ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌Yash: ʻಟಾಕ್ಸಿಕ್ ಬರೀ ಗ್ಯಾಂಗ್‌ಸ್ಟರ್‌ ಸಿನಿಮಾ ಅಲ್ಲ..ʼ; ಅಸಲಿ ವಿಚಾರ ಬಿಚ್ಚಿಟ್ಟ ‌ʻರಾಕಿ ಭಾಯ್‌ʼ

Toxic Movie Yash Update: ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ 'ಸಿನಿಮಾಕಾನ್ 2026' ಸಮಾವೇಶದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಇದು ಕೇವಲ ಸಾಧಾರಣ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ, ಬದಲಾಗಿ ಮಾನವ ಮನಃಸ್ಥಿತಿಯ ಆಳವಾದ ಸೈಕಾಲಜಿ ಹೊಂದಿರುವ ವಿಶಿಷ್ಟ ಕಥೆ ಎಂದು ಅವರು ಹೇಳಿದ್ದಾರೆ.

ಟಾಕ್ಸಿಕ್ ಬರೀ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ; ಅಸಲಿ ಗುಟ್ಟು ಬಿಚ್ಚಿಟ್ಟ ಯಶ್

-

Avinash GR
Avinash GR Apr 15, 2026 8:08 PM

ರಾಕಿಂಗ್ ಸ್ಟಾರ್ ಯಶ್ ಅವರು ಲಾಸ್ ವೇಗಾಸ್‌ನಲ್ಲಿ ನಡೆದ 'ಸಿನಿಮಾಕಾನ್ 2026' ಜಾಗತಿಕ ವೇದಿಕೆಯಲ್ಲಿ ತಮ್ಮ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಸಿನಿಮಾದ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 'ರಾಮಾಯಣ' ಚಿತ್ರದ ಸಹ-ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಟಾಕ್ಸಿಕ್ ಸಿನಿಮಾ ಹೇಗೆ ಗ್ಯಾಂಗ್‌ಸ್ಟರ್ ಶೈಲಿಯ ಸಿನಿಮಾಗಳನ್ನೇ ಮರು ವ್ಯಾಖ್ಯಾನಿಸಲಿದೆ ಎಂದು ವಿವರಿಸಿದ್ದಾರೆ.

ಟಾಕ್ಸಿಕ್‌ ಚಿತ್ರದ ಬಗ್ಗೆ ಯಶ್ ಹೇಳಿದ್ದೇನು?

"ನಾವು ಟಾಕ್ಸಿಕ್‌ ಸಿನಿಮಾವನ್ನು ಇಂಗ್ಲಿಷ್‌ನಲ್ಲಿಯೂ ಚಿತ್ರೀಕರಿಸಿದ್ದೇವೆ. ಈ ಚಿತ್ರದ ಕಥೆಯು ಹಲವು ಪದರಗಳನ್ನು ಹೊಂದಿದೆ. ಇದು ಕೇವಲ ಒಂದು ಸಾಧಾರಣ ಗ್ಯಾಂಗ್‌ಸ್ಟರ್ ಆಕ್ಷನ್ ಕಥೆಯಲ್ಲ. ಮೇಲ್ನೋಟಕ್ಕೆ ಇದು ಸಾಕಷ್ಟು ಸಾಹಸ ದೃಶ್ಯಗಳಿರುವ ಗ್ಯಾಂಗ್‌ಸ್ಟರ್ ಸಿನಿಮಾ ಅಂತ ಅನಿಸಬಹುದು. ಆದರೆ ಇದರ ಹಿಂದೆ ಆಳವಾದ ಸೈಕಾಲಜಿ ಮತ್ತು ಮಾನವ ಜೀವನದ ಕುತೂಹಲಕಾರಿ ಅಂಶಗಳಿವೆ. ಅತ್ಯಂತ ವಿಶಿಷ್ಟವಾದ ದಾರಿ ಮೂಲಕ ಒಂದು ಡಾರ್ಕ್‌ ಪಾತ್ರವನ್ನು ಪ್ರಸ್ತುತಪಡಿಸಿದ್ದೇವೆ" ಎಂದು ಯಶ್ ಹೇಳಿದ್ದಾರೆ.

H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್

ನಿರ್ದೇಶಕಿ ಗೀತು ಮೋಹನ್ ದಾಸ್‌ಗೆ ಯಶ್‌ ಮೆಚ್ಚುಗೆ

"ಈ ಚಿತ್ರಕ್ಕಾಗಿ ಕೆಲಸ ಮಾಡುವುದು ತುಂಬಾ ರೋಮಾಂಚನಕಾರಿ ಅನುಭವ ನೀಡಿತು. ಅತ್ಯುತ್ತಮ ತಾಂತ್ರಿಕ ತಂಡ ಮತ್ತು ನನ್ನ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಈ ಗ್ಯಾಂಗ್‌ಸ್ಟರ್ ಸಿನಿಮಾಗೆ ಒಂದು ಹೊಸ ದೃಷ್ಟಿಕೋನ ನೀಡಿದ್ದಾರೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ್ದನ್ನು ನಾನು ತುಂಬಾ ಎಂಜಾಯ್‌ ಮಾಡುತ್ತೇನೆ. ಇದು ಕೇವಲ ದೃಶ್ಯ ವೈಭವ ಮಾತ್ರವಲ್ಲದೆ, ಈ ಸಿನಿಮಾವು ಪ್ರೇಕ್ಷಕರ ಮನಸ್ಥಿತಿಯ ಮೇಲೆ ದೊಡ್ಡ ಪ್ರಭಾವ ಬೀರಲಿದೆ" ಎಂದು ಯಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂದರ್ಶನದಲ್ಲಿ ಟಾಕ್ಸಿಕ್‌ ಸಿನಿಮಾದ ಬಗ್ಗೆ ಮಾತನಾಡಿದ ಯಶ್



ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಿನಿಮಾ

ಭಾರತೀಯ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಯಶ್, "ಭಾರತವೇ ಒಂದು ದೊಡ್ಡ ಜಗತ್ತು. ಪ್ರತಿ ನೂರು ಕಿಲೋಮೀಟರ್‌ಗೆ ಇಲ್ಲಿ ಭಾಷೆ ಮತ್ತು ಸಂಸ್ಕೃತಿ ಬದಲಾಗುತ್ತದೆ. ಡಬ್ಬಿಂಗ್ ಮತ್ತು ಪ್ಯಾನ್-ಇಂಡಿಯಾ ಕಥೆಗಳು ಪ್ರಾದೇಶಿಕ ಗಡಿಗಳನ್ನು ದಾಟಿ ಪ್ರೇಕ್ಷಕರನ್ನು ಒಂದುಗೂಡಿಸಿವೆ. 'ಟಾಕ್ಸಿಕ್' ಸಿನಿಮಾ ಕೂಡ ಭಾರತೀಯ ಸಂವೇದನೆಗಳನ್ನು ಹೊಂದಿದ್ದರೂ ಜಾಗತಿಕ ಪ್ರೇಕ್ಷಕರಿಗಾಗಿ ರೂಪಿಸಲಾದ ಚಿತ್ರವಾಗಿದೆ" ಎಂದು ಯಶ್‌ ತಿಳಿಸಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರವನ್ನು 'ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಜಂಟಿಯಾಗಿ ನಿರ್ಮಿಸಿವೆ. ಈ ಚಿತ್ರದಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಮುಂತಾದವರು ನಟಿಸಿದ್ದಾರೆ. 'ಟಾಕ್ಸಿಕ್' ಚಿತ್ರವು ಜೂನ್ 4ರಂದು ವಿಶ್ವಾದ್ಯಂತ ತೆರೆಕಾಣಲಿದೆ.