Dance Karnataka Dance: ಅಪ್ಪು ಸಾಂಗ್‌ಗೆ ʻಬಿಂದಾಸ್ʼ ಆಗಿ ಸ್ಟೆಪ್ ಹಾಕಿದ 41 ವರ್ಷದ ಶ್ರೀದೇವಿ; ಇವ್ರ ಹಿನ್ನೆಲೆ ಏನು? ಯಾವ ಊರಿನವರು?
Dance Karnataka Dance 2025: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼನಲ್ಲಿ 41 ವರ್ಷದ ಗೃಹಿಣಿ ಶ್ರೀದೇವಿ ಹೆಜ್ಜೆ ಹಾಕಿದ್ದಾರೆ. ಚಿತ್ರದುರ್ಗ ಮೂಲದ ಮೂರು ಮಕ್ಕಳ ತಾಯಿ ಶ್ರೀದೇವಿ ಅವರು ಪುನೀತ್ ರಾಜ್‌ಕುಮಾರ್ ಅವರ ಬಿಂದಾಸ್ ಸಿನಿಮಾದ ಥರ ಥರ ಒಂಥರಾ ಹಾಡಿಗೆ ಡ್ಯಾನ್ಸ್ ಮಾಡಿ, ಸೈ ಎನಿಸಿಕೊಂಡಿದ್ದಾರೆ.
-
ಜೀ ಕನ್ನಡ ವಾಹಿನಿಯ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ (Dance Karnataka Dance 2025) ರಿಯಾಲಿಟಿ ಶೋ ಮತ್ತೆ ಆರಂಭವಾಗಿದೆ. ಪ್ರತಿ ಬಾರಿಯು ವಿಭಿನ್ನ ಹಿನ್ನೆಲೆಯ ಅನೇಕ ಸ್ಪರ್ಧಿಗಳು ಇಲ್ಲಿಗೆ ಆಗಮಿಸುವುದು ಮಾಮೂಲು. ಅಂತೆಯೇ ಈ ಬಾರಿ 41 ವರ್ಷದ ಗೃಹಿಣಿ ಶ್ರೀದೇವಿ ಅವರು ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಶೋಗೆ ಆಗಮಿಸಿರುವುದು ವಿಶೇಷ. ಎರಡು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗನ ತಾಯಿ ಆಗಿರುವ ಶ್ರೀದೇವಿ ಅವರು ಈಗ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಶೋಗೆ ಆಗಮಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿರುವುದು ಅನೇಕರಿಗೆ ಸ್ಪೂರ್ತಿ ಆಗಿದೆ.
ಶ್ರೀದೇವಿ ಯಾರು? ಅವರ ಹಿನ್ನೆಲೆ ಏನು?
ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಶೋಗೆ ಆಗಮಿಸಿ, ಎಲ್ಲರ ಗಮನಸೆಳೆದಿರುವ ಶ್ರೀದೇವಿ ಯಾರು? ಇವರ ಹಿನ್ನೆಲೆ ಏನು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕಿಲ್ಲಿದೆ ಉತ್ತರ. ಶ್ರೀದೇವಿ ಅವರು ಹುಟ್ಟಿದ್ದು ಚಿತ್ರದುರ್ಗದಲ್ಲಿ. ಮದುವೆಯಾದ ಮೇಲೆ ಆಲಮಟ್ಟಿಗೆ ಹೋದರು. ಸದ್ಯ ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ.. "ನನಗೆ ಈಗ 41 ವರ್ಷ.. ನಾನು ಮದುವೆಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ಎಲ್ಲಾದರೂ ಫಂಕ್ಷನ್‌ಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ನಂತರ ಮನೆಯಲ್ಲಿ ಅಡುಗೆ ಮಾಡ್ತಾ, ಕೆಲಸ ಮಾಡುವಾಗಲೂ ಡ್ಯಾನ್ಸ್ ಮಾಡುತ್ತಿದ್ದೆ" ಎಂದು ಶ್ರೀದೇವಿ ಹೇಳಿದ್ದಾರೆ.
Anchor Anushree: ಜೀ ಕನ್ನಡ ವಾಹಿನಿಯಿಂದ ಮಡಿಲು ತುಂಬುವ ಶಾಸ್ತ್ರ- ತಾಳಿ ಹಿಡಿದು ಅನುಶ್ರೀ ಭಾವುಕ!
"ಮನೆಯವರೆಲ್ಲರ ಕನಸಿಗೆ ಕಾವಲಾಗಿ, ತನ್ನ ಕನಸುಗಳನ್ನ ತ್ಯಾಗ ಮಾಡಿರೋ ಎಲ್ಲಾ ಗೃಹಿಣಿಯ ಪ್ರತಿನಿಧಿಸೋಕೆ ಬರ್ತಾ ಇದ್ದಾರೆ, ನಿಮ್ಮಲ್ಲೇ ಒಬ್ಬರಾದ ಶ್ರೀಮತಿ ಶ್ರೀದೇವಿ" ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದ್ದಾರೆ.
ಶಿವರಾಜ್‌ಕುಮಾರ್ ಏನಂದ್ರು?
"ನಿಜವಾಗಿಯೂ ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು. ಆ ಆಟಿಟ್ಯೂಡ್‌ನ ತುಂಬಾ ಚೆನ್ನಾಗಿ ಕ್ಯಾರಿ ಮಾಡಿದ್ರಿ. ಇದು ಕಾಮಿಡಿ ಮಾಡೋ ವಿಚಾರವಲ್ಲ. ತುಂಬಾ ಸೂಪರ್ಬ್ ಆಗಿತ್ತು ನಿಮ್ಮ ಡ್ಯಾನ್ಸ್. ಅಪ್ಪು ಸಿನಿಮಾದ ಸಾಂಗ್‌ಗೇ ಡ್ಯಾನ್ಸ್ ಮಾಡೋದು ಅಷ್ಟು ಸುಲಭವಲ್ಲ. ತುಂಬಾ ಸ್ಟೈಲಿಶ್ ಆಗಿ ಮೂಡಿಬಂತು. ಇಲ್ಲಿ ಇರೋರೆಲ್ಲಾ ತುಂಬಾ ಎಂಜಾಯ್ ಮಾಡಿದ್ರು. ಸ್ಪರ್ಧೆ ಅಂದ್ರೆ ತುಂಬಾ ಕಠಿಣ ಇರುತ್ತದೆ. ಆದರೆ ನೀವು ಯಾವಾಗ ಬೇಕಾದರೂ ಈ ವೇದಿಕೆಗೆ ಬಂದು ಡ್ಯಾನ್ಸ್ ಮಾಡಬಹುದು. ಇರೋವರೆಗೂ ಜಾಲಿಯಾಗಿ ಇರಬೇಕು ಅಷ್ಟೇ" ಎಂದು ಹೇಳಿಶ ಶಿವರಾಜ್‌ಕುಮಾರ್ ಅವರು ಶ್ರೀದೇವಿಗೆ ಅಪ್ಪು ಮೆಡಲ್ ನೀಡಿದರು.
ಶ್ರೀದೇವಿ ಅವರ ಡ್ಯಾನ್ಸ್ ಝಲಕ್
ಶ್ರೀದೇವಿಗಾಗಿ ಬಂದ ಮಕ್ಕಳು
ಸಾಮಾನ್ಯವಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಮೆಗಾ ಆಡಿಷನ್‌ನಲ್ಲಿ ಸ್ಪರ್ಧಿ ಡ್ಯಾನ್ಸ್ ಮಾಡುತ್ತಿದ್ದರೆ, ವೇದಿಕೆಯ ಹಿಂಭಾಗದಲ್ಲಿ ಸ್ಪರ್ಧಿಯ ತಂದೆ ತಾಯಿ ಇರುತ್ತಾರೆ. ಆದರೆ ಇಲ್ಲಿ ಒಂದು ಬದಲಾವಣೆ ಇತ್ತು. ಶ್ರೀದೇವಿ ಡ್ಯಾನ್ಸ್ ಮಾಡುತ್ತಿದ್ದರೆ, ಅವರ ಮೂವರು ಮಕ್ಕಳು ಅಮ್ಮನ ಡ್ಯಾನ್ಸ್ ನೋಡಿ ಖುಷಿಪಡುತ್ತಿದ್ದರು. ನಂತರ ವೇದಿಕೆಗೆ ಬಂದ ಮಕ್ಕಳು, "ಅಮ್ಮ ಇನ್ನೂ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ, ಈಗ್ಯಾಕೋ ಒಂಚೂರು ನರ್ವಸ್ ಆಗಿದ್ದಾರೆ" ಎಂದರು. ಶ್ರೀದೇವಿ ಅವರುಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಯಾಗಿಲ್ಲವಾದರೂ, ಯಾವಾಗ ಬೇಕಾದರೂ ವೇದಿಕೆಗೆ ಬಂದು, ಡ್ಯಾನ್ಸ್ ಮಾಡಬಹುದು ಮತ್ತು ವೀಕ್ಷಕರನ್ನು ರಂಜಿಸಬಹುದು.
Naavu Nammavaru: ಜು. 27ಕ್ಕೆ ಬೆಂಗಳೂರಿನಲ್ಲಿ ಜೀ ಕನ್ನಡದಿಂದ 'ನೆನಪಿನ ಅಂಗಳ'; ಕುಟುಂಬಗಳ ಜತೆ ಸಂಭ್ರಮಿಸಲು ಸದವಕಾಶ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2025 ಶೋವನ್ನು ಅನುಶ್ರೀ ನಡೆಸಿಕೊಡುತ್ತಿದ್ದು, ಶಿವರಾಜ್‌ಕುಮಾರ್ ಅವರು ಮಹಾಗುರುಗಳಾಗಿದ್ದಾರೆ. ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ರಚಿತಾ ರಾಮ್ ಅವರು ಈ ಶೋನ ಜಡ್ಜ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.