ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Darshan: ಮೊದಲ ವಾರಾಂತ್ಯಕ್ಕೆ ʻದಿ ಡೆವಿಲ್‌ʼ ಅಕೌಂಟ್‌ಗೆ ಬಂದ ದುಡ್ಡೆಷ್ಟು? 4ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಹೇಗಿದೆ?

The Devil Box Office Collection: ಡೆವಿಲ್ ಸಿನಿಮಾವು ಮೊದಲ ವಾರಾಂತ್ಯಕ್ಕೆ 25 ಕೋಟಿ‌ ರೂ. ಗಳಿಸಿದೆ. ಭಾನುವಾರದ ರಜಾದಿನದಿಂದಾಗಿ ನಾಲ್ಕನೇ ದಿನ ಗಳಿಕೆಯಲ್ಲಿ ಚೇತರಿಕೆ ಕಂಡಿದೆ. ಸೋಮವಾರದ (ಡಿ.15) ಗಳಿಕೆಯು ಚಿತ್ರದ ಭವಿಷ್ಯ ನಿರ್ಧರಿಸುವ ಪ್ರಮುಖ ಪರೀಕ್ಷೆಯಾಗಿದೆ.

The Devil Collection: ಬಾಕ್ಸ್‌ ಆಫೀಸ್‌ನಲ್ಲಿ ಹೇಗಿದೆ ದರ್ಶನ್‌ ಹವಾ?

-

Avinash GR
Avinash GR Dec 15, 2025 1:37 PM

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ಅಭಿನಯದ ʻದಿ ಡೆವಿಲ್ʼ‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ನಾಲ್ಕನೇ ದಿನಕ್ಕೆ ಚೂರು ಚೇತರಿಕೆ ಕಂಡಿದೆ. ಆದರೆ ಇಂದು (ಡಿ.15) ಅಸಲಿಗೆ ಪರೀಕ್ಷೆ ಇದೆ. ವಾರಾಂತ್ಯದ ನಂತರ ಮೊದಲ ಸೋಮವಾರ ಯಾವ ರೀತಿ ಗಳಿಕೆ ಆಗುತ್ತದೆ ಎಂಬುದರ ಮೇಲೆ ಸಿನಿಮಾದ ಮುಂದಿನ ಭವಿಷ್ಯ ನಿಂತಿರುತ್ತದೆ. ಸದ್ಯ ʻದಿ ಡೆವಿಲ್‌ʼ ಸಿನಿಮಾದ ನಾಲ್ಕನೇ ದಿನದ ಗಳಿಕೆ ಎಷ್ಟಾಗಿದೆ? ಇಲ್ಲಿದೆ ಮಾಹಿತಿ.

25 ಕೋಟಿ ರೂ. ‌ಗಳಿಸಿದ ʻದಿ ಡೆವಿಲ್ʼ

ಚಿತ್ರತಂಡವೇ ಹೇಳಿಕೊಂಡ ಪ್ರಕಾರ, ʻದಿ ಡೆವಿಲ್‌ʼ ಸಿನಿಮಾವು ಮೊದಲ ದಿನ 13.80 ಕೋಟಿ ರೂ. ಗಳಿಸಿತ್ತು. ಆದರೆ ಎರಡನೇ ದಿನವೇ ಗಳಿಕೆಯಲ್ಲಿ ಕುಸಿತ ಕಂಡಿತ್ತು. ಎರಡನೇ ದಿನ 3.40 ಕೋಟಿ ರೂ. ಗಳಿಸಿದ್ದರೆ, ಮೂರನೇ ದಿನ 3.80 ಕೋಟಿ ರೂ. ಬಾಚಿಕೊಂಡಿತ್ತು. ಹೆಚ್ಚು ಕಮ್ಮಿ ಮೊದಲ ದಿನಕ್ಕೆ ಗಳಿಕೆಗೆ ಹೋಲಿಸಿದರೆ, ಇದು ಹಲವು ಪಟ್ಟು ಕಡಿಮೆ ಆಗಿತ್ತು. ಆದರೆ ನಾಲ್ಕನೇ ದಿನಕ್ಕೆ ಕೊಂಚ ಚೇತರಿಕೆ ಕಂಡಿದೆ. ಭಾನುವಾರ ರಜಾ ದಿನವಾದ್ದರಿಂದ ʻದಿ ಡೆವಿಲ್‌ʼ ಚಿತ್ರದ ಗಳಿಕೆಯು 4.25 ಕೋಟಿ ರೂ. ದಾಟಿದೆ. ಎಲ್ಲಾ ಸೇರಿ ಮೊದಲ ವಾರಾಂತ್ಯಕ್ಕೆ ʻದಿ ಡೆವಿಲ್‌ʼ ಚಿತ್ರದ ಕಲೆಕ್ಷನ್‌ 25 ಕೋಟಿ ರೂ. ಕ್ರಾಸ್‌ ಆಗಿದೆ ಎನ್ನುತ್ತವೆ ಬಾಕ್ಸ್‌ ಆಫೀಸ್‌ ಮೂಲಗಳು.

Actor Darshan: ದರ್ಶನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ದಿ ಡೆವಿಲ್ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌

ಸೋಮವಾರದ ಗಳಿಕೆ ಮೇಲೆ ಎಲ್ಲರ ಕಣ್ಣು

ಸದ್ಯ ಮೊದಲ ಸೋಮವಾರಕ್ಕೆ ಡೆವಿಲ್‌ ಸಿನಿಮಾ ಎಂಟ್ರಿ ಕೊಟ್ಟಿದ್ದು, ಇಂದಿನ (ಡಿ.15) ಗಳಿಕೆ ಮೇಲೆ ಎಲ್ಲರ ಕಣ್ಣು ಇದೆ. ಸದ್ಯ ಬಾಲಿವುಡ್‌ನಿಂದ ಧುರಂಧರ್‌ ಮತ್ತು ಟಾಲಿವುಡ್‌ನಿಂದ ಅಖಂಡ 2 ಸಿನಿಮಾಗಳು ಡೆವಿಲ್‌ಗೆ ದೊಡ್ಡ ಪೈಪೋಟಿ ನೀಡುತ್ತಿವೆ. ಇದರ ನಡುವೆಯೂ ಮುಂದಿನ ದಿನಗಳಲ್ಲಿ ಡೆವಿಲ್‌ ಯಾವ ರೀತಿ ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Actor Darshan: ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್

ಪ್ರಕಾಶ್‌ ವೀರ್‌ ನಿರ್ಮಿಸಿ, ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರು ಸಂಗೀತ ನೀಡಿದ್ದಾರೆ. ಸುಧಾಕರ್‌ ಎಸ್‌ ರಾಜ್‌ ಛಾಯಾಗ್ರಹಣವಿದ್ದು, ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದಾರೆ. ಮಹೇಶ್‌ ಮಂಜ್ರೇಕರ್‌, ಅಚ್ಯುತ್‌ ಕುಮಾರ್‌, ಹುಲಿ ಕಾರ್ತಿಕ್‌, ಚಂದು ಗೌಡ, ರೋಜರ್‌ ನಾರಾಯಣ್‌, ವಿನಯ್‌ ಗೌಡ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.