ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salaar- Ceasefire Movie: ಜಿಯೋ ಹಾಟ್‌ಸ್ಟಾರ್‌ನಲ್ಲಿ 366 ದಿನ ಕಳೆದರೂ ಟ್ರೆಂಡಿಂಗ್‌ನಲ್ಲಿದೆ ʼಸಲಾರ್‌- ಸೀಸ್‌ ಫೈರ್‌ʼ ಸಿನಿಮಾ

366 ದಿನಗಳಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ (ಹಿಂದಿನ ಡಿಸ್ನಿ+ ಹಾಟ್‌ಸ್ಟಾರ್) ʼಸಲಾರ್: ಸೀಸ್‌ಫೈರ್ʼ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ನಟಿಸಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ ಇದೀಗ ಒಟಿಟಿಯಲ್ಲಿಯೂ ಅಬ್ಬರಿಸುತ್ತಿದೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ ʼಸಲಾರ್‌ʼ ಚಿತ್ರ

ಪ್ರಭಾಸ್‌.

Profile Siddalinga Swamy Feb 17, 2025 9:47 PM

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್‌ನ ಆ್ಯಕ್ಷನ್‌-ಪ್ಯಾಕ್ಡ್ ಬ್ಲಾಕ್‌ಬಸ್ಟರ್ ತೆಲುಗು ಚಿತ್ರ ʼಸಲಾರ್; ಸೀಸ್‌ಫೈರ್ʼ (Salaar- Ceasefire Movie)‌ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 366 ದಿನಗಳಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ (ಹಿಂದಿನ ಡಿಸ್ನಿ+ ಹಾಟ್‌ಸ್ಟಾರ್) ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ನಟಿಸಿದ್ದಾರೆ. ಮೈ ನವಿರೇಳಿಸುವ ಸಾಹಸ ದೃಶ್ಯಗಳಿಂದಲೇ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದ ಈ ಸಿನಿಮಾ, ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿ ಭಾನುವಾರಕ್ಕೆ ಸರಿಯಾಗಿ ಒಂದು ವರ್ಷವಾಗಿದೆ. ಅಂದಿನಿಂದಲೂ ಸ್ಟ್ರೀಮಿಂಗ್‌ ವೇದಿಕೆಯಲ್ಲಿ ʼಸಲಾರ್‌ʼ ಸಿನಿಮಾ ತನ್ನ ಪ್ರಾಬಲ್ಯ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ವಿಶೇಷ ವಿಡಿಯೊ ಬಿಡುಗಡೆ ಮಾಡಿದೆ. ಜತೆಗೆ ಸಲಾರ್‌ ಚಿತ್ರದ ಆಯ್ದ ಕಟ್ಟಾ 366 ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನೂ ನೀಡಿದೆ ಹೊಂಬಾಳೆ ಫಿಲಂಸ್‌.

ಈ ಬಗ್ಗೆ ಪೋಸ್ಟ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌, #ಸಲಾರ್ ಬಿರುಗಾಳಿ ಮುಂದುವರಿದಿದೆ... ಒಂದು ವರ್ಷದ ನಂತರವೂ @JioHotstarನಲ್ಲಿ ಬೆಂಕಿ ಇನ್ನೂ ಉರಿಯುತ್ತಿದೆ. ಮುಂದಿನ ಅಧ್ಯಾಯ ತೆರೆದುಕೊಳ್ಳುವವರೆಗೆ. ಸಲಾರ್ ಚೈತನ್ಯವನ್ನು ಜೀವಂತವಾಗಿರಿಸಿಕೊಳ್ಳಿ! ಎಂದಿದೆ. ಇದರ ಜತೆಗೆ ನಟ ಪ್ರಭಾಸ್‌ ಈ ಖುಷಿಯ ಬಗ್ಗೆ ಮಾತನಾಡಿದ್ದಾರೆ. ʼಜಿಯೋ ಹಾಟ್‌ಸ್ಟಾರ್‌ನಲ್ಲಿ ʼಸಲಾರ್‌ʼಗೆ ನೀವು ತೋರಿದ ಪ್ರೀತಿ ಖುಷಿ ನೀಡಿದೆ. ಕಾನ್ಸಾರ್‌ಗೆ ಶೀಘ್ರದಲ್ಲಿ ಮತ್ತೆ ಕಾಲಿಡೋಣʼ ಎಂದಿದ್ದಾರೆ.



ಈ ಸುದ್ದಿಯನ್ನೂ ಓದಿ | Star Fashion Designer Outfit 2025: ಲಕ್ಷ್ಮಿ ಕೃಷ್ಣ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ಕಾಜೋಲ್ ತಂಗಿ ತನಿಷಾ ಮುಖರ್ಜಿ

ಇದು ಕೇವಲ ಆರಂಭ - ʼಸಲಾರ್ 2ʼಗಾಗಿ ತಯಾರಾಗಿ. ಅಲ್ಲಿ ದಂತಕಥೆ ಮುಂದುವರಿಯುತ್ತದೆ. ಆ್ಯಕ್ಷನ್‌ ತೀವ್ರಗೊಳ್ಳುತ್ತದೆ ಮತ್ತು ಸಾಹಸಗಾಥೆ ಇನ್ನೂ ಹೆಚ್ಚಿನ ಎತ್ತರವನ್ನು ತಲುಪುತ್ತದೆ. ಮುಂದಿನ ಅಧ್ಯಾಯವು ಹಿಂದೆಂದೂ ಕಾಣದ ಮಿತಿಗಳನ್ನು ಮೀರಿದ ಸಿನಿಮೀಯ ಅನುಭವವನ್ನು ನೀಡುತ್ತದೆ ಎಂದಿದೆ ಹೊಂಬಾಳೆ ಫಿಲ್ಮ್ಸ್‌.