OTT Releases: 200 ಎಪಿಸೋಡ್‌ಗಳ 'ಹಾರ್ಟ್‌ಬೀಟ್' ಸರಣಿ ಈಗ ಕನ್ನಡದಲ್ಲೂ ಲಭ್ಯ; ಎಲ್ಲಿ ವೀಕ್ಷಿಸಬಹುದು?
Heart Beat TV series: ತಮಿಳಿನ ಜನಪ್ರಿಯ ಮೆಡಿಕಲ್ ಡ್ರಾಮಾ ಸರಣಿ 'ಹಾರ್ಟ್‌ಬೀಟ್' ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಗೊಂಡಿದೆ. ನವೆಂಬರ್ 28 ರಿಂದ ಈ ಸರಣಿಯ ಎರಡೂ ಸೀಸನ್‌ಗಳ 200 ಸಂಚಿಕೆಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿವೆ. ವೈದ್ಯಕೀಯ ಲೋಕದ ಸವಾಲುಗಳು, ಸಂಬಂಧಗಳ ಸಂಘರ್ಷಗಳನ್ನು ಒಳಗೊಂಡಿರುವ ಈ ಸರಣಿ ಒಳ್ಳೆಯ ರೆಸ್ಫಾನ್ಸ್ ಸಿಕ್ಕಿದೆ.
-
ತಮಿಳಿನಲ್ಲಿ ಮೂಡಿಬಂದಿರುವ ಮೆಡಿಕಲ್ ಡ್ರಾಮಾ ಸರಣಿ ʻಹಾರ್ಟ್‌ಬೀಟ್ʼ ಈಗ ಕನ್ನಡದಲ್ಲಿ ವೀಕ್ಷಣೆಗೆ ಲಭ್ಯವಿದೆ. ನವೆಂಬರ್ 28ರಿಂದ ʻಹಾರ್ಟ್‌ಬೀಟ್ʼ ಸರಣಿಯ 100 ಎಪಿಸೋಡ್‌ಗಳು ವೀಕ್ಷಣೆಗೆ ಲಭ್ಯವಿದೆ. ಈ ಭವ್ಯ ಸೀಸನ್‌ನಲ್ಲಿ ವೈದ್ಯಕೀಯ ಲೋಕದ ಸವಾಲುಗಳು, ಸಂಬಂಧಗಳ ಸಂಘರ್ಷಗಳು ಮತ್ತು ಮಾನವೀಯ ಭಾವನೆಗಳ ರೋಚಕ ಸಂಯೋಜನೆಯನ್ನು ಪ್ರೇಕ್ಷಕರಿಗೆ ಆವರಿಸುವಂತೆ ತರಲಾಗಿದೆ.
ʻಹಾರ್ಟ್‌ಬೀಟ್ʼಟಿವಿ ಸರಣಿಗೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಐಎಂಡಿಬಿಯಿಂದದ 8.6 ರೇಟಿಂಗ್ ಪಡೆದುಕೊಂಡಿದೆ. ಇದು ಈ ಸರಣಿಯ ಗುಣಮಟ್ಟ ಮತ್ತು ಭಾವುಕ ಕಥನಕ್ಕೆ ಸಾಕ್ಷಿ ಆಗಿದೆ. ಅಂದಹಾಗೆ, ಕಳೆದ ವರ್ಷ ʻಹಾರ್ಟ್‌ಬೀಟ್ʼ ಸೀಸನ್ 1 ರಿಲೀಸ್ ಆಗಿತ್ತು. ಅಲ್ಲಿಯೂ 100 ಸಂಚಿಕೆಗಳು ಇದ್ದವು. ಈ ವರ್ಷ ಸೀಸನ್ 2 ರಿಲೀಸ್ ಆಗಿದ್ದು, ಇಲ್ಲಿಯೂ 100 ಸಂಚಿಕೆಗಳು ಇವೆ. ನವೆಂಬರ್ 28ರಿಂದ ಈ ಎಲ್ಲಾ ಸಂಚಿಕೆಗಳನ್ನು ಕನ್ನಡದಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಯಾರೆಲ್ಲಾ ನಟಿಸಿದ್ದಾರೆ?
ಈ ಸರಣಿಯ ಮುಖ್ಯ ಪಾತ್ರದಲ್ಲಿ ದೀಪಾ ಬಾಲು, ಅಮಿತ್ ಭಾರ್ಗವ್, ಅನುಮೋಲ್, ಯೋಗಲಕ್ಷ್ಮೀ, ಚಾರುಕೇಶ್, ಕಾರ್ತಿಕ್ ಕುಮಾರ್ ಮತ್ತು ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸರಣಿಯನ್ನು ದೀಪಕ್ ಸುಂದರರಾಜನ್ ಬರೆದು, ದೀಪಕ್ ಸುಂದರರಾಜನ್, ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ನಿರ್ದೇಶಿಸಿದ್ದಾರೆ.
Reliance Jio: ಈ ಬಾರಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಆನಂದಿಸಿ ಐಪಿಎಲ್
ಅಮೇರಿಕದ ಖ್ಯಾತ ಮೆಡಿಕಲ್ ಡ್ರಾಮಾಗಳಾದ ನ್ಯೂ ಆಮ್ಸ್‌ಟರ್ಡ್ಯಾಮ್ ಮತ್ತು ಗ್ರೇಸ್ ಅನಾಟಮಿ ಶೈಲಿಯನ್ನು ಹೋಲುವ ಈ ಸರಣಿ, ಗಾಲ್ಪಿಕ ಆರ್‌ಕೆ ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್ ಅನ್ನು ಹಿನ್ನಲೆಯಲ್ಲಿ ಇಟ್ಟುಕೊಂಡಿದೆ. ಇಲ್ಲಿ ಸರ್ಜಿಕಲ್ ಇಂಟರ್ನ್‌ಗಳು, ರೆಸಿಡೆಂಟ್‌ಗಳು ಮತ್ತು ಅಟೆಂಡಿಂಗ್ ವೈದ್ಯರ ದಿನನಿತ್ಯದ ವೃತ್ತಿಜೀವನದ ಒತ್ತಡಗಳು ಹಾಗೂ ಅವರ ವೈಯಕ್ತಿಕ ಬದುಕಿನ ಸಂಘರ್ಷಗಳು ನೈಜವಾಗಿ ಮೂಡಿ ಬರುತ್ತವೆ.
ಹಾರ್ಟ್‌ಬೀಟ್ ಸೀಸನ್ 1 ಕಥೆ ಏನು?
ʻಹಾರ್ಟ್‌ಬೀಟ್ʼ ಸರಣಿಯು ರೀನಾ ಎಂಬ ಪ್ರತಿಭಾವಂತ ಯುವ ವೈದ್ಯೆಯ ಕಥೆಯನ್ನು ಹೇಳುತ್ತದೆ. ಜನಪ್ರಿಯ ಜನರಲ್ ಸರ್ಜನ್ ಡಾ. ರಧಿ ಅವರ ದೂರವಾದ ಮಗಳು ಎಂಬುದು ಬಹಿರಂಗವಾದಾಗ, ರೀನಾ ಮತ್ತು ರಧಿಯ ಜೀವನಗಳು ಹೊಸ ತಿರುವನ್ನು ಪಡೆಯುತ್ತವೆ. ಆರ್‌ಕೆ ಹಾಸ್ಪಿಟಲ್‌ನ ಸರ್ಜಿಕಲ್ ರೆಸಿಡೆನ್ಸಿ ಪ್ರೋಗ್ರಾಂಗೆ ಸೇರಿರುವ ರಿನಾ, ತನ್ನ ಸಹ-ಇಂಟರ್ನ್‌ಗಳಾದ ತೇಜು, ನವೀನ್ , ರಾಕಿ, ಗುಣ ಹಾಗೂ ಹಿರಿಯ ರೆಸಿಡೆಂಟ್‌ಗಳಾದ ಅನಿತಾ ಮತ್ತು ರವಿ ಅವರೊಂದಿಗೆ ವೈಯಕ್ತಿಕ-ವೃತ್ತಿಜೀವನದ ಒತ್ತಡಗಳನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಾಳೆ.
ಹಾಸ್ಪಿಟಲ್ ಸ್ಥಾಪಕ ಆರ್‌ಕೆ ಅವರ ಮಗ ಅರ್ಜುನ್, ರಿನಾ ಜೀವನದಲ್ಲಿ ಪ್ರೇಮದ ಹೊಸ ಅಧ್ಯಾಯವನ್ನು ತೆರೆಯುವಲ್ಲಿ ಪ್ರಮುಖ ಪಾತ್ರವಹಿಸ್ತಾನೆ. ಆದರೆ ಭೂತಕಾಲದ ರಹಸ್ಯಗಳು ಬೆಳಕಿಗೆ ಬರುತ್ತಿದ್ದಂತೆ, ಸಂಬಂಧಗಳು, ಕರ್ತವ್ಯಗಳು ಮತ್ತು ಭಾವನೆಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಹಾರ್ಟ್‌ಬೀಟ್ ವೈದ್ಯಕೀಯ ಜಗತ್ತಿನ ಮಾನವೀಯ ಮುಖವನ್ನು ಹಿಡಿದಿಡುವ, ಹೃದಯಕ್ಕೆ ಹತ್ತಿರದ ಕಥೆಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ.