‘ಧುರಂಧರ್ʼ ಸಿನಿಮಾ (Dhurandhar Movie) ಬಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ಚಿತ್ರದ ವಿಲನ್ ಪಾತ್ರಗಳು ಸಖತ್ ಹೈಲೈಟ್ ಆಗಿವೆ. ನಟರಾದ ಅಕ್ಷಯ್ ಖನ್ನಾ (Akshaye Khanna) ಮತ್ತು ಅರ್ಜುನ್ ರಾಮ್ಪಾಲ್ ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ರಿಯಲ್ ಗ್ಯಾಂಗ್ಸ್ಟರ್ ರೆಹಮಾನ್ ಡಕಾಯಿತ್ ಎಂಬ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ. ಬಹಳ ನೈಜವಾಗಿ ಅವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಎಂಟ್ರಿ ಹಾಡಿನ ಮೂಲಕ ಆಗುತ್ತದೆ. ಆ ಹಾಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Social Media) ಮತ್ತು ಎಲ್ಲರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೀಗ ಪುನೀತ್ ರಾಜ್‌ಕುಮಾರ್ ಹೀಗೆ ಎಂಟ್ರಿ ಪಡೆದುಕೊಂಡರೆ ಹೇಗಿರತ್ತೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಅಕ್ಷಯ್ ಖನ್ನಾ ಹಿಟ್ ಟ್ರೆಂಡಿಂಗ್ ಹಾಡು
ಧುರಂದರ್ ಚಿತ್ರದ ರಿಕ್ರಿಯೇಶನ್ (AI) ಅಕ್ಷಯ್ ಖನ್ನಾ ಹಿಟ್ ಟ್ರೆಂಡಿಂಗ್ ಹಾಡು ಅಂತ ಪುನೀತ್ ಅವರ ವಿಡಿಯೋ ವೈರಲ್ ಆಗಿದೆ. ಅಲ್ಲು ರಘು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಕಂಡು ಫ್ಯಾನ್ಸ್ ಮರೆಯಲಾಗದ ಮಾಣಿಕ್ಯ ಅಂತ ಕಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ: Narendra Modi: 'ಧುರಂಧರ್' ಸ್ಟೈಲ್‌ನಲ್ಲಿ ಮೋದಿ; ಪುಟಿನ್, ಟ್ರಂಪ್ ಜೊತೆಗಿನ ವಿಡಿಯೋ ಸಖತ್ ವೈರಲ್
ಆದಿತ್ಯ ಧರ್ ನಿರ್ದೇಶನದ ಧುರಂಧರ್ ಚಿತ್ರದ ಮೊದಲ ಭಾಗದ ಕೊನೆಯಲ್ಲಿ, ಎರಡನೇ ಭಾಗದ ಘೋಷಣೆ ಮಾಡಲಾಗಿದೆ. ವರದಿಗಳ ಪ್ರಕಾರ, ಧುರಂಧರ್ ಚಿತ್ರದ ಎರಡನೇ ಭಾಗವು ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರೇಕ್ಷಕರು ಕೂಡ ಇದನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ.‘ಧುರಂಧರ್’ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರು ರೆಹಮಾನ್ ದಕೈತ್ ಪಾತ್ರದಲ್ಲಿ (ನೆಗೆಟಿವ್) ಕಾಣಿಸಿಕೊಂಡಿದ್ದಾರೆ. ಖಳನಾಯಕನಾಗಿದ್ದರೂ, ಅವರ ಪಾತ್ರ ಮತ್ತು ಕೆಲಸವನ್ನು ಹೆಚ್ಚು ಪ್ರಶಂಸಿಸಲಾಗುತ್ತಿದೆ ಮತ್ತು ಇದು ಚಿತ್ರದ ದೊಡ್ಡ ಹೈಲೈಟ್ ಆಗಿದೆ. ‘ಛಾವಾ’ ಚಿತ್ರದಲ್ಲಿ ಅಕ್ಷಯ್ ಔರಂಗಜೇಬ್ ಪಾತ್ರದಲ್ಲಿ ಮಿಂಚಿದ್ದರು. ಈಗ ‘ಧುರಂಧರ್’ ಚಿತ್ರದಲ್ಲಿ ನಕಾರಾತ್ಮಕ ಪಾತ್ರವನ್ನು ನಿರ್ವಹಿಸಿದ ಅಕ್ಷಯ್ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.
ವೈರಲ್ ವಿಡಿಯೋ
ಇದನ್ನೂ ಓದಿ: Bigg Boss Kannada 12: ಸೀಕ್ರೆಟ್ ರೂಮ್ ಬಗ್ಗೆ ರಘುಗೆ ಸಿಕ್ತಾ ಸುಳಿವು? ಗಿಲ್ಲಿ ಬಳಿ ಹೇಳಿದ್ದೇನು?
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಅವರು ‘ಧುರಂಧರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.2ನೇ ದಿನ 32 ಕೋಟಿ ರೂಪಾಯಿ ಆಯಿತು. 3ನೇ ದಿನ 43 ಕೋಟಿ, 4ನೇ ದಿನ 23.25 ಕೋಟಿ ರೂಪಾಯಿ, 5, 6 ಹಾಗೂ 7ನೇ ದಿನ ತಲಾ 27 ಕೋಟಿ ರೂಪಾಯಿ, 8ನೇ ದಿನ 32.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.ಡೈರೆಕ್ಟರ್ ಆದಿತ್ಯ ಧರ್ ಈ ಚಿತ್ರವನ್ನ ಬರೆದಿದ್ದಾರೆ. ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಶಾಶ್ವತ್ ಸಚ್‌ದೇವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.