ಇಂದು ನಟ ದರ್ಶನ್ (Darshan Birthday) ತೂಗುದೀಪ ಅವರ ಜನುಮದಿನ. ಬರ್ತ್‌ಡೇ ಆಚರಣೆಯಲ್ಲಿ ಮಾಡುವ ಸ್ಥಿತಿಯಲ್ಲಿ ದರ್ಶನ್ ಇಲ್ಲದಿದ್ದರೂ, ಅಭಿಮಾನಿಗಳ (Fans) ಸಂಭ್ರಮಕ್ಕೆ ಏನೂ ಕಮ್ಮಿ ಇಲ್ಲ. ದರ್ಶನ್ ಅವರ ಹಳೆಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಫ್ಯಾನ್ಸ್, ಅಷ್ಟೇ ಅಲ್ಲ ವಿಜಯಲಕ್ಷ್ಮೀ ದರ್ಶನ್ ಕೂಡ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ. ವಿಜಯಲಕ್ಷ್ಮೀ (Vijayalakshmi Darshan) ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷವಾದ ವಿಡಿಯೋ ಹಾಕಿದ್ದಾರೆ.
ದರ್ಶನ್ ಹಾಗೂ ವಿನೀಶ್ ನಡುವಿನ ಬಾಂಧವ್ಯ
ನಟ ದರ್ಶನ್ ಹಾಗೂ ವಿನೀಶ್ ನಡುವಿನ ಬಾಂಧವ್ಯ ಈ ವಿಡಿಯೋದಲ್ಲಿದೆ. ದರ್ಶನ್ ಹೊರಗಡೆ ಇದ್ದಾಗ ವಿನೀಶ್ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದರು. ಕೊನೆಗೆ ತಂದೆಗೆ ವಿನೀಶ್ ಹುಟ್ಟುಹಬ್ಬದ ಶುಭಾಶಯ ಕೋರಿರುವ ಆಡಿಯೋ ಕೇಳಬಹುದು.
ಇದನ್ನೂ ಓದಿ: Lakshmi Nivasa Serial: ಮರಳಿ ಬಂದ 'ಶ್ರೀಕಾಂತ್'; ಲಕ್ಷ್ಮೀನಿವಾಸದಲ್ಲಿ ರೋಚಕ ತಿರುವು
'ಡೆವಿಲ್' ಚಿತ್ರದ ಚಿತ್ರೀಕರಣಕ್ಕಾಗಿ ಪತ್ನಿ ಹಾಗೂ ಮಗನ ಜೊತೆ ದರ್ಶನ್ ಬ್ಯಾಂಕಾಕ್‌ಗೆ ಹೋಗಿದ್ದರು. ಈ ಎಲ್ಲ ಸಂತಸದ ಕ್ಷಣಗಳು ಸೆರೆಯಾಗಿವೆ. ವಿಜಯಲಕ್ಷ್ಮಿ ದರ್ಶನ್ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ವಿಜಯಲಕ್ಷ್ಮೀ ಪೋಸ್ಟ್
‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ. ಬರ್ತ್‌ಡೇ ಸಿಡಿಪಿಗಳು, ಸ್ಪೆಷಲ್ ವೀಡಿಯೋಗಳು ವೈರಲ್ ಆಗ್ತಿದೆ.2003ರಲ್ಲಿ ಬಂದಿದ್ದ 'ಕರಿಯ' ಸಿನಿಮಾ ಸೂಪರ್ ಹಿಟ್ ಆಗಿತ್ತು. 3ನೇ ಬಾರಿ ಸಿನಿಮಾ ರೀ-ರಿಲೀಸ್ ಆಗ್ತಿದೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಡಿ ಬಾಸ್ ಅಭಿಮಾನಿಗಳು ಬೃಹತ್ ಬ್ಯಾನರ್‌ಗಳು, ಪೋಸ್ಟರ್‌ಗಳು ಅಳವಡಿಸಿದ್ದಾರೆ. ಕೆಲವೆಡೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಟ ದರ್ಶನ್ ಅವರ ಹುಟ್ಟುಹಬ್ಬ ಈ ಬಾರಿ ಬೇಸರದ ಪರಿಸ್ಥಿತಿಯಲ್ಲಿ ಬಂದಿದ್ದರೂ, ಅಭಿಮಾನಿಗಳ ಪ್ರೀತಿ ಮತ್ತು ನಿಷ್ಠೆ ಮಾತ್ರ ಅಷ್ಟೇ ಗಟ್ಟಿಯಾಗಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: Darshan Birthday: ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿ; ಪತಿಗೆ ವಿಜಯಲಕ್ಷ್ಮೀ ಕ್ಯೂಟ್ ವಿಶ್
ಕೇಸ್ ವಿಚಾರಕ್ಕೆ ಬರೋದಾದರೆ ಸದ್ಯ ರೇಣುಕಾಸ್ವಾಮಿ ಕೇಸ್ನಲ್ಲಿ ಸಾಕ್ಷಿಗಳ ಹೇಳಿಕೆ ದಾಖಲು ಮತ್ತು ಪಾಟಿ ಸವಾಲು ಪ್ರಕ್ರಿಯೆ ನಡೀತಾ ಇದೆ. ಮುಂದಿನ 4 ತಿಂಗಳಲ್ಲಿ ಈ ಸಾಕ್ಷಿ ದಾಖಲು ಪ್ರಕ್ರಿಯೆ ಮುಗಿಯಲಿದ್ದು ದರ್ಶನ್ ಮತ್ತು ಗ್ಯಾಂಗ್‌ಗೆ ಬೇಲ್ ಅರ್ಜಿ ಸಲ್ಲಿಸೋ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.