ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MI vs RR: ಐಪಿಎಲ್‌ನಲ್ಲಿ ಚೊಚ್ಚಲ ಕ್ಯಾಚ್‌ ಹಿಡಿದು ಇತಿಹಾಸ ನಿರ್ಮಿಸಿದ ಸೂರ್ಯವಂಶಿ

IPL 2026: ಹಾಲಿ ಆವೃತ್ತಿಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದ ಸೂರ್ಯಕುಮಾರ್‌ ಯಾದವ್‌ ಕೊನೆಯ ಲೀಗ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. ವಿಲ್‌ ಜಾಕ್ಸ್‌(33) ವಿಕೆಟ್‌ ಪತನದ ಬಳಿಕ ಸೂರ್ಯ ಜತೆಗೂಡಿದ ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

ಐಪಿಎಲ್‌ನಲ್ಲಿ ಚೊಚ್ಚಲ ಕ್ಯಾಚ್‌ ಹಿಡಿದು ಇತಿಹಾಸ ನಿರ್ಮಿಸಿದ ಸೂರ್ಯವಂಶಿ

Vaibhav Sooryavanshi -

Abhilash BC
Abhilash BC May 25, 2026 7:35 AM

ಮುಂಬಯಿ, ಮೇ 25: ರಾಜಸ್ಥಾನ್ ರಾಯಲ್ಸ್(MI vs RR) ತಂಡವು ಭಾನುವಾರ ನಡೆದಿದ್ದ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) 2026ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 30 ರನ್‌ ಅಂತರದ ಗೆಲುವು ಸಾಧಿಸುವ ಮೂಲಕ ನಾಕೌಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತು. ಈ ಪಂದ್ಯದಲ್ಲಿ 15 ವರ್ಷದ ವೈಭವ್‌ ಸೂರ್ಯವಂಶಿ(Vaibhav Sooryavanshi) ಏಕೈಕ ಕ್ಯಾಚ್‌ ಹಿಡಿದರೂ ಐಪಿಎಲ್‌ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ರಯಾನ್ ರಿಕಲ್ಟನ್ ಅವರ ಕ್ಯಾಚ್‌ ಹಿಡಿದ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲಿ 15 ವರ್ಷ ಮತ್ತು 58 ದಿನಗಳ ವಯಸ್ಸಿನಲ್ಲಿ ಕ್ಯಾಚ್ ಹಿಡಿದ ಅತ್ಯಂತ ಕಿರಿಯ ಆಟಗಾರರಾದರು. ಇದು ಅವರ ಮೊದಲ ಕ್ಯಾಚ್‌ ಕೂಡ ಆಗಿದೆ.

ಐಪಿಎಲ್‌ನಲ್ಲಿ ಕ್ಯಾಚ್ ಹಿಡಿದ ಅತ್ಯಂತ ಕಿರಿಯ ಫೀಲ್ಡರ್‌ಗಳು

15y 58d - ವೈಭವ್ ಸೂರ್ಯವಂಶಿ (RR) ವಿರುದ್ಧ MI, 2026*

17y 16d - ಮುಜೀಬ್ ಉರ್ ರೆಹಮಾನ್ (PBKS) vs RCB, 2018

17y 163d - ರಿಯಾನ್ ಪರಾಗ್ (RR) ವಿರುದ್ಧ DC, 2019

17y 181d - ಪ್ರದೀಪ್ ಸಾಂಗ್ವಾನ್ (DC) ವಿರುದ್ಧ MI, 2008

17y 201d - ವಾಷಿಂಗ್ಟನ್ ಸುಂದರ್ (RPS) ವಿರುದ್ಧ MI, 2017

ಪಂದ್ಯದ ಬಗ್ಗೆ ಹೇಳುವುದಾದದರೆ, ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌, ಕೆಲ ಕ್ರಮಾಂಕದಲ್ಲಿ ಬೌಲರ್‌ಗಳ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ 8 ವಿಕೆಟ್‌ಗೆ 205 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಮುಂಬೈ 9 ವಿಕೆಟ್‌ಗೆ 175 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಮುಂಬೈ ಇಂಡಿಯನ್ಸ್‌ ತಂಡ ಆರಂಭಿಕ ಹಂತದಲ್ಲಿ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದರೂ ಆ ಬಳಿಕ ಲಯ ತಪ್ಪಿದರು.

ರಾಹಲ್‌ ಅರ್ಧಶತಕ; ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಹಾಲಿ ಆವೃತ್ತಿಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದ ಸೂರ್ಯಕುಮಾರ್‌ ಯಾದವ್‌ ಕೊನೆಯ ಲೀಗ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. ವಿಲ್‌ ಜಾಕ್ಸ್‌(33) ವಿಕೆಟ್‌ ಪತನದ ಬಳಿಕ ಸೂರ್ಯ ಜತೆಗೂಡಿದ ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. 34 ರನ್‌ ಗಳಿಸಿದ ವೇಳೆ ಜೋಫ್ರ ಆರ್ಚರ್‌ ವಿಕೆಟ್‌ ಕಿತ್ತು ಪೆವಿಲಿಯನ್‌ಗೆ ಅಟ್ಟಿದರು. ಅಂತಿವಾಗಿ ಸೂರ್ಯಕುಮಾರ್‌ 4 ಸಿಕ್ಸರ್‌ ಮತ್ತು 3 ಬೌಂಡರಿ ಸಿಡಿಸಿ 60 ರನ್‌ ಬಾರಿಸಿದರು.