ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

AA23 movie: 3ನೇ ಬಾರಿಗೆ ಅಲ್ಲು ಅರ್ಜುನ್‌ಗೆ ಜೋಡಿಯಾಗ್ತಾರಾ ನಟಿ ಪೂಜಾ ಹೆಗ್ಡೆ? ಹರಿದಾಡುತ್ತಿದೆ ಬಿಸಿ ಬಿಸಿ ಸುದ್ದಿ!

‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'AA23' ಸಿನಿಮಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿಂದೆ 'ಡಿಜೆ' ಹಾಗೂ 'ಅಲಾ ವೈಕುಂಠಪುರಮುಲೊ' ಚಿತ್ರಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಈ ಜೋಡಿ ಮೂರನೇ ಬಾರಿಗೆ ಒಂದಾಗುವ ನಿರೀಕ್ಷೆಯಿದೆ.

AA23: ಅಲ್ಲು ಅರ್ಜುನ್‌ಗೆ 3ನೇ ಬಾರಿಗೆ ನಾಯಕಿ ಆಗ್ತಾರಾ ಪೂಜಾ ಹೆಗ್ಡೆ?

-

Avinash GR
Avinash GR Jul 22, 2026 1:13 PM

‘ಪುಷ್ಪ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಸರಣಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರದ ಬಗ್ಗೆ ಚಿತ್ರರಂಗದಲ್ಲಿ ಹೊಸದೊಂದು ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಜೊತೆಗಿನ 'AA23' ಚಿತ್ರಕ್ಕೆ ನಾಯಕಿಯಾಗಿ ಗ್ಲಾಮರಸ್ ನಟಿ ಪೂಜಾ ಹೆಗ್ಡೆ ಆಯ್ಕೆಯಾಗಲಿದ್ದಾರೆ ಎಂಬ ಗಾಳಿಮಾತುಗಳು ಟಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ.

ಹ್ಯಾಟ್ರಿಕ್ ಜೋಡಿಯಾಗುವ ನಿರೀಕ್ಷೆ!

ಒಂದು ವೇಳೆ ಈ ಸುದ್ದಿ ಅಧಿಕೃತವಾದರೆ, ಬೆಳ್ಳಿಪರದೆಯ ಮೇಲೆ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಕಾಂಬಿನೇಷನ್‌ನ ಹ್ಯಾಟ್ರಿಕ್ ಸಿನಿಮಾ ಇದಾಗಲಿದೆ. ಈ ಹಿಂದೆ ಹರೀಶ್ ಶಂಕರ್ ನಿರ್ದೇಶನದ 'ದುವ್ವಾಡ ಜಗನ್ನಾಥಂ' (DJ) ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಅಲಾ ವೈಕುಂಠಪುರಮುಲೊ' ಚಿತ್ರಗಳಲ್ಲಿ ಇವರಿಬ್ಬರು ಒಂದಾಗಿ ನಟಿಸಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದರು. ಇಬ್ಬರ ನಡುವಿನ ಸ್ಕ್ರೀನ್ ಕೆಮಿಸ್ಟ್ರಿ ಮತ್ತು ಡ್ಯಾನ್ಸ್ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ವಿಶೇಷವಾಗಿ 'ಅಲಾ ವೈಕುಂಠಪುರಮುಲೊ' ಚಿತ್ರದ 'ಬುಟ್ಟಬೊಮ್ಮ' ಹಾಡು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿ ಆಲ್‌ಟೈಮ್ ಫೇವರೆಟ್ ಎನಿಸಿಕೊಂಡಿತ್ತು.

ಇನ್ನು, ಇತ್ತೀಚೆಗಷ್ಟೇ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದ 'ಮೋನಿಕಾ' ಹಾಡಿನಲ್ಲಿ ಪೂಜಾ ಹೆಗ್ಡೆ ಸಖತ್ ಹೆಜ್ಜೆ ಹಾಕಿ ರಂಜಿಸಿದ್ದರು. ಈಗ ಅವರು ಅಲ್ಲು ಅರ್ಜುನ್‌ ಜೊತೆ ಮತ್ತೊಮ್ಮೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

Allu Sirish Pre Wedding Bash: ಅಲ್ಲು ಅರ್ಜುನ್‌ ತಮ್ಮ ಅಲ್ಲು ಸಿರೀಶ್‌ ಪ್ರೀ-ವೆಡ್ಡಿಂಗ್‌ ಪಾರ್ಟಿ ಬಲು ಜೋರು! ಫೋಟೋಸ್‌ ವೈರಲ್‌

ಲೋಕೇಶ್ ಕನಗರಾಜ್ ಶೈಲಿಯ ಇಂಟೆನ್ಸ್ ಆಕ್ಷನ್

ತಮ್ಮ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳನ್ನು ಅತ್ಯಂತ ಸ್ಟೈಲಿಶ್ ಹಾಗೂ ಪ್ರಭಾವಶಾಲಿಯಾಗಿ ವಿನ್ಯಾಸಗೊಳಿಸುವ ಲೋಕೇಶ್, ಈ ಬಾರಿಯೂ ಪೂರ್ಣಪ್ರಮಾಣದ ಇಂಟೆನ್ಸ್ ಆಕ್ಷನ್ ಎಂಟರ್‌ಟೈನರ್ ಕಥೆಯನ್ನು ಸಿದ್ಧಪಡಿಸಿದ್ದಾರೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಅಲ್ಲು-ಪೂಜಾ ಜೋಡಿಯನ್ನು ಅವರು ಹೇಗೆ ತೋರಿಸಲಿದ್ದಾರೆ ಎಂಬ ನಿರೀಕ್ಷೆ ದುಪ್ಪಟ್ಟಾಗಿದೆ. ಆದರೆ, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಪೂಜಾ ಹೆಗ್ಡೆ ಆಯ್ಕೆಯ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದರೂ, ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ರಾಕಾ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಬ್ಯುಸಿ

ಸದ್ಯ ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದ ಚಿತ್ರೀಕರಣವನ್ನು ಮುಗಿಸುವ ಹಂತದಲ್ಲಿರುವ ಅಲ್ಲು ಅರ್ಜುನ್, ಶೀಘ್ರದಲ್ಲೇ ಲೋಕೇಶ್ ಕನಕರಾಜ್ ಅವರ ಈ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಹಂತದ ಕೆಲಸಗಲೂ ಚಾಲ್ತಿಯಲ್ಲಿದ್ದು, ಇದು ಅಲ್ಲು ಅರ್ಜುನ್ ಅವರ 23ನೇ ಸಿನಿಮಾವಾಗಿದೆ.