ʻರಾಕಾʼ ಚಿತ್ರದ ಬೀಸ್ಟ್ ಲುಕ್‌ಗಾಗಿ ಗಂಟೆಗಟ್ಟಲೇ ಎಫರ್ಟ್ ಹಾಕುತ್ತಿರುವ ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್
Allu Arjun Raaka Movie Update: 'ಪುಷ್ಪ' ನಂತರ ಅಲ್ಲು ಅರ್ಜುನ್ 'ರಾಕಾ' ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಅಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ 'ಅರ್ಧ ಮೃಗ ಮತ್ತು ಅರ್ಧ ಮನುಷ್ಯ'ನ ವಿಶಿಷ್ಟ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಲುಕ್‌ಗಾಗಿ ಅವರು ಪ್ರತಿದಿನ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.
-
ಟಾಲಿವುಡ್ ನಟ ಅಲ್ಲು ಅರ್ಜುನ್ ಇದೀಗ ಮತ್ತೊಂದು ದೈತ್ಯ ಪ್ರಾಜೆಕ್ಟ್ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ. ಅದೇ ʻರಾಕಾʼ. ಪುಷ್ಪ ಸರಣಿಯ ಹಿಟ್ ನಂತರ ಕಾಲಿವುಡ್‌ನ ಸ್ಟಾರ್ ನಿರ್ದೇಶಕ ಅಟ್ಲೀ ಕುಮಾರ್ ಜೊತೆ ಕೈಜೋಡಿಸಿರುವ ಅಲ್ಲು ಅರ್ಜುನ್, ಈಚೆಗಷ್ಟೇ ತಮ್ಮ ಜನ್ಮದಿನದ ಅಂಗವಾಗಿ ‘ರಾಕಾ’ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು. ಅದರಲ್ಲಿನ ಅವರ ಲುಕ್ ಭಾರಿ ಗಮನಸೆಳೆದಿತ್ತು.
ವೈರಲ್ ಆಯ್ತು ಅಲ್ಲು ಅರ್ಜುನ್ ಬೀಸ್ಟ್ ಅವತಾರ
ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ‘ಅರ್ಧ ಮೃಗ ಹಾಗೂ ಅರ್ಧ ಮನುಷ್ಯ’ನ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಅಂದಹಾಗೆ, ಈ ಬೀಸ್ಟ್ ಲುಕ್‌ಗಾಗಿಯೇ ಅಲ್ಲು ಅರ್ಜುನ್ ಶೂಟಿಂಗ್‌ಗೂ ಮುನ್ನ ಪ್ರತಿದಿನ ಸುಮಾರು 3 ರಿಂದ 4 ಗಂಟೆಗಳ ಸಮಯವನ್ನು ವ್ಯಯ ಮಾಡಬೇಕಿತ್ತಂತೆ. ಹೌದು, ಅಷ್ಟೊಂದು ಸಮಯ ಮೇಕಪ್ ಹಾಗೂ ಫಿಸಿಕಲ್ ಟ್ರೈನಿಂಗ್‌ಗಾಗಿಯೇ ಬೇಕಾಗಿತ್ತು ಎನ್ನುತ್ತದೆ ಚಿತ್ರತಂಡ. ತಮ್ಮ ಪಾತ್ರಕ್ಕೆ ಜೀವ ತುಂಬಲು ಅವರು ತೋರುವ ಈ ಬದ್ಧತೆಯು ಸಿನಿಮಾ ಮೇಲಿರುವ ಅವರ ಪ್ರೀತಿ ಎಂಥದ್ದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅಟ್ಲೀ ಅವರ ಮಾಸ್ ಮೇಕಿಂಗ್ ಮತ್ತು ಅಲ್ಲು ಅರ್ಜುನ್ ಸ್ಟೈಲಿಶ್ ನಟನೆ ಈ ಚಿತ್ರದಲ್ಲಿ ಮೇಳೈಸಲಿದೆಯಂತೆ.
ಕ್ರಿಕೆಟ್ ಅಂಗಳದಲ್ಲೂ 'ರಾಕಾ' ಹವಾ
ಹೌದು, ಅಲ್ಲು ಅರ್ಜುನ್ ʻರಾಕಾʼ ಪೋಸ್ಟರ್‌ನಲ್ಲಿ ವಿಶಿಷ್ಟವಾದ ಕೈ ಸನ್ನೆ ಇದೆ. ಇದು ಈಗಾಗಲೇ ಟ್ರೆಂಡ್ ಸೃಷ್ಟಿಸಿದೆ. ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸೆಣಸಾಟದ ವೇಳೆ, ಹಾರ್ದಿಕ್ ಪಾಂಡ್ಯ ಅವರು ಇದೇ ‘ರಾಕಾ’ ಸಿಗ್ನೇಚರ್ ಗೆಸ್ಚರ್ ತೋರಿಸುವ ಮೂಲಕ ರಾಕಾ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದಾರೆ. ಕ್ರೀಡಾ ತಾರೆಗಳೂ ಈ ಲುಕ್‌ಗೆ ಮಾರುಹೋಗಿರುವುದು ಚಿತ್ರದ ಪ್ರಚಾರಕ್ಕೆ ಹೊಸ ವೇಗ ನೀಡಿದೆ ಅಂತಾರೆ ನಿರ್ಮಾಪಕರು.
ಅಲ್ಲು ಅರ್ಜುನ್ ನಟನೆಯ ʻರಾಕಾʼ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?
ಸನ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದು, ಇದೊಂದು ಪಕ್ಕಾ ಫ್ಯಾಂಟಸಿ ಆಕ್ಷನ್ ಕಥಾಹಂದರವನ್ನು ಒಳಗೊಂಡಿದೆ. ಚಿತ್ರದ ವಿಶುವಲ್ ಎಫೆಕ್ಟ್ಸ್‌ಗಾಗಿ ಹಾಲಿವುಡ್‌ನ ಖ್ಯಾತ ಗ್ರಾಫಿಕ್ಸ್ ಸ್ಟುಡಿಯೋಗಳು ಕೈಜೋಡಿಸಿರುವುದು ವಿಶೇಷ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದು, ಇನ್ನೂ ಹಲವು ನಟಿಯರು ಈ ಸಿನಿಮಾದ ಭಾಗವಾಗಲಿದ್ದಾರಂತೆ.