Viral News: ಮಾಲಕಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ಬೆಕ್ಕುಗಳು; ಸಿಸಿಟಿವಿ ವಿಡಿಯೋ ವೈರಲ್
ಪ್ರಾಣಿಗಳು ವಿಪತ್ತನ್ನು ಮೊದಲೇ ಗ್ರಹಿಸುತ್ತವೆ ಎಂಬುದು ಬಹುಶಃ ಎಲ್ಲರಿಗೂ ತಿಳಿದಿರಬಹುದು. ಏನಾದರೂ ಅನಾಹುತ (Viral News) ಸಂಭವಿಸುತ್ತದೆ ಎಂಬುದನ್ನು ಮೊದಲೇ ತಿಳಿಯುವ ಪ್ರಾಣಿಗಳು ಆ ಸ್ಥಳದಿಂದ ಬೇಗ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತವೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ.


ಬೀಜಿಂಗ್: ಪ್ರಾಣಿಗಳು ವಿಪತ್ತನ್ನು ಮೊದಲೇ ಗ್ರಹಿಸುತ್ತವೆ ಎಂಬುದು ಬಹುಶಃ ಎಲ್ಲರಿಗೂ ತಿಳಿದಿರಬಹುದು. ಏನಾದರೂ ಅನಾಹುತ (Viral News) ಸಂಭವಿಸುತ್ತದೆ ಎಂಬುದನ್ನು ಮೊದಲೇ ತಿಳಿಯುವ ಪ್ರಾಣಿಗಳು ಆ ಸ್ಥಳದಿಂದ ಬೇಗ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತವೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಬೆಕ್ಕುಗಳು ಅಪಾಯದಿಂದ ಪಾರಾಗಿರುವುದಲ್ಲದೆ ತಮ್ಮ ಮಾಲಕಿಯ ಪ್ರಾಣವನ್ನೂ ರಕ್ಷಿಸಿವೆ.
ಹೌದು, ಚೀನಾದಲ್ಲಿ ಮಹಿಳೆಯೊಬ್ಬರು ಸೋಫಾ ಮೇಲೆ ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದರು. ಈ ವೇಳೆ ಅವರು ಸಾಕುತ್ತಿರುವ ಬೆಕ್ಕುಗಳು ಅಲ್ಲೇ ಕುಳಿತಿದ್ದವು. ಈ ವೇಳೆ ಏಕಾಏಕಿ ಗೋಡೆಯಿಂದ ಟೈಲ್ಸ್ ಕಿತ್ತು ಹೊರಬಂದಿದೆ. ಇದನ್ನು ಗಮನಿಸಿದ ಬೆಕ್ಕುಗಳು ಕೂಡಲೇ ಅಲ್ಲಿಂದ ಓಡಿಹೋಗಿವೆ. ಬೆಕ್ಕುಗಳು ಯಾಕೆ ಹೀಗೆ ವಿಚಿತ್ರವಾಗಿ ಓಡುತ್ತಿವೆ ಎಂದು ಮಹಿಳೆ ನೋಡಿದಾಗ ಒಮ್ಮೆಲೆ ಟೈಲ್ಸ್ ಬಿದ್ದಿದೆ, ಈ ವೇಳೆ ಮಹಿಳೆ ಕೂಡ ಓಡಿದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಘಟನೆಯ ಸಂಪೂರ್ಣ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಅಪಾಯ ಸಂಭವಿಸುವ ಕೆಲವೇ ಸೆಕೆಂಡುಗಳ ಮೊದಲು ಬೆಕ್ಕುಗಳು ಗ್ರಹಿಸಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಶ್ವಾನಗಳು ತನ್ನ ಪ್ರಾಣ ಕೊಟ್ಟಾದರೂ ಮಾಲೀಕರನ್ನು ಕಾಪಾಡುತ್ತವೆ. ಆದರೆ, ಬೆಕ್ಕುಗಳ ಬಗ್ಗೆ ಇಂತಹ ಮಾತಿಲ್ಲ. ಆದರೆ, ಈ ವಿಡಿಯೋ ನೋಡಿದ ಬಳಿಕ ಬೆಕ್ಕುಗಳು ಕೂಡ ಜೀವ ಉಳಿಸಲ್ಲವು ಎಂದು ಹೇಳಬಹುದು. ಸಿಸಿಟಿವಿ ದೃಶ್ಯಾವಳಿಯಲ್ಲಿ ಉಲ್ಲೇಖಿಸಿದಂತೆ ಈ ಘಟನೆ ಜುಲೈ 12 ರಂದು ಸಂಭವಿಸಿದೆ.
ವೈರಲ್ ವಿಡಿಯೋದಲ್ಲಿ ಚೀನಾದ ಮಹಿಳೆ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತಿರುವುದನ್ನು ಕಾಣಬಹುದು. ಆಕೆ ಫೋನ್ ನೋಡುತ್ತಾ ಕುಳಿತಿರುವುದು ವಿಡಿಯೋದಲ್ಲಿ ನೋಡಬಹುದು. ಕೋಣೆಯ ವಿವಿಧ ಮೂಲೆಗಳಲ್ಲಿ ಮೂರು ಬೆಕ್ಕುಗಳು ಕುಳಿತಿರುವುದನ್ನು ಸಹ ಕಾಣಬಹುದು. ಈ ವೇಳೆ ಬೆಕ್ಕೊಂದು ಟಿವಿ ಘಟಕದ ಬಳಿ ಅಸಾಮಾನ್ಯವಾದದ್ದನ್ನು ಅನುಭವಿಸುತ್ತದೆ, ಅದು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮೇಜಿನ ಮೇಲೆ ಹತ್ತುತ್ತದೆ. ಇತರ ಎರಡು ಬೆಕ್ಕುಗಳು ಸಹ ಅಸಾಮಾನ್ಯವಾದದ್ದನ್ನು ಗ್ರಹಿಸುತ್ತವೆ. ಕೂಡಲೇ ಅಪಾಯ ಎದುರಾಗುತ್ತಿದೆ ಎಂಬುದನ್ನರಿತ ಬೆಕ್ಕುಗಳು ಓಡಿವೆ.
ಬೆಕ್ಕುಗಳು ವಿಲಕ್ಷಣ ಧ್ವನಿ ಮಾಡಿಕೊಂಡು, ಹೆದರಿ ಓಡಿ ಹೋಗುವುದನ್ನು ನೋಡಿ ಬೆಚ್ಚಿದ ಮಹಿಳೆ ತಾನು ಆ ಸ್ಥಳದಿಂದ ಓಡಲು ಮುಂದಾಗಿದ್ದಾಳೆ. ಈ ವೇಳೆ ಟಿವಿಯ ಹಿಂದಿನಿಂದ ಬೃಹತ್ ಟೈಲ್ಸ್ ಕೆಳಕ್ಕೆ ಬಿದ್ದಿದೆ. ಟೈಲ್ಸ್ ಬಿದ್ದ ಕೆಲವೇ ಸೆಕೆಂಡುಗಳಲ್ಲಿ ಮಹಿಳೆ ಮತ್ತು ಬೆಕ್ಕುಗಳು ಸ್ಥಳದಿಂದ ಓಡಿಹೋಗಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿಯಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬೆಕ್ಕುಗಳಿಗೆ ಸೂಕ್ಷ್ಮ ಶ್ರವಣ ಇಂದ್ರಿಯಗಳಿವೆ, ಗೋಡೆಯ ಮೇಲಿನ ಸಣ್ಣ ಬಿರುಕುಗಳು ಬೆಕ್ಕುಗಳ ಗಮನ ಸೆಳೆದವು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು, ಬೆಕ್ಕುಗಳು ಕಳಪೆ ಚೀನೀ ಮೂಲಸೌಕರ್ಯವನ್ನು ಗ್ರಹಿಸಬಲ್ಲವು ಎಂದು ವ್ಯಂಗ್ಯವಾಡಿದ್ದಾರೆ. ಬೆಕ್ಕುಗಳು ಪ್ರಬಲವಾದ ಶ್ರವಣ ಸಾಮರ್ಥ್ಯವನ್ನು ಹೊಂದಿವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: International Yoga Day: ಸಿಕ್ಕಾಪಟ್ಟೆ ವೈರಲ್ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!
ಬೆಕ್ಕು ದತ್ತು ಪಡೆದ ವೈರಲ್ ಸುದ್ದಿ
ಚೀನಾದಲ್ಲಿ ವೃದ್ಧ ವ್ಯಕ್ತಿಯೊಬ್ಬರು ತನ್ನ ಪ್ರೀತಿಯ ಬೆಕ್ಕಿಗೆ ಬೇಷರತ್ತಾದ ಆರೈಕೆಯನ್ನು ಒದಗಿಸಬೇಕೆಂಬ ಷರತ್ತಿನ ಮೇಲೆ ತನ್ನ ಸಂಪೂರ್ಣ ಪಿತ್ರಾರ್ಜಿತ ಆಸ್ತಿಯನ್ನು ಅಪರಿಚಿತರಿಗೆ ನೀಡಿದ್ದಾನೆ. 82 ವರ್ಷದ ವ್ಯಕ್ತಿ ಲಾಂಗ್, ತನ್ನ ಮರಣದ ನಂತರ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಯಾರಿಗಾದರೂ ಬಿಟ್ಟುಕೊಡಲು ಸಿದ್ಧನಿದ್ದಾನೆ. ಆದರೆ, ಒಂದೇ ಒಂದು ಷರತ್ತು ವಿಧಿಸಿದ್ದಾನೆ. ಅದೇನೆಂದರೆ, ತನ್ನ ಸಾಕುಪ್ರಾಣಿ ಪ್ರೀತಿಯ ಬೆಕ್ಕನ್ನು ಪೋಷಿಸಬೇಕು ಎಂಬುದು ಆತನ ಷರತ್ತು.