್ಣೀರು ಹಾಕುತ್ತಾ ಹೇಳಿದರು.ಆದರೆ ನಾಗಾರ್ಜುನ ಅದು ಸಾಧ್ಯವಿಲ್ಲ ಎಂದರು.

ಬೆಂಬಲಕ್ಕೆ ನಿಂತ ಕಲ್ಯಾಣ್ ಮತ್ತು ಭರಣಿ

ಅಷ್ಟರಲ್ಲಿ ಕಲ್ಯಾಣ್ ಕೈ ನಾನು ನನ್ನ ಫ್ಯಾಮಿಲಿ ವೀಕ್‌ವನ್ನು ವಾರವನ್ನು ತ್ಯಾಗ ಮಾಡುತ್ತೇನೆ ಸರ್ ಎಂದರು. ಭರಣಿ ಕೂಡ ಎದ್ದು ನಿಂತು ಹೀಗೆ ಹೇಳಿದರು. ಕಲ್ಯಾಣ್ ಮತ್ತು ಭರಣಿ ಅವರು ತಮ್ಮ ಫ್ಯಾಮಿಲಿ ಬದಲಿಗೆ ಸಂಜನಾ ಫ್ಯಾಮಿಲಿಯನ್ನು ಕರೆಸಿ ಎಂದು ಕೇಳಿಕೊಂಡರು. ಆದರೆ ಅದಕ್ಕೂ ಸಹ ನಾಗಾರ್ಜುನ ಒಪ್ಪಲಿಲ್ಲ .

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಯ ಯಾರ ಜರ್ನಿ ಎಂಡ್‌? ಈ ಸ್ಪರ್ಧಿಯೇ ಔಟ್‌?

ಈ ಬಗ್ಗೆ ಬಿಗ್ ಬಾಸ್ ವೀಕ್ಷಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, ತಮ್ಮ ಟಿಆರ್ ಪಿ ಗೋಸ್ಕರ ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಕನ್ನಡ, ತೆಲುಗು, ತಮಿಳು ಹೀಗೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಸಂಜನಾ ಗಲ್ರಾನಿ ಮಿಂಚಿದ್ದಾರೆ. ಕನ್ನಡದಲ್ಲಿ ಸಂಜನಾ ಗಲ್ರಾನಿ ಗಂಡ ಹೆಂಡತಿ ಚಿತ್ರದ ಮೂಲಕವೇ ಬಹಳಷ್ಟು ಖ್ಯಾತಿ ಪಡೆದವರು.