ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Aishwarya Sindogi : ಅವಹೇಳನಕಾರಿ ಕಮೆಂಟ್; ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ

Aishwarya Sindogi : ಐಶ್ವರ್ಯಾ ಸಿಂಧೋಗಿಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಈಗ ಕನ್ನಡದ ಮತ್ತೋರ್ವ ನಟಿ ಐಶ್ವರ್ಯ ಸಿಂದೋಗಿ ಅವರು ಇಂತಹ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿರುವ ಪೋಸ್ಟ್‌ಗಳಿಗೆ ಸತತವಾಗಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ.

ಅವಹೇಳನಕಾರಿ ಕಮೆಂಟ್; ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ

ಐಶ್ವರ್ಯಾ ಸಿಂಧೋಗಿ -

Yashaswi Devadiga
Yashaswi Devadiga Jul 20, 2026 9:38 AM

ಕನ್ನಡದ ಮತ್ತೊಬ್ಬ ನಟಿಗೆ ಅವಹೇಳನಕಾರಿ ಕಮೆಂಟ್ ಆರೋಪ ಕೇಳಿ ಬಂದಿದೆ. ರಮ್ಯಾ, ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಬಳಿಕ ಬಿಗ್ ಬಾಸ್ ಐಶ್ವರ್ಯಾ ಸಿಂಧೋಗಿಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಈಗ ಕನ್ನಡದ ಮತ್ತೋರ್ವ ನಟಿ ಐಶ್ವರ್ಯ ಸಿಂದೋಗಿ ಅವರು ಇಂತಹ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ (Police station) ಮೆಟ್ಟಿಲೇರಿದ್ದಾರೆ. ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ (Social Media) ಅಪ್‌ಲೋಡ್ ಮಾಡಿರುವ ಪೋಸ್ಟ್‌ಗಳಿಗೆ ಸತತವಾಗಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ತಮಗೆ ಪರಿಚಯವಿರುವ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Amitabh Bachchan: ಹೊಸ ಥೀಮ್‌ನೊಂದಿಗೆ ಬರ್ತಿದೆ ʻKaun Banega Crorepatiʼ! ಈ ಬಾರಿ ವಿಶೇಷತೆ ಏನು?

ಐಶ್ವರ್ಯ ಮಾಡಿರೋ ಪೋಸ್ಟ್ ಗಳಿಗೆ ಅವಹೇಳನಕಾರಿ ಕಮೆಂಟ್ ಮಾಡಿದ್ದಾರೆ. ಪರಿಚಯಸ್ಥ ವ್ಯಕ್ತಿ ಹೆಸರು ಉಲ್ಲೇಖಿಸಿ ದೂರು ದಾಖಲು ಆಗಿದೆ. ಹಿಂದೆಯೂ ಅದೇ ವ್ಯಕ್ತಿ ಬೆದರಿಕೆ ಹಾಕಿದ್ದು ಕೇಸ್ ಆಗಿತ್ತು.ಈಗ ನಕಲಿ ಖಾತೆಗಳ ಮೂಲಕ ಬ್ಯಾಡ್ ಕಮೆಂಟ್ ಎಂದು ಆರೋಪ ಕೇಳಿ ಬಂದಿದೆ.

ಆ ನಕಲಿ ಖಾತೆಗಳ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ನಟಿ ಮನವಿ ಮಾಡಿದ್ದಾರೆ. ದೂರು ಹಿನ್ನೆಲೆಯಲ್ಲಿ ಸಂಜಯ್ ನಗರ ಠಾಣೆಯಲ್ಲಿ FIR ದಾಖಲು ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟಿಯರಿಗೆ ಈ ರೀತಿಯ ಕಿರುಕುಳ ನೀಡುತ್ತಿರುವುದು ಇದೇ ಮೊದಲೇನಲ್ಲ.

ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಮೆಂಟ್‌ಗಳ ಮೂಲಕ ನಿಂದಿಸಲಾಗಿತ್ತು.

ಇದನ್ನೂ ಓದಿ: Salman Khan: ಸಲ್ಲು ಆರೋಗ್ಯದ ಬಗ್ಗೆ ವದಂತಿ; ಸಲ್ಮಾನ್‌ ಖಾನ್‌ ಏಕಾಏಕಿ ಪೋಸ್ಟ್‌!

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ, ನಟಿಯರಿಗೆ ಕೆಟ್ಟ ಕಮೆಂಟ್ ಮಾಡಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದರು.