ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chhaava Movie: ‘ಛಾವಾ’ ಸಿನಿಮಾವನ್ನು ಮನಸಾರೆ ಹೊಗಳಿದ ನರೇಂದ್ರ ಮೋದಿ

'ಛಾವಾ' ಈ ವರ್ಷದ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ಎನ್ನಿಸಿಕೊಂಡಿದೆ. ವಿಶೇಷ ಎಂದರೆ ವಿಕ್ಕಿ ಕೌಶಲ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಐತಿಹಾಸಿಕ ಹಿನ್ನೆಲೆಯುಳ್ಳ ʼಛಾವಾʼ ಚಿತ್ರವನ್ನು ಪ್ರಧಾನಿ ಮೋದಿ ಅವರು ಹಾಡಿ ಹೊಗಳಿದ್ದಾರೆ. ಮಹಾರಾಷ್ಟ್ರದ ಇತಿಹಾಸಕ್ಕೆ ಸಂಬಂಧಿಸಿದ ʼಛಾವಾʼ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.

ಬಾಲಿವುಡ್ ಸಿನಿಮಾ 'ಛಾವಾ'ಕ್ಕೆ ಮೋದಿ ಮೆಚ್ಚುಗೆ

Profile Sushmitha Jain Feb 22, 2025 11:28 AM

ಹೊಸದಿಲ್ಲಿ: ವಿಕ್ಕಿ ಕೌಶಲ್ (Vicky Kaushal) ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಇತ್ತೀಚಿನ ಬಾಲಿವುಡ್ ಸಿನಿಮಾ 'ಛಾವಾ' (Chhaava Movie) ಬಾಕ್ಸ್​ ಆಫೀಸ್​ನಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿದೆ. ಫೆ. 14ರಂದು ಬಿಡುಗಡೆಗೊಂಡ ಈ ಸಿನಿಮಾ ದೇಶೀಯ ಮಾರುಕಟ್ಟೆ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಇದೀಗ ಜನಮನ್ನಣೆಗಳಿಸಿರುವ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನಾಧರಿಸಿದ 'ಛಾವಾ' ಚಿತ್ರವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶ್ಲಾಘಿಸಿದ್ದು, ಇದೊಂದು ಐತಿಹಾಸಿಕ ಸಿನಿಮಾ. ಸತ್ಯ ಸಂಗತಿಗಳನ್ನು ತಿರುಚಲಾಗಿಲ್ಲ ಎಂದು ಹೇಳಿದ್ದಾರೆ.

'ಛಾವಾ' ಈ ವರ್ಷದ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ಎನ್ನಿಸಿಕೊಂಡಿದೆ. ಇದರ ಜತೆಗೆ ಪ್ರಧಾನಿ ಮೋದಿ ಅವರು ಹಾಡಿ ಹೊಗಳಿರುವುದು ಚಿತ್ರತಂಡ ಖುಷಿಯನ್ನು ಹೆಚ್ಚಿಸಿದೆ. ಮಹಾರಾಷ್ಟ್ರದ ಇತಿಹಾಸಕ್ಕೆ ಸಂಬಂಧಿಸಿದ ಚಾರಿತ್ರಿಕ ಸಿನಿಮಾ ʼಛಾವಾʼ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಮರಾಠ ಸಾಮ್ರಾಜ್ಯದ ಛತ್ರಪತಿ ಸಂಭಾಜಿ ಮಹಾರಾಜ್‌ ಅವರ ಶೌರ್ಯವನ್ನು ಬಹಳ ಸುಂದರವಾಗಿ ಕಟ್ಟಿಕೊಡಲಾಗಿದೆ. ʼಛಾವಾʼ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಸೇನಾ ತಂತ್ರಗಳಿಗೆ, ವಿಶೇಷವಾಗಿ ಗೆರಿಲ್ಲಾ ಯುದ್ಧ ಮತ್ತು ನ್ಯಾಯ, ಧರ್ಮ ಹಾಗೂ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರವನ್ನು ವಿಸೇಷವಾಗಿ ಕಟ್ಟಿಕೊಡಲಾಗಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೇ “ಮಹಾರಾಷ್ಟ್ರ ಮತ್ತು ಮುಂಬೈ ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ವಿಭಿನ್ನ ಆಯಾಮವನ್ನು ನೀಡಿದ್ದು, ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿಯಿಂದ ಸ್ಫೂರ್ತಿ ಪಡೆದ ಈ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಸಾಹಸಮಯ ಜೀವನಗಾಥೆಯನ್ನು ಪ್ರಸ್ತುತಪಡಿಸಲಾಗಿದೆʼʼ ಎಂದಿದ್ದಾರೆ.

ಈ ಸುದ್ದಿಯನ್ನು ಓದಿ: Chhaava OTT Release: ಒಟಿಟಿಗೆ ಬಂತಾ ಛಾವಾ? ಯಾವ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್‌?



ಲಕ್ಷ್ಮಣ್ ಉಟೇಕರ್ ಆ್ಯಕ್ಷನ್​​ ಕಟ್​ ಹೇಳಿರುವ ʼಛಾವಾʼ ಚಿತ್ರವನ್ನು ಮ್ಯಾಡಾಕ್ ಫಿಲ್ಮ್ಸ್ ಅಡಿಯಲ್ಲಿ ದಿನೇಶ್ ವಿಜನ್ ನಿರ್ಮಾಣ ಮಾಡಿದ್ದಾರೆ. ಮರಾಠಾ ರಾಜ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದ ಹಿಸ್ಟಾರಿಕಲ್​​ ಆ್ಯಕ್ಷನ್ ಡ್ರಾಮಾ ಇದಾಗಿದೆ. ವಿಕ್ಕಿ ಕೌಶಲ್ ಸಂಭಾಜಿ ಮಹಾರಾಜರ ಪಾತ್ರ ನಿರ್ವಹಿಸಿದ್ದರೆ, ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಜೀವಿಸಿದ್ದಾರೆ. ಅಕ್ಷಯ್ ಖನ್ನಾ ಮೊಘಲ್ ಆಡಳಿತಗಾರ ಔರಂಗಜೇಬ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅಶುತೋಷ್ ರಾಣಾ ಸರ್ಸೇನಾಪತಿ ಹಂಬಿರಾವ್ ಮೋಹಿತೆ ಪಾತ್ರವನ್ನು ನಿಭಾಯಿಸಿದ್ದು, ಸೋಯಾರಾಬಾಯಿ ಪಾತ್ರವನ್ನು ದಿವ್ಯಾ ದತ್ತಾ ನಿರ್ವಹಿಸಿದ್ದಾರೆ. ಈ ಚಿತ್ರವು ಮಹರ್ಷಿ ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿ 'ಛಾವಾ'ವನ್ನು ಆಧರಿಸಿದ್ದು, ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್​​ ವರದಿ ಮಾಡಿದಂತೆ ಆರಂಭಿಕ ಅಂದಾಜಿನ ಪ್ರಕಾರ, ʼಛಾವಾʼ ರಿಲೀಸ್‌ ಆದ 9ನೇ ದಿನದಂದು 310.5 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನ 31 ಕೋಟಿ ರೂ.ನೊಂದಿಗೆ ತನ್ನ ಬಾಕ್ಸ್​ ಆಫೀಸ್​​ ಪ್ರಯಾಣವನ್ನು ಪ್ರಾರಂಭಿಸಿದ ಈ ಚಿತ್ರವು ವಾರಾಂತ್ಯದಲ್ಲಿಯೂ ಉತ್ತಮ ಕಲೆಕ್ಷನ್​​ ಮಾಡಿತ್ತು. ಶನಿವಾರ 37 ಕೋಟಿ ರೂ., ಭಾನುವಾರ 48.5 ಕೋಟಿ ರೂ. ಸಂಪಾದಿಸಿದ ಚಿತ್ರ ಮೊದಲ ಸೋಮವಾರ 24 ಕೋಟಿ ರೂ.ಗಳನ್ನು ಗಳಿಸಿತ್ತು. ವಾರಾಂತ್ಯದ ಉತ್ತಮ ಕಲೆಕ್ಷನ್​​ ನಂತರ ಕೊಂಚ ಕುಸಿತದ ಹೊರತಾಗಿಯೂ, ಚಿತ್ರ ಮಂಗಳವಾರ ತನ್ನ ಗಳಿಕೆಯಲ್ಲಿ ಏರಿಕೆ ಕಂಡಿತ್ತು.