ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lakshmi Nivasa Serial: ಮರಳಿ ಬಂದ 'ಶ್ರೀಕಾಂತ್'; ಲಕ್ಷ್ಮೀನಿವಾಸದಲ್ಲಿ ರೋಚಕ ತಿರುವು

Lakshmi Nivasa Kannada Serial: ಲಕ್ಷ್ಮೀ ನಿವಾಸದಲ್ಲಿ ರೋಚಕ ಟ್ವಿಸ್ಟ್‌ ಬಂದಿದೆ. ಶ್ರೀಕಾಂತ್‌ ತಂಗಿ ಗಂಡ, ಶ್ರೀಕಾಂತ್ ಬರುತ್ತಿದ್ದ ಕಾರ್‌ಗೆ ಅಪಘಾತ ಮಾಡಿದ್ದನು. ಆಗ ಶ್ರೀಕಾಂತ್‌ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೀಗ ಏಕಾಏಕಿ ಶ್ರೀಕಾಂತ್‌ ಪ್ರತ್ಯಕ್ಷವಾಗಿದ್ದಾನೆ. ಇಷ್ಟೂ ದಿನ ಶ್ರೀಕಾಂತ್‌ ಎಲ್ಲಿದ್ದ? ಮಗಳಿಗೆ ನನ್ನ ಅವಶ್ಯಕತೆ ಇದೆ ಎನ್ನೋದನ್ನು ಮರೆತು ಇಷ್ಟೂ ದಿನ ಸುಮ್ಮನಿದ್ದದ್ದೇಕೆ? ಅಪಘಾತದಲ್ಲಿ ಏನಾಯ್ತು?

ಮರಳಿ ಬಂದ 'ಶ್ರೀಕಾಂತ್'; ಲಕ್ಷ್ಮೀನಿವಾಸದಲ್ಲಿ ರೋಚಕ ತಿರುವು

ಲಕ್ಷ್ಮೀ ನಿವಾಸ ಧಾರಾವಾಹಿ -

Yashaswi Devadiga
Yashaswi Devadiga Feb 15, 2026 7:16 PM

ಲಕ್ಷ್ಮೀ ನಿವಾಸದಲ್ಲಿ (lakshmi nivasa kannada serial) ರೋಚಕ ಟ್ವಿಸ್ಟ್‌ ಬಂದಿದೆ. ಶ್ರೀಕಾಂತ್‌ (shrikanth) ತಂಗಿ ಗಂಡ, ಶ್ರೀಕಾಂತ್ ಬರುತ್ತಿದ್ದ ಕಾರ್‌ಗೆ ಅಪಘಾತ ಮಾಡಿದ್ದನು. ಆಗ ಶ್ರೀಕಾಂತ್‌ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೀಗ ಏಕಾಏಕಿ ಶ್ರೀಕಾಂತ್‌ ಪ್ರತ್ಯಕ್ಷವಾಗಿದ್ದಾನೆ. ಶ್ರೀಕಾಂತ್‌ ಕಾರ್‌ನ್ನು ಅಪಘಾತ ಮಾಡಿದ ಆರೋಪದ ಮೇಲೆ ಸಿದ್ದೇಗೌಡ್ರು (Siddegowdru) ಜೈಲಿನಲ್ಲಿದ್ದಾರೆ. ಇದರಲ್ಲಿ ಸಿದ್ದೇಗೌಡ್ರು ತಪ್ಪು ಇಲ್ಲ ಎಂದು ಭಾವನಾ (Bhavana) ಸಾಬೀತುಪಡಿಸಲು ನೋಡುತ್ತಿದ್ದಾಳೆ.ಅಷ್ಟರಲ್ಲಿ ಶ್ರೀಕಾಂತ್‌ ಎಂಟ್ರಿ ಆಗಿದೆ.

ಈ ಹಿಂದೆ ಘಟನೆ ಸಂಭವಿಸಿದ್ದೇನು?

ಮದುವೆ ಮನೆಗೆ ಬರುತ್ತಿದ್ದ ಶ್ರೀಕಾಂತ್ ಕುಟುಂಬಕ್ಕೆ ಅಪಘಾತ ಸಂಭವಿಸಿತ್ತು.ಶ್ರೀಕಾಂತ್ ತಾಯಿ ಬಳಿಗೆ ಬಂದ ಭಾವನಾ, ಅಮ್ಮ ಏನಾಯಿತು ನಿಮಗೆ ಎಂದು ಬಹಳ ಆಘಾತದಲ್ಲಿ ಕೇಳಿದಾಗ ಕೊನೆಯದಾಗಿ ಒಂದು ಮಾತನ್ನು ಹೇಳಿ ಕೊನೆಯುಸಿರು ಬಿಟ್ಟಿದ್ದರು .

ಇದನ್ನೂ ಓದಿ: Muddhu Sose Serial: ಮುದ್ದು ಸೊಸೆ ಮಹಾಸಂಚಿಕೆ; ಭದ್ರ ಮತ್ತು ವಿದ್ಯಾಳ ಜೀವನದಲ್ಲಿ ಬಿರುಗಾಳಿ

ಖುಷಿಯನ್ನು ನಿನ್ನ ಮಗಳು ಎಂದು ಸಾಕು. ಆಕೆ ನಿನ್ನ ಜೊತೆಯೇ ಇರಲಿ ಎಂದು ಶ್ರೀಕಾಂತ್ ತಾಯಿ ಕೊನೆಯದಾಗಿ ಲಕ್ಷ್ಮೀ ಬಳಿ ಹೇಳಿದ್ದರು. ಖುಷಿಯನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ಶ್ರೀಕಾಂತ್ ತಾಯಿ ಕಣ್ಣು ಮುಚ್ಚಿಕೊಂಡಿದ್ದರು. ಶ್ರೀಕಾಂತ್‌ಗೆ ಆಪರೇಶನ್ ಥಿಯೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕೊನೆಗೂ ಚಿಕಿತ್ಸೆ ಫಲಿಸದೆ ಶ್ರೀಕಾಂತ್ ಕೂಡ ಕೊನೆಯುಸಿರೆಳಿದ್ದರು.

ಆಗ ಶ್ರೀಕಾಂತ್‌ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಅತ್ತ ಭಾವನಾ, ಸಿದ್ದೇಗೌಡ್ರ ಮದುವೆ ಕೂಡ ಆಗಿದೆ. ಸಿದ್ದೇಗೌಡ್ರನ್ನು ಜೈಲಿಗೆ ಕಳಿಸಿದ ಬಳಿಕ ಶ್ರೀಕಾಂತ್‌ ಆಸ್ತಿಯನ್ನು ಅನುಭವಿಸಿಕೊಂಡು ಇರೋಣ ಎಂದು ರವಿಶಂಕರ್‌ ಅಂದುಕೊಂಡಿದ್ದ. ಈ ಮಧ್ಯೆ ಶ್ರೀಕಾಂತ್‌ ಎಂಟ್ರಿಯಾಗಿದೆ. ಶ್ರೀಕಾಂತ್‌ ಮತ್ತೆ ಸಿಕ್ಕಿದ ಎಂದು ರವಿಶಂಕರ್‌ ಅವನನ್ನು ನಂಬಿಸಿ, ಕಿಡ್ನ್ಯಾಪ್‌ ಮಾಡಿದ್ದಾನೆ. ಜಯಂತ್‌ ಹಾಗೂ ರವಿಶಂಕರ್‌ ಇಬ್ಬರೂ ಸೇರಿಕೊಂಡು ಆ ಗೂಂಡಾಗಳನ್ನು ಹೊಡೆದು ಹಾಕುತ್ತಾರೆ.

ಇಷ್ಟೂ ದಿನ ಶ್ರೀಕಾಂತ್‌ ಎಲ್ಲಿದ್ದ? ಮಗಳಿಗೆ ನನ್ನ ಅವಶ್ಯಕತೆ ಇದೆ ಎನ್ನೋದನ್ನು ಮರೆತು ಇಷ್ಟೂ ದಿನ ಸುಮ್ಮನಿದ್ದದ್ದೇಕ್ಕೇ? ಅಪಘಾತದಲ್ಲಿ ಏನಾಯ್ತು? ಎಂಬ ಪ್ರಶ್ನೆಗಳು ವೀಕ್ಷಕರಿಗೆ ಸಿಗಬೇಕಿದೆ.

ಇದನ್ನೂ ಓದಿ: Karna Serial: ಫೇಲ್​ ಆಗಿದ್ದ ನಿಧಿ ಈಗ ಸರ್ಜನ್; ಸಂಜಯನ ಮುಂದಿನ ಪ್ಲ್ಯಾನ್‌ ಏನು?

ಧಾರಾವಾಹಿಯಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್‌ನಲ್ಲಿ ಸಿದ್ದೇಗೌಡ್ರು ತಾಯಿ ರೇಣುಕಾ ಪಾತ್ರವನ್ನ ಅಂಜಲಿ ಸುಧಾಕರ್ ನಿರ್ವಹಿಸುತ್ತಿದ್ದರು. ಇದೀಗ ಇದೇ ಪಾತ್ರಕ್ಕೆ ಹಿರಿಯ ನಟಿ ಲಕ್ಷ್ಮೀ ಭಟ್‌ ರೀಪ್ಲೇಸ್ ಆಗಿದ್ದಾರೆ. ಧನಂಜಯ್ (ಸಿದ್ದೇಗೌಡ), ಮಧು ಹೆಗಡೆ (ಸಂತೋಷ್), ಮತ್ತು ದೀಪಕ್ ಸುಬ್ರಮಣ್ಯ (ಜಯಂತ್) ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.