R Madhavan -Kangana : ದಶಕದ ನಂತರ ಮತ್ತೆ ಒಂದಾದ ತನು-ಮನು; ಹೊಸ ಕಥೆಯೊಂದಿಗೆ ತೆರೆ ಮೇಲೆ ಬರಲಿದ್ದಾರೆ ಕಂಗನಾ- ಮಾಧವನ್
2011ರಲ್ಲಿ ‘ತನು ವೆಡ್ಸ್ ಮನು’ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಆರ್. ಮಾಧವನ್ ಮತ್ತು ಕಂಗನಾ ರಣಾವತ್ ನಟನೆಯ ಎಲ್ಲಾರೂ ಫಿದಾ ಆಗಿದ್ದರು. ಅದು ಸೂಪರ್ ಹಿಟ್ ಆಗಿದ್ದರಿಂದ ಸೀಕ್ವೆಲ್ ಕೂಡ ಮೂಡಿಬಂತು. 2015ರಲ್ಲಿ ‘ತನು ವೆಡ್ಸ್ ಮನು ರಿಟರ್ನ್ಸ್’ ಸಿನಿಮಾ ರಿಲಿಸ್ ಆಯಿತು. ಈಗ 10 ವರ್ಷಗಳ ಬಳಿಕ ಹೊಸ ಸಿನಿಮಾಗಾಗಿ ಆರ್. ಮಾಧವನ್ ಮತ್ತು ಕಂಗನಾ ರಣಾವತ್ ಒಂದಾಗುತ್ತಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ಕಂಗನಾ ರಣಾವತ್-ಆರ್. ಮಾಧವನ್

ಮುಂಬೈ: ‘ತನು ವೆಡ್ಸ್ ಮನು’ (Tanu Weds Manu) ಮತ್ತು ಅದರ ಸೀಕ್ವೆಲ್‌ನಲ್ಲಿ ತಮ್ಮ ಜಬರ್ದಸ್ತ್ ಕೆಮಿಸ್ಟ್ರಿ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದ ಕಂಗನಾ ರಣಾವತ್ (Kangana Ranaut ) ಮತ್ತು ಆರ್. ಮಾಧವನ್ (R Madhavan), ಸುಮಾರು 9 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇವರ ಅಪ್ ಕಮಿಂಗ್ ಸಿನಿಮಾ ‘ಸರ್ಕಲ್’( Circle) ಸಸ್ಪೆಂಸ್-ಥ್ರಿಲ್ಲರ್ ಆಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಹೌದು ‘ತನು ವೆಡ್ಸ್ ಮನು’ ಸಿನಿಮಾ 2011ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಅದೇ ಸಿನಿಮಾಗೆ ಸೀಕ್ವೆಲ್ ಸಿದ್ಧವಾಯಿತು. ‘ತನು ವೆಡ್ಸ್ ಮನು ರಿಟರ್ನ್ಸ್’ ಸಿನಿಮಾ 2015ರಲ್ಲಿ ಬಿಡುಗಡೆ ಆಯಿತು. ಈಗ 10 ವರ್ಷಗಳ ಬಳಿಕ ಹೊಸ ಸಿನಿಮಾಗಾಗಿ ಆರ್. ಮಾಧವನ್ ಮತ್ತು ಕಂಗನಾ ರಣಾವತ್ ಅವರು ಒಂದಾಗುತ್ತಿದ್ದಾರೆ. ಈ ಬಾರಿ ಅವರು ನಟಿಸುವ ಸಿನಿಮಾ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಮೂಡಿದೆ.
ವರದಿ ಪ್ರಕಾರ, ‘ಸರ್ಕಲ್’ ಪ್ಯಾನ್-ಇಂಡಿಯಾ ಚಿತ್ರವಾಗಿದ್ದು, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಅಲ್ಲದೆ, ಸುಮಾರು ಒಂದು ವರ್ಷದಿಂದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯ ಕೊನೆಯ ಹಂತದಲ್ಲಿದೆ. ಇದರ ಸಸ್ಪೆಂಸ್ ದೃಶ್ಯಗಳನ್ನು ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನ ಕ್ಲಬ್ ಇಲ್ಯೂಷನ್‌ನಲ್ಲಿ ಚಿತ್ರೀಕರಿಸಲಾಗಿದೆ.
ಈ ಸುದ್ದಿಯನ್ನು ಓದಿ: Viral News: ಮಾಲಕಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ಬೆಕ್ಕುಗಳು; ಸಿಸಿಟಿವಿ ವಿಡಿಯೋ ವೈರಲ್
ಅಷ್ಟೇ ಅಲ್ಲದೇ, ಈ ಥ್ರಿಲ್ಲರ್ ಚಿತ್ರವನ್ನು ಊಟಿ, ಜೈಪುರ, ಚೆನ್ನೈ ಮತ್ತು ಹೈದರಾಬಾದ್‌ನಂತಹ ಭಾರತದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಟ್ರೈಡೆಂಟ್ ಆರ್ಟ್ಸ್‌ನ ರವೀಂದ್ರನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಇದೀಗ ಫೈನಲ್ ಮಾಡಿದ್ದು, ಕಂಗನಾ ರಣಾವತ್ ಜನಪ್ರಿಯತೆಯನ್ನು ದಕ್ಷಿಣ ರಾಜ್ಯಗಳಲ್ಲಿ ಶ್ಲಾಘಿಸಿದ್ದಾರೆ. ಇನ್ನೂ ಈ ಚಿತ್ರವು ಸಿನಿ ಪ್ರಿಯರಿಗೆ ಹೊಸ ಅನುಭವ ನೀಡಲಿದೆ ಎಂದಿದ್ದಾರೆ.
‘ಸರ್ಕಲ್’ ಚಿತ್ರ ಪಾತ್ರಗಳು ಮತ್ತು ಕಥಾವಸ್ತುವಿನ ಬಗ್ಗೆ ಕುತೂಹಲ ಹೆಚ್ಚಿಸಿದೆ. ಹಾಗೂ ಹಿಂದೆ ರೊಮ್ಯಾಂಟಿಕ್ ಜೋಡಿಯಾಗಿ ಮಿಂಚಿದ್ದ ಕಂಗನಾ, ಮಾಧವನ್ ಈ ಚಿತ್ರದಲ್ಲಿ ಭಿನ್ನವಾ ಪಾತ್ರಗಳ ಮೂಲಕ ರೋಮಾಂಚಕ ಅನುಭವ ನೀಡಲಿದ್ದಾರೆ. ಇನ್ನೂ ಚಿತ್ರದ ನಿರ್ಮಾಪಕರು ಈ ವರ್ಷದ ದಸರಾ ಸಂದರ್ಭದಲ್ಲಿ ‘ಸರ್ಕಲ್’ ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ.