Dhurandhar - The Revenge: ʻನಾನು ಪ್ರಧಾನಿ ಮೋದಿಯ ಹೆಮ್ಮೆಯ ಅಂಧ ಭಕ್ತೆʼ ಎಂದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ
ನಟಿ ರೇಣು ದೇಸಾಯಿ ಅವರು 'ಧುರಂಧರ್ 2' ಸಿನಿಮಾ ನೋಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಧುರಂಧರ್ 2 ಚಿತ್ರದ ಒಂದು ದೃಶ್ಯವನ್ನು ಹಂಚಿಕೊಂಡಿರುವ ಅವರು, "ನಾನು ಬಿಜೆಪಿ ಮತ್ತು ನಮ್ಮ ಅದ್ಭುತ ಪ್ರಧಾನಿ ಮೋದಿ ಅವರ ಹೆಮ್ಮೆಯ ಅಂಧ ಭಕ್ತೆ" ಎಂದು ಬರೆದುಕೊಂಡಿದ್ದಾರೆ.
-
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2: ದಿ ರಿವೆಂಜ್’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಟ್ಟದ ಗಳಿಕೆ ಮಾಡುತ್ತಿದೆ. ಬಿಡುಗಡೆಯಾದ ಕೇವಲ 4 ದಿನಗಳಲ್ಲಿ ಜಗತ್ತಿನಾದ್ಯಂತ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದ್ದು, ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಹಲವು ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹೊಗಳಿ ಬರೆಯುತ್ತಿದ್ದಾರೆ. ಸದ್ಯ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ನಟಿ ರೇಣು ದೇಸಾಯಿ ಕೂಡ ಈ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಸಿನಿಮಾಗಳನ್ನು ನೋಡಿ ಪಾಠ ಕಲಿಯಲಿ
ಸ್ಪೈ ಆಕ್ಷನ್ ಥ್ರಿಲ್ಲರ್ ಆಗಿರುವ 'ಧುರಂಧರ್ 2' ಚಿತ್ರದ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಶಂಸೆ ವ್ಯಕ್ತಪಡಿಸಿರುವ ರೇಣು ದೇಸಾಯಿ, "ನಮ್ಮ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಮೇಲೆ ನಿಮಗೆ ಕನಿಷ್ಠ ಗೌರವವಿದ್ದರೂ, ಅವರ ತ್ಯಾಗದಿಂದಲೇ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಿಂದ ನಿದ್ರಿಸುತ್ತಿದ್ದೇವೆ ಎಂಬ ಅರಿವಿದ್ದರೂ ನೀವು ಧುರಂಧರ್ 1 ಮತ್ತು 2 ಸಿನಿಮಾಗಳನ್ನು ನೋಡಲೇಬೇಕು. ಸ್ವಂತ ದೇಶದ ಬಗ್ಗೆ ಅರ್ಥವಿಲ್ಲದಂತೆ ಮಾತನಾಡುವವರು ಈ ಸಿನಿಮಾಗಳನ್ನು ನೋಡಿ ಪಾಠ ಕಲಿಯಲಿ" ಎಂದಿದ್ದಾರೆ. ಈ ಮೂಲಕ ಧುರಂಧರ್ 2 ಪ್ರೊಪಗಂಡ ಸಿನಿಮಾ ಎಂದವರ ವಿರುದ್ಧ ಕಿಡಿಕಾರಿದ್ದಾರೆ.
Dhurandhar 2 Review: ಧುರಂಧರ್ ಯಾರು? ಸಿನಿಮಾ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ
ಯುದ್ಧಭೂಮಿ ನಿಮ್ಮನ್ನು ಕರೆಯುತ್ತಿದೆ
ಧುರಂಧರ್ 2 ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಭಗವದ್ಗೀತೆಯ ಶ್ಲೋಕಗಳನ್ನು ಹಂಚಿಕೊಂಡಿದ್ದಾರೆ. "ಧರ್ಮವನ್ನು ಪಾಲಿಸುವುದು ನಿಮ್ಮ ಕರ್ತವ್ಯ, ಪ್ರತಿಫಲವನ್ನು ನಿರೀಕ್ಷಿಸಬೇಡಿ. ಯುದ್ಧಭೂಮಿ ನಿಮ್ಮನ್ನು ಕರೆಯುತ್ತಿದೆ, ಧೈರ್ಯದಿಂದ ಮುನ್ನುಗ್ಗಿ" ಎಂದು ಬರೆದುಕೊಂಡಿದ್ದಾರೆ ರೇಣು ದೇಸಾಯಿ.
Dhurandhar 2 Review: ಆದಿತ್ಯ ಧರ್ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!
ನಾನು ಮೋದಿ ಅವರ ಅಂಧ ಭಕ್ತೆ
ನರೇಂದ್ರ ಮೋದಿ ಅವರ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಆ ಸಿನಿಮಾದ ಒಂದು ದೃಶ್ಯವನ್ನು ಹಂಚಿಕೊಳ್ಳುತ್ತಾ ಪ್ರಧಾನಿ ಮೇಲಿರುವ ಅವರ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಭೂಗತ ಲೋಕದ ಪಾತಕಿ ದಾವುದ್ ಇಬ್ರಾಹಿಂ ಪಾತ್ರವು, "ಈ ಚಾಯ್‌ವಾಲಾ ಭಾರತಕ್ಕೆ ಬಂದಾಗಿನಿಂದ ನಮ್ಮ ಜನರಲ್ಲಿ ಭಯ ಹೆಚ್ಚಾಗಿದೆ" ಎಂದು ಹೇಳುವ ಡೈಲಾಗ್ ಇರುವ ರೀಲ್ ಅನ್ನು ರೇಣು ಪೋಸ್ಟ್ ಮಾಡಿದ್ದಾರೆ.
“ಚಾಯ್‌ವಾಲಾ ಜಲ್ವಾ... ನಾನು ಬಿಜೆಪಿ ಮತ್ತು ನಮ್ಮ ಅದ್ಭುತ ಪ್ರಧಾನಿ ಮೋದಿ ಅವರ ಹೆಮ್ಮೆಯ ಅಂಧ ಭಕ್ತೆ" ಎಂದು ರೇಣು ದೇಸಾಯಿ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ಸಂದರ್ಶನವೊಂದರಲ್ಲಿ, "ನನಗೆ ಬಿಜೆಪಿ ಎಂದರೆ ಇಷ್ಟ.. ನಾನು ಮೋದಿ ಭಕ್ತೆ" ಎಂದು ರೇಣು ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ, "ನಾನು ಅಂಧ ಭಕ್ತೆ" ಎಂಬ ಮಾತುಗಳನ್ನು ಹೇಳಿದ್ದಾರೆ.